ಬೆಂಗಳೂರು: ಮೊಬೈಲ್ ಟಾಯ್ಲೆಟ್ ಹೆಸರಲ್ಲಿ ಅಧಿಕಾರಿಗಳು ಅರ್ಧ ಕೋಟಿ ಗುಳುಂ ಮಾಡಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರೈತರ ಹೋರಾಟಕ್ಕೆ ಒದಗಿಸಲಾಗಿದ್ದ ಮೊಬೈಲ್ ಟಾಯ್ಲೆಟ್ ನಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. 2016ರ ನವೆಂಬರ್ 21ರಿಂದ ಡಿಸೆಂಬರ್ 3ರವರೆಗೆ ಒಟ್ಟು 12 ದಿನ ಬೆಳಗಾವಿಯಲ್ಲಿ ಅಧಿವೇಶನ ನಡೆದಿತ್ತು. ಅಧಿವೇಶನದ ಹೊರಗೆ ರೈತರು ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರಿಗೆ 100 ಮೊಬೈಲ್ ಶೌಚಾಲಯ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಬಿಲ್ ಮಾಡಿಸಿದ್ದಾರೆ. ಅಂದು ವಿಧಾನಸಭೆ ಸಚಿವಾಲಯ ಬೆಸ್ಟ್ ಸ್ಯಾನಿಟೇಶನ್ & ಪಂಪರ್ಸ್ ನಿಂದ ಮೊಬೈಲ್ ಟಾಯ್ಲೆಟ್ ಗಳನ್ನು ಬಾಡಿಗೆಗೆ ಪಡೆದುಕೊಂಡಿತ್ತು.
Advertisement
ಅಧಿವೇಶನದ ವೇಳೆ ಮೂರು ಮತ್ತೊಂದು ಎಂಬಂತೆ ಕೆಲವು ಟಾಯ್ಲೆಟ್‍ಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ ಅಧಿಕಾರಿಗಳು 100 ಶೌಚಾಲಯಗಳಿಗೆ 51 ಲಕ್ಷದ 5 ಸಾವಿರದ 310 ರೂಪಾಯಿಯ ಬಿಲ್ ಮಾಡಿಸಿದ್ದಾರೆ. ಸ್ವಂತಕ್ಕೆ ಖರೀದಿ ಮಾಡಿದ್ರೆ ಅದೇ ಹಣದಲ್ಲಿ 50 ರಿಂದ 60 ಟಾಯ್ಲೆಟ್‍ಗಳು ಬರುತ್ತಿದ್ದವು. ಆರ್‍ಟಿಐ ಅರ್ಜಿ ಹಾಕಿದ್ರೆ ವಿಧಾನಸಭೆ ಸಚಿವಾಲಯ ಒಂದು ವರ್ಷದವರೆಗೂ ಸತಾಯಿಸಿದೆ. ಕೊನೆಗೆ ಮಾಹಿತಿ ಆಯೋಗದಿಂದ ದಂಡ ಕಟ್ಟುವ ಎಚ್ಚರಿಕೆ ನೀಡಿದ ಮೇಲೆ ಮಾಹಿತಿ ನೀಡಿದೆ ಎಂದು ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಹೇಳಿದ್ದಾರೆ.
Advertisement
Advertisement
ಒಂದು ಮೊಬೈಲ್ ಟಾಯ್ಲೆಟ್ ಗೆ 1,300 ರೂಪಾಯಿ ಮಾತ್ರ ಎಂಬುವುದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ತಿಳಿದು ಬಂದಿದೆ. ಆದ್ರೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಬಿಲ್ ಮಾಡಿದ್ದು ಒಂದು ಮೊಬೈಲ್ ಟಾಯ್ಲೆಟ್‍ಗೆ 2,350 ರೂಪಾಯಿ. ನಮಗೂ 20 ಟಾಯ್ಲೆಟ್ ಬೇಕು ಅಂತ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ‘ಬೆಸ್ಟ್ ಸ್ಯಾನಿಟೇಶನ್ & ಪಂಪರ್ಸ್’ ಒಂದು ಟಾಯ್ಲೆಟ್‍ಗೆ 1,300 ರೂ. ಎಂದು ಒಪ್ಪಿಕೊಂಡಿದೆ.
Advertisement
ರಿಯಾಲಿಟಿ ಚೆಕ್:
ಪಬ್ಲಿಕ್ ಟಿವಿ: ಹಲೋ
ಬೆಸ್ಟ್ ಸ್ಯಾನಿಟೇಶನ್: ಹೇಳಿ ಸರ್
ಪಬ್ಲಿಕ್ ಟಿವಿ: ಬೆಸ್ಟ್ ಸ್ಯಾನಿಟೇಶನ್ ಅಂಡ್ ಪಂಪರ್ಸ್ ಅಲ್ವಾ..?
ಬೆಸ್ಟ್ ಸ್ಯಾನಿಟೇಶನ್: ಹೌದು ಸರ್
ಪಬ್ಲಿಕ್ ಟಿವಿ: ಎಷ್ಟು ಚಾರ್ಜ್ ಮಾಡ್ತೀರಾ ಮೇಡಂ ನಮ್ದು ಒಂದ್ ಪ್ರೋಗ್ರಾಂಗೆ ಇಪ್ಪತ್ತು ಟಾಯ್ಲೆಟ್ ಬೇಕಿತ್ತು. ಇಲ್ಲೆ ಬೆಂಗಳೂರಲ್ಲೇ
ಬೆಸ್ಟ್ ಸ್ಯಾನಿಟೇಶನ್: ಸರ್ ಪ್ರೋಗ್ರಾಂ ಇರೋದು ಯಾವಾಗ?
ಪಬ್ಲಿಕ್ ಟಿವಿ: ನೆಕ್ಸ್ಟ್ ಮಂತ್ ಇರೋದು ಮೇಡಂ. ಆಗಸ್ಟ್ 17
ಬೆಸ್ಟ್ ಸ್ಯಾನಿಟೇಶನ್: ಎಷ್ಟು ಯುನಿಟ್, ಎಲ್ಲಿ ಲೊಕೇಶನ್..?
ಪಬ್ಲಿಕ್ ಟಿವಿ: ಪ್ಯಾಲೇಸ್ ಗ್ರೌಂಡ್ ಮೇಡಂ.. ಎಷ್ಟಾಗತ್ತೆ ಒಂದಕ್ಕೆ, ಪರ್ ಡೇ ಲೆಕ್ಕ ತಾನೇ ನಿಮ್ದು. 2 ಡೇಸ್ ಬೇಕಿತ್ತು.
ಬೆಸ್ಟ್ ಸ್ಯಾನಿಟೇಶನ್: ಒಂದು ನಿಮಿಷ ಸರ್
ಬೆಸ್ಟ್ ಸ್ಯಾನಿಟೇಶನ್: ಹಲೋ..
ಪಬ್ಲಿಕ್ ಟಿವಿ: ಹಲೋ..
ಬೆಸ್ಟ್ ಸ್ಯಾನಿಟೇಶನ್: ಹಾ ಸರ್ ಹೇಳಿ..
ಪಬ್ಲಿಕ್ ಟಿವಿ: ಎಷ್ಟಾಗತ್ತೆ ಸರ್ ನಮ್ಗೆ ಎರಡು ದಿನಕ್ಕೆ ಬೇಕಿತ್ತು ಯುನಿಟ್.
ಬೆಸ್ಟ್ ಸ್ಯಾನಿಟೇಶನ್: ಎಷ್ಟು ಟಾಯ್ಲೆಟ್ ಬೇಕಿದೆ
ಪಬ್ಲಿಕ್ ಟಿವಿ: ನಮ್ಗೆ 20 ಬೇಕು ಸರ್
ಬೆಸ್ಟ್ ಸ್ಯಾನಿಟೇಶನ್: ಇಂಡಿಯನ್ನಾ ವೆಸ್ಟ್ರನ್ ಆ..?
ಪಬ್ಲಿಕ್ ಟಿವಿ: ಇಂಡಿಯನ್… ಇಂಡಿಯನ್..
ಬೆಸ್ಟ್ ಸ್ಯಾನಿಟೇಶನ್: ಇಂಡಿಯನ್ನಾ.. ಏನ್ ಸರ್ ಪರ್ಪಸ್ಸು
ಪಬ್ಲಿಕ್ ಟಿವಿ: ಒಂದ್ ಪ್ರೋಗ್ರಾಂ ಇತ್ತು ಎಕ್ಸಿಬಿಷನ್ ಶೋಸ ಹಾಗಾಗಿ
ಬೆಸ್ಟ್ ಸ್ಯಾನಿಟೇಶನ್: ಡೇಟ್ ಸರ್..
ಪಬ್ಲಿಕ್ ಟಿವಿ: ಆಗಸ್ಟ್ 17 ಪ್ಯಾಲೇಸ್ ಗ್ರೌಂಡ್ ಸರ್
ಬೆಸ್ಟ್ ಸ್ಯಾನಿಟೇಶನ್: 17, 18 ಎರಡು ದಿನಾನ
ಪಬ್ಲಿಕ್ ಟಿವಿ: ಹೌದು ಹೌದು..
ಬೆಸ್ಟ್ ಸ್ಯಾನಿಟೇಶನ್: ಓಕೆ. ಯಾವ್ ತರದ್ದು ಬೇಕು ಸರ್.. ಕನೆಕ್ಷನ್ ಕೊಡೋದಾ..? ಅಥವಾ ಕೆಮಿಕಲ್ ಟಾಯ್ಲೆಟ್ಸ್ ಬೇಕಾ..?
ಪಬ್ಲಿಕ್ ಟಿವಿ: ಕೆಮಿಕಲ್ ಟಾಯ್ಲೆಟ್..
ಬೆಸ್ಟ್ ಸ್ಯಾನಿಟೇಶನ್: ಮಾಡ್ಬೋದು ಸರ್ ಏನ್ ತೊಂದರೆ ಇಲ್ಲ.
ಪಬ್ಲಿಕ್ ಟಿವಿ: ಎಷ್ಟು ಪರ್ ಡೇ..
ಬೆಸ್ಟ್ ಸ್ಯಾನಿಟೇಶನ್: ಪರ್ ಡೇ, ಪರ್ ಟಾಯ್ಲೆಟ್ ನಾವು 1300 ಚಾರ್ಜ್ ಮಾಡ್ತೀವಿ.
ಪಬ್ಲಿಕ್ ಟಿವಿ: ಒಂದ್ ದಿನಕ್ಕೆ
ಬೆಸ್ಟ್ ಸ್ಯಾನಿಟೇಶನ್: ಪರ್ ಡೇ ಪರ್ ಯುನಿಟ್ ಪ್ಲಸ್ ಟ್ರಾನ್ಸ್ ಪೋರ್ಟೆಷನ್, ಟ್ಯಾಕ್ಸ್ ಎಕ್ಸ್ ಟ್ರಾ ಆಗುತ್ತೆ.
ಪಬ್ಲಿಕ್ ಟಿವಿ: ಓಕೆ ಓವರಾಲ್ ಸೇರಿ ಹೇಳಿ ಎಷ್ಟು ಆಗಬಹುದು. ಒಂದ್ ದಿನಕ್ಕೆ ಎಷ್ಟು ಆಗತ್ತೆ. ಟ್ರಾನ್ಸ್ ಪೋರ್ಟೇನ್, ಟ್ಯಾಕ್ಸ್ ಎಲ್ಲಾ ಸೇರಿ.
ಬೆಸ್ಟ್ ಸ್ಯಾನಿಟೇಶನ್: ಒಂದ್ 10 ನಿಮಿಷ ನಿಮ್ಗೆ ಲೆಕ್ಕ ಮಾಡಿ ಹೇಳ್ಳಾ ಸರ್.
ಪಬ್ಲಿಕ್ ಟಿವಿ: ಆಯ್ತು ಸರ್ ಆಯ್ತು..
[ಹತ್ತು ನಿಮಿಷಗಳ ನಂತರ]
ಪಬ್ಲಿಕ್ ಟಿವಿ: ಹಲೋ..
ಬೆಸ್ಟ್ ಸ್ಯಾನಿಟೇಶನ್: ಕಿರಣ್ ಸರ್ ಅದು ಕಾಸ್ಟಿಂಗ್ ನಿಮಗೆ ಎಸ್‍ಎಂಎಸ್ ಮಾಡಿದಿನಿ ಈಗ
ಪಬ್ಲಿಕ್ ಟಿವಿ: ಎಸ್‍ಎಂಎಸ್ ಮಾಡಿದಿರ..
ಬೆಸ್ಟ್ ಸ್ಯಾನಿಟೇಶನ್: ಹೌದು ಸರ್..
ಪಬ್ಲಿಕ್ ಟಿವಿ: ನೀವು ಒಂದರದ್ದು ಮಾಡಿದಿರಾ ಇಲ್ಲ ಓವರಾಲ್ ಟೋಟಲ್ 20ರದ್ದು ಮಾಡಿದಿರಾ.?
ಬೆಸ್ಟ್ ಸ್ಯಾನಿಟೇಶನ್: ಟೋಟಲ್ 20 ಮಾಡಿದಿನಿ
ಪಬ್ಲಿಕ್ ಟಿವಿ: ಎಷ್ಟಾಗತ್ತೆ ಸರ್
ಬೆಸ್ಟ್ ಸ್ಯಾನಿಟೇಶನ್: ಒಟ್ಟು 68,000 ಚಿಲ್ಲರೆ ಬರುತ್ತೆ.
ಪಬ್ಲಿಕ್ ಟಿವಿ: ಅಂದ್ರೆ ಒಂದಕ್ಕೆ ನಮಗೆ 1300 ಪ್ಲಸ್ ಟ್ರಾನ್ಸ್ ಪೋರ್ಟೇಷನ್ನು..
ಬೆಸ್ಟ್ ಸ್ಯಾನಿಟೇಶನ್: ಅದೇ ಟಾಯ್ಲೆಟ್ ಕಾಸ್ಟ್, ಟ್ರಾನ್ಸ್ ಪೋರ್ಟೇಷನ್ನು, ಟ್ಯಾಕ್ಸ್ ಮೂರು ಸೇರಿ ಅಷ್ಟು ಬರುತ್ತೆ.
ಪಬ್ಲಿಕ್ ಟಿವಿ: ಒಂದು ಸಿಂಗಲ್ ಯುನಿಟ್‍ಗೆ ಎಷ್ಟಾಗತ್ತೆ ಅಲ್ಲಿಗೆ
ಬೆಸ್ಟ್ ಸ್ಯಾನಿಟೇಶನ್: ಅಲ್ಲಿಗೆ 1700 ಹತ್ರತ್ತ ಆಗುತ್ತೆ ಇನ್ಕ್ಲೂಡಿಂಗ್ ಟ್ಯಾಕ್ಸ್, ಟ್ರಾನ್ಸ್ ಪೋರ್ಟೇಷನ್ ಕಾಸ್ಟ್ ಎಲ್ಲಾ..
ಪಬ್ಲಿಕ್ ಟಿವಿ: ಸಿಂಗಲ್ ಯುನಿಟ್‍ಗೆ..?
ಬೆಸ್ಟ್ ಸ್ಯಾನಿಟೇಶನ್: ಹೌದು ಸರ್..
ಪಬ್ಲಿಕ್ ಟಿವಿ: ಓಕೆ ಸರ್ ಓಕೆ.. ನಿಮ್ಮ ಓನರ್ ಯಾರು ಸರ್..
ಬೆಸ್ಟ್ ಸ್ಯಾನಿಟೇಶನ್: ನಮ್ ಓನರ್ ಸಿಗಲ್ಲ ಬೇಕಾದ್ರೆ ನಾನೇ ಬರ್ತಿನಿ.
ಪಬ್ಲಿಕ್ ಟಿವಿ: ಹೌದಾ..
ಬೆಸ್ಟ್ ಸ್ಯಾನಿಟೇಶನ್: ಎಲ್ಲಿಗೆ ಬರಬೇಕು ಹೇಳಿ ಸರ್..
ಪಬ್ಲಿಕ್ ಟಿವಿ: ಯಾರು ಓನರ್ ಯಾರು.?
ಬೆಸ್ಟ್ ಸ್ಯಾನಿಟೇಶನ್: ಓನರ್ ಆಶಾ ಅಂತ
ಪಬ್ಲಿಕ್ ಟಿವಿ: ಹೌದಾ..?
ಬೆಸ್ಟ್ ಸ್ಯಾನಿಟೇಶನ್: ಹೂಂ
ಪಬ್ಲಿಕ್ ಟಿವಿ: ಅವ್ರ ಹತ್ರ ಮಾತಾಡ್ಬೇಕಿತ್ತು. ಮಾತಾಡಿದ್ರೆ ಚೆನ್ನಾಗಿತ್ತು..
ಬೆಸ್ಟ್ ಸ್ಯಾನಿಟೇಶನ್: ಕರೆಕ್ಟ್ ಸರ್.. ಏನ್ ಬೇಕ್ ಹೇಳಿ ನಾವ್ ಮಾಡಿಕೊಡ್ತಿವಿ.
ಪಬ್ಲಿಕ್ ಟಿವಿ: ನಮ್ದು ಬೇರೆ ಬೇರೆ ಪ್ರೋಗ್ರಾಂ ನಡೀತದೆ. ವರ್ಷಕ್ಕೆ ಒಂದಷ್ಟು ಪ್ರೋಗ್ರಾಂ ಮಾಡ್ತೀವಿ ಆರ್ಗನೈಸಿಂಗ್ ಕಂಪೆನಿ ಅಲ್ವಾ..? ಸೋ ಹಂಗಾಗಿ..
ಬೆಸ್ಟ್ ಸ್ಯಾನಿಟೇಶನ್: ನಿಮ್ದು ವಿಸಿಟಿಂಗ್ ಕಾರ್ಡ್ ವಾಟ್ಸಾಪ್ ಮಾಡಿ ಸರ್ ಬಂದು ಭೇಟಿ ಮಾಡ್ತೀನಿ.
https://youtu.be/wTO0zpXsyoU