ಕಲಬುರಗಿ: ರಾಜ್ಯದ ಜೈಲು ಕರ್ಮಕಾಂಡಗಳು ನಿಲ್ಲುತ್ತಿಲ್ಲ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ (Kalaburagi Central Jail) ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾದ ಅಧೀಕ್ಷಕಿ ಅನಿತಾ ವಿರುದ್ಧ ಮಸಲತ್ತುಗಳು ಮುಂದುವರಿದಿವೆ.
ಜೈಲು ಅಧೀಕ್ಷಕಿ ಅನಿತಾ ಭೇಟಿ ವೇಳೆಯೇ, ಕೈದಿಯೊಬ್ಬ ಕದ್ದುಮುಚ್ಚಿ ಮೊಬೈಲ್ ಬಳಕೆ ಮಾಡುವ ದೃಶ್ಯವನ್ನು ಜೈಲ್ ಮಾಫಿಯಾ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ವೈರಲ್ ಮಾಡಿದೆ. ಅತ್ತ, ಬೆಳಗಾವಿಯ ಹಿಂಡಲಗಾ ಜೈಲಿನ 2ನೇ ಬ್ಯಾರಕ್‌ನಲ್ಲಿ ಕೈದಿಗಳು ಇಸ್ಪೀಟ್ ಆಡ್ತಿರುವ, ಮೊಬೈಲ್‌ನಲ್ಲಿ ರೀಲ್ಸ್ನಲ್ಲಿ ತೊಡಗಿರುವ, ಕುಟುಂಬದ ಜೊತೆ ವಿಡಿಯೋ ಕಾಲ್ ಮಾಡ್ತಿರುವ ವಿಡಿಯೋಗಳು ಹೊರಗೆ ಬಂದಿವೆ.
- Advertisement
ಹಿಂಡಲಗಾ ಜೈಲಲ್ಲಿ ದುಡ್ಡು ಕೊಟ್ರೆ ಎಲ್ಲಾ ವ್ಯವಸ್ಥೆಗಳನ್ನು ಅಧೀಕ್ಷಕ ಕೃಷ್ಣಮೂರ್ತಿ ಮಾಡ್ತಾರೆ ಎಂಬ ಆರೋಪಗಳು ಇವೆ. ಇದನ್ನೂ ಓದಿ: ಮುಡಾದಲ್ಲಿ 700 ಕೋಟಿ ಅವ್ಯವಹಾರ – ಬಡವರ ಸೈಟು ಶ್ರೀಮಂತರ ಪಾಲು: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ
- Advertisement
9 ಕೈದಿಗಳ ವಿರುದ್ಧ ಎಫ್‌ಐಆರ್:
ಇತ್ತೀಚೆಗಷ್ಟೇ ಕೇಂದ್ರ ಕಾರಾಗೃಹದ ಅಧೀಕ್ಷಕಿ (Jail Superintendent) ಅನಿತಾ ಅವರ ಕಾರನ್ನು ಸ್ಫೋಟಿಸುವುದಾಗಿ ಬೇದರಿಕೆ ಹಾಕಿದ್ದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 9 ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಕೆನರಾ ಬ್ಯಾಂಕ್ ಜೊತೆಗೆ KKRTC ಒಪ್ಪಂದ – ಸಾರಿಗೆ ನೌಕರರಿಗೆ 1 ಕೋಟಿ ಅಪಘಾತ ವಿಮೆ ಯೋಜನೆ ಜಾರಿ
ಮುಸ್ತಫಾ,ನಸೀರ್, ಬಚ್ಚನ್,ಅಲ್ತಾಫ್, ದೇವರಾಜ್, ನಾಗರಾಜ್, ಶ್ರೀಕಾಂತ್ ಸೇರಿ 9 ಕೈದಿಗಳ (Prisoners) ವಿರುದ್ಧ ಅಧೀಕ್ಷಕಿ ಅನಿತಾ ಎಫ್‌ಐಆರ್ ದಾಖಲಿಸಿದ್ದಾರೆ. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನೀತಾ ವಿರುದ್ಧ ಕೈದಿಗಳು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ದುಷ್ಕರ್ಮಿಯೊಬ್ಬನಿಂದ ಆಡಿಯೋ ರೂಪದಲ್ಲಿ ಬೆದರಿಕೆ ಸಂದೇಶ ಬಂದಿತ್ತು. ಇದನ್ನ ಜೈಲಿನಲ್ಲಿರುವ ಕೈದಿಗಳೇ ಕಳುಹಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದ ಹಿಂದೆ 9 ಜನ ಕೈದಿಗಳ ಕೈವಾಡ ಇರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.