ಪಾಟ್ನಾ: ಮೊಬೈಲ್ ಕಂಪನಿಯೊಂದರ (Mobile Company) ಅಧಿಕಾರಿಗಳೆಂದು ಹೇಳಿಕೊಂಡು ಬಂದಿದ್ದ ಕಳ್ಳರ (Thieves) ಗುಂಪೊಂದು 19 ಲಕ್ಷ ರೂ. ಮೌಲ್ಯದ ಮೊಬೈಲ್ ಟವರ್‌ನ್ನು (Mobile Tower) ಕದ್ದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಪಾಟ್ನಾದ ಗಾರ್ಡಾನಿಬಾಗ್ ಪ್ರದೇಶದ ಯಾರ್‍ಪುರದ ರಜಪೂತಾನ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಗುಜರಾತ್‍ನ ಟೆಲಿ ಲಿಂಕ್ ಪ್ರೈವೇಟ್ ಲಿಮಿಟೆಡ್ (ಜಿಟಿಪಿಎಲ್) ಕಂಪನಿಯು ಲಾಲನ್ ಸಿಂಗ್ ಎಂಬಾತನ ಮನೆಯ ಟೆರೇಸ್ ಮೇಲೆ ಸುಮಾರು 15 ವರ್ಷಗಳ ಹಿಂದೆಯೇ ಮೊಬೈಲ್ ಟವರ್ ಅನ್ನು ಸ್ಥಾಪಿಸಿದೆ. ಈ ಟವರ್ 19 ಲಕ್ಷ ರೂ. ಮೌಲ್ಯದ್ದಾಗಿತ್ತು.
Advertisement
Advertisement
ಆದರೆ ಕೆಲ ದಿನಗಳ ಹಿಂದೆ ಲಾಲನ್ ಸಿಂಗ್ ಮನೆಗೆ ಮೊಬೈಲ್ ಕಂಪನಿಯ ಅಧಿಕಾರಿಗಳೆಂದು ಹೇಳಿಕೊಂಡು ಕೆಲವರು ಬಂದಿದ್ದಾರೆ. ಈ ವೇಳೆ ಆ ಖದೀಮರು ಇಲ್ಲಿ ಟವರ್ ಹಾಕಿರುವುದು ಕಂಪನಿಗೆ ಬಹಳ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಟವರ್ ತೆಗೆದು ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಲಾಲನ್ ಸಿಂಗ್ ಅವರ ಐಡಿ ಕಾರ್ಡ್‍ಗಳನ್ನು ಪರಿಶೀಲಿಸದೇ ಒಪ್ಪಿಕೊಂಡಿದ್ದಾನೆ.
Advertisement
ಇದಾದ ಬಳಿಕ 25 ಮಂದಿ ಬಂದು ಟವರ್‌ನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಂಡಿದ್ದಾರೆ. ಸುಮಾರು 3 ದಿನಗಳ ಕಾಲ ತೆರವು ಕಾರ್ಯ ನಡೆದಿದ್ದು, ಗ್ಯಾಸ್ ಕಟರ್ ಯಂತ್ರದ ಮೂಲಕ ಮೊಬೈಲ್ ಟವರ್‌ನ್ನು ಕತ್ತರಿಸಿದ್ದಾರೆ. ಅದಾದ ಬಳಿಕ ಕತ್ತರಿಸಿದ್ದ ಟವರ್‌ನ ಎಲ್ಲಾ ಭಾಗಗಳನ್ನು ಟ್ರಕ್‍ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಡಿ.1 ರಿಂದ ಸುರತ್ಕಲ್ ಬಂದ್, ಹೆಜಮಾಡಿ ಟೋಲ್ ಜೊತೆ ವಿಲೀನ – ದರ ಎಷ್ಟು?
Advertisement
3 ದಿನಗಳ ಕಾಲ 15 ವರ್ಷಗಳಿಂದ ಇದ್ದ ಮೊಬೈಲ್ ಟವರ್‌ನ್ನು ಕಳ್ಳತನ ಮಾಡಿದ್ದರೂ ಮೊಬೈಲ್ ಸೇವಾ ಪೂರೈಕೆದಾರ ಜಿಟಿಪಿಡಲ್‍ಗೆ ಸ್ವಲ್ಪವೂ ಅನುಮಾನ ಬಂದಿರಲಿಲ್ಲ. ಆದರೆ ಕಂಪನಿಯ ಅಧಿಕಾರಿಗಳು ನಿಷ್ಕ್ರಿಯಗೊಂಡ ಎಲ್ಲಾ ಮೊಬೈಲ್ ಟವರ್‍ಗಳನ್ನು ಪರಿಶೀಲಿಸುವ ವೇಳೆ, ಗಾರ್ಡಾನಿಬಾಗ್‍ನಲ್ಲಿರುವ ಮೊಬೈಲ್ ಟವರ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಘಟನೆ ಬೆಳಕಿಗೆ ಬಂದ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ