ಗದಗ: ತಂದೆ, ತಾಯಿ, ಅಣ್ಣ ಅಥವಾ ತಂಗಿಗೆ ಮಾತನಾಡಿ ಕೊಡುವುದಾಗಿ ವಂಚಿಸಿ ಮೊಬೈಲ್ ಸಮೇತ ಎಸ್ಕೇಪ್ ಆಗುತ್ತಿದ್ದ ಖದೀಮನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಕಲಾಮಂದಿರ ಬಳಿ ನಡೆದಿದೆ.
ನಗರದ ಎಸ್.ಎಂ ಕೃಷ್ಣಾ ಕಾಲೋನಿ ನಿವಾಸಿ ಯಮನೂರ ಗುಳ್ಳೆದಗುಡ್ಡ ಎಂಬ ಕಳ್ಳನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈತ 2 ದಿನದ ಹಿಂದೆ ನಗರದ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಬಳಿಯ ಉರ್ದು ಶಾಲೆಯ ಹತ್ತಿರ ಹೋಟೆಲ್ ವೊಂದರ ಮಹಿಳೆ ಬಳಿ ಮೊಬೈಲ್ ಪಡೆದಿದ್ದಾನೆ. ತಾಯಿ ಫೋನ್ ಮಾಡಬೇಕು, ಸ್ವಲ್ಪ ಫೋನ್ ಕೊಡಿ ಎಂದು ಕೇಳಿದ್ದಾನೆ. ಹೀಗಾಗಿ ಕರುಣೆಯಿಂದ ಮಹಿಳೆ ಮೊಬೈಲ್ ಕೊಟ್ಟ ಕೂಡಲೇ ಮಾತನಾಡುತ್ತಾ ಹಾಗೇ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ ಹೊದಿಸಿದ ಕುಟುಂಬಸ್ಥರ ವಿರುದ್ಧ FIR
ಇಂದು ಮಹಿಳೆ ಬೇರೊಂದು ಮೊಬೈಲ್ ಹಾಗೂ ಸಿಮ್ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ಅಚಾನಕ್ ಆಗಿ ಕಳ್ಳ ಸಿಕ್ಕಿ ಹಾಕಿಕೊಂಡಿದ್ದಾನೆ. ಸಿಕ್ಕ ಮೊಬೈಲ್ ಖದೀಮನಿಗೆ ಮಹಿಳೆ ಹಿಡಿದು ಬಿಸಿ, ಬಿಸಿ ಕಜ್ಜಾಯ ನೀಡಿದ್ದಾಳೆ. ಎಸ್ಕೇಪ್ ಆಗುತ್ತಿದ್ದ ಕಳ್ಳನನ್ನು ಸ್ಥಳೀಯರು ಹಿಡಿದು ನಂತರ ಗದಗ ಶಹರ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಈ ವಂಚಕ ಹೀಗೆ ಅನೇಕರಿಗೆ ವಂಚಿಸಿ, ಮೊಬೈಲ್ ಎಸ್ಕೇಪ್ ಮಾಡುತ್ತಿದ್ದ ಎಂಬ ಸತ್ಯ ತಿಳಿದು ಬಂದಿದೆ. ಸದ್ಯ ಆರೋಪಿ ಗದಗದ ಶಹರ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ:ಶಾರೂಖ್, ನಯನ ತಾರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ರಾಣಾ ದಗ್ಗುಬಾಟಿ