ಹಾಸನ: ಮಾಹಿತಿ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಮೊಬೈಲ್ ಎಗರಿಸಿದ ಘಟನೆ ಜಿಲ್ಲೆಯ ಅರಸೀಕೆರೆ ಪಟ್ಟಣದ ಸತ್ಯನಿಧಿ ಸ್ಟೋರ್‍ನಲ್ಲಿ ನಡೆದಿದೆ.
ಹೌದು, ಅಂಗಡಿ ಮಾಲೀಕನ ಕಣ್ತಪ್ಪಿಸಿ, ಟೇಬಲ್ ಮೇಲಿದ್ದ ಮೊಬೈಲ್ ಅನ್ನು ಚಾಲಕಿ ಕಳ್ಳನೊಬ್ಬ ಎಗರಿಸಿದ್ದಾನೆ. ಬಸವರಾಜು ಎಂಬವರ ಮೊಬೈಲ್ ಕಳ್ಳತನವಾಗಿದ್ದು, ಮೊಬೈಲ್ ಕದಿಯುತ್ತಿರುವ ದೃಶ್ಯ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಸತ್ಯನಿಧಿ ಮೊಬೈಲ್ ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬ, ಮಾಹಿತಿ ಕೇಳುವ ನೆಪದಲ್ಲಿ ಮಾಲೀಕನ ಗಮನ ಬೆರೆಡೆ ಸೆಳೆದಿದ್ದಾನೆ. ಬಳಿಕ ತನ್ನ ಕೈಯಲ್ಲಿದ್ದ ಪುಸ್ತಕವನ್ನು ಮೊದಲು ಟೇಬಲ್ ಮೇಲಿದ್ದ ಮೊಬೈಲ್ ಮೇಲೆ ಹಾಕಿದ್ದಾನೆ. ನಂತರ ಪುಸ್ತಕ ತೆಗೆದುಕೊಳ್ಳುವ ನೆಪಮಾಡಿ, ಮೊಬೈಲ್ ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಂಗಡಿ ಮಾಲೀಕ ಮೊಬೈಲ್ ಕಳುವಾಗುತ್ತಿದ್ದಂತೆ, ಸಿಸಿಟಿವಿಯನ್ನು ಪರೀಕ್ಷಿಸಿದಾಗ ಕಳ್ಳನ ಕೈಚಳಕ ಬೆಳಕಿಗೆ ಬಂದಿದೆ. ಕೂಡಲೇ ಬಸವರಾಜು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=2CaZCKlWBXk