ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರು ಕಾರಿನಲ್ಲಿಟ್ಟಿದ್ದ ಮೊಬೈಲ್ ಕಳವು ಮಾಡಿ ಪರಾರಿಯಾಗಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಾಲೂಕಿನ ವಾಣಿಗರಹಳ್ಳಿಯ ನವೀನ್ ಕುಮಾರ್ ತಮ್ಮ ತಾಯಿಯೊಂದಿಗೆ ತೆಂಗಿನಕಾಯಿ ಖರೀದಿಗೆ ಬಂದಿದ್ದ. ಈ ವೇಳೆ ಕಾರಿನಲ್ಲಿ ಮೊಬೈಲ್ ಬಿಟ್ಟು ತೆಂಗಿನಕಾಯಿ ವ್ಯಾಪಾರಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಸುಮಾರು 25 ವರ್ಷದ ಯುವಕನೊರ್ವ, ಕಾರಿನಲ್ಲಿದ್ದ ಮೊಬೈಲ್ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೇಶದಲ್ಲಿ ಆಗಲಿ, ಪ್ರಪಂಚವಾಗಲಿ ಎಲ್ಲರಿಗೂ ಮಾತೃ ಭಾಷೆಯೇ ಮೊದಲು: ಶಿವಕುಮಾರ್ ಉದಾಸಿ
Advertisement
Advertisement
ತೆಂಗಿನಕಾಯಿ ಖರೀದಿಸಿ ಮರಳಿ ಮನೆಗೆ ತೆರಳುವ ವೇಳೆ ಕಾರಿನಲ್ಲಿ ಮೊಬೈಲ್ ಇಲ್ಲದಿರುವುದನ್ನ ಕಂಡ ನವೀನ್ ಮೊಬೈಲ್ ಹುಡುಕಾಡಿದ್ದಾನೆ. ಈ ಹಿನ್ನೆಲೆ ತಾಯಿಯ ಮೊಬೈಲ್‍ನಿಂದ ಕರೆ ಮಾಡಿದ್ದಾನೆ. ಫೋನ್ ಕದ್ದಿದ್ದ ಯುವಕ ಉರ್ದು ಭಾಷೆಯಲ್ಲಿ ಮಾತನಾಡಿದ್ದು, ಫೋನ್ ಬೇಕೆಂದ್ರೆ ಹಣ ಕೂಡು ಎಂದು ಬೇಡಿಕೆ ಇಟ್ಟಿದ್ದಾನೆ.
Advertisement
Advertisement
ಆದರೆ ನವೀನ್ ಹಲವು ಗಂಟೆಗಳ ಕಾಲ ನಿರಂತರವಾಗಿ ಕರೆ ಮಾಡಿ ಯುವಕನನ್ನು ಮನವಿ ಮಾಡಿಕೊಂಡಿದ್ದಾನೆ. ಆದರೆ ಅವನು ಯಾವುದಕ್ಕೂ ಬಗ್ಗಲಿಲ್ಲ. ಈ ಹಿನ್ನೆಲೆ ನವೀನ್ ಪೊಲೀಸರಿಗೆ ದೂರು ನೀಡುವುದಾಗಿ ಬೆಂದರಿಕೆಯನ್ನು ಹಾಕಿದ್ದಾನೆ. ಆಗ ಯುವಕ ಎಪಿಎಂಸಿ ಬಳಿಯ ಮೊಬೈಲ್ ಅಂಗಡಿಗೆ ತೆರಳಿ ವಿಳಾಸ ಬರೆಯುವಂತೆ ಬಂದು ಮೊಬೈಲ್ ಕೊಟ್ಟು, ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ
ಮೊಬೈಲ್ ವಾಪಾಸ್ ಸಿಕ್ಕ ಕಾರಣ ನವೀನ್ ಕುಮಾರ್ ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿಲ್ಲ.