Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬೆಂಗಳೂರಿನಲ್ಲಿ ಆರಂಭವಾಗಲಿದೆ ಮೊಬೈಲ್ ತಯಾರಿಕಾ ಘಟಕ, ಸಿಗಲಿದೆ 50 ಸಾವಿರ ಜನರಿಗೆ ಉದ್ಯೋಗ: ಅಶ್ವಿನಿ ವೈಷ್ಣವ್‌

Public TV
Last updated: February 15, 2025 6:54 pm
Public TV
Share
4 Min Read
Ashwini Vaishnaw 1
SHARE

ಬೆಂಗಳೂರು: 10 ವರ್ಷಗಳ ಹಿಂದೆ ಮೇಕ್ ಇನ್ ಇಂಡಿಯಾ (Make In India) ಯೋಜನೆ ಜಾರಿಯಾಗಿದ್ದು, ನಾವು ಇದೀಗ ಗರಿಷ್ಠ ಪ್ರಮಾಣದ ಮೊಬೈಲ್ ಉತ್ಪಾದಿಸುವ ದೇಶವಾಗಿದ್ದೇವೆ. ರಕ್ಷಣಾ ಸಾಮಗ್ರಿ ಉತ್ಪಾದನೆಯಲ್ಲೂ ದೇಶದ ಕೊಡುಗೆ ಗಮನಾರ್ಹವಾಗಿದ್ದು ಸೆಮಿ ಕಂಡಕ್ಟರ್ ಉತ್ಪಾದನೆಯೂ ಆರಂಭವಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೇ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) 40 ರಿಂದ 50 ಸಾವಿರ ಜನರಿಗೆ ಉದ್ಯೋಗ ಕೊಡುವ ಮೊಬೈಲ್ ತಯಾರಿಕಾ ಘಟಕ ಆರಂಭವಾಗಲಿದೆ. ಮುಂದಿನ ಬಾರಿ ಬಂದಾಗ ಅಲ್ಲಿಗೆ ಭೇಟಿ ಕೊಡುವೆ ಎಂದು ತಿಳಿಸಿದರು.

ಉದ್ಯೋಗಾಧಾರಿತ ಕೈಗಾರಿಕೆಗಳಿಗೆ ಒತ್ತು ಕೊಡುವ ಪ್ರಮುಖ ಪ್ರಕಟಣೆಯೂ ಈ ಬಾರಿ ಬಜೆಟ್‍ನಲ್ಲಿ (Union Budget) ಹೊರಬಿದ್ದಿದೆ. ಆಟಿಕೆ, ಆಹಾರ ಸಂಸ್ಕರಣೆ, ಚಪ್ಪಲಿ ಉತ್ಪಾದನೆ ಮೊದಲಾದವುಗಳಿಗೆ ಈ ಬಜೆಟ್ ಬೆಂಬಲ- ಆದ್ಯತೆ ಕೊಡಲಿದೆ ಎಂದು ವಿವರಿಸಿದರು.

Ashwini Vaishnaw

 

ವೈಯಕ್ತಿಕ ಆದಾಯ ತೆರಿಗೆ ದರದ ಬದಲಾವಣೆ ಕುರಿತು ಮಧ್ಯಮ ವರ್ಗವು ಬೇಡಿಕೆ ಇಡುತ್ತ ಬಂದಿತ್ತು. 12 ಲಕ್ಷ ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಪ್ರಮುಖ ನಿರ್ಧಾರವನ್ನು ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಕೈಗೊಳ್ಳಲಾಗಿದೆ ಎಂದರು.

60 ವರ್ಷಗಳ ಬಳಿಕ ಎನ್‍ಡಿಎ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಪಡೆದಿದೆ. ಮೊದಲ ಮತ್ತು ಎರಡನೇ ಅಧಿಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಮಾಡಿದ ಉತ್ತಮ ಕಾರ್ಯಗಳೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: ಈಗ ಅಧಿಕಾರದಲ್ಲಿರುವ ಕಾಂಗ್ರೆಸ್‌ ಮುಂದೆ ಸೋಲುತ್ತೆ : ಪ್ರಕಾಶ್‌ ರಾಜ್‌

ದೇಶದ ಉತ್ತರ- ದಕ್ಷಿಣ, ಪೂರ್ವ ಪಶ್ಚಿಮದಲ್ಲಿ ಈ ಬದಲಾವಣೆಗಳನ್ನು ಜನತೆ ನೋಡಿದ್ದಾರೆ. 60-70 ವರ್ಷಗಳಲ್ಲಿ ನೋಡದಷ್ಟು ಉತ್ತಮ ಅಭಿವೃದ್ಧಿ ಕಾರ್ಯಗಳು ಕಳೆದ 10 ವರ್ಷದಲ್ಲಿ ಕಾಣುತ್ತಿವೆ. ಇದೆಲ್ಲದಕ್ಕೂ ಬಿಜೆಪಿ ಸರಕಾರದ ಕೆಲಸ, ಎನ್‍ಡಿಎ ಚಿಂತನೆ ಮತ್ತು ಪ್ರಧಾನಿ ಮೋದಿಯವರ ದೂರದೃಷ್ಟಿ ಕಾರಣ ಎಂದು ತಿಳಿಸಿದರು.

nirmala sitharaman budget 1

 

ಮಧ್ಯಮ ವರ್ಗಗಳಿಗೆ ನೆರವಾಗುವ ಮೆಟ್ರೋ, ಹೊಸ ವಿಮಾನನಿಲ್ದಾಣಗಳು, 10 ವರ್ಷಗಳಲ್ಲಿ 390 ಹೊಸ ವಿಶ್ವವಿದ್ಯಾಲಯಗಳ ನಿರ್ಮಾಣ, ಹೊಸ ಐಐಟಿ, ಐಐಎಂಗಳಿಂದ ಜೀವನದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಿದೆ. ಬುದ್ಧಿಮತ್ತೆ, ತಾಂತ್ರಿಕತೆ, ಉದ್ಯಮಶೀಲತೆ ಇದ್ದರೂ 2014ರಲ್ಲಿ ನಮ್ಮ ದೇಶವನ್ನು ದುರ್ಬಲವಾದ 5 ಆರ್ಥಿಕ ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿತ್ತು. ಈಗ ಎಲ್ಲ ದೊಡ್ಡ ದೇಶಗಳಲ್ಲಿ ನಮ್ಮ ದೇಶವು ಆರ್ಥಿಕ ಕ್ಷೇತ್ರದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಆರೋಗ್ಯಕರ ದೇಶವಾಗಿ ಪರಿಗಣಿಸಲ್ಪಟ್ಟಿದೆ ಎಂದು ವಿವರಿಸಿದರು.

ಸುಮಾರು 50 ಲಕ್ಷ ಕೋಟಿಯ ದೇಶದ ಬಜೆಟ್ ನಮ್ಮದಾಗಿದ್ದು, ಆರ್ಥಿಕ ಕ್ಷೇತ್ರದ ಕೊರತೆಯು ಶೇ.4.8ರಷ್ಟಿದ್ದು, ಅದು ಶೇ.4ಕ್ಕೆ ತಲುಪುತ್ತಿದೆ ಎಂದು ವಿವರ ನೀಡಿದರು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅದು ಶೇ.7ರಷ್ಟಿದ್ದು, ನಾವು ಆರೋಗ್ಯಕರ ಸ್ಥಿತಿಯಲ್ಲಿದ್ದೇವೆ ಎಂದು ವಿಶ್ಲೇಷಿಸಿದರು. ದಾವೋಸ್‍ಗೆ ನಾನು ಈಚೆಗೆ ಭೇಟಿ ಕೊಟ್ಟಿದ್ದೆ. ನಮ್ಮ ಪ್ರಧಾನಿಯವರ ಆರ್ಥಿಕ ಕ್ಷೇತ್ರದ ಕುರಿತ ಚಿಂತನೆಗಳನ್ನು ಕೇಳಿದ ಐಎಂಎಫ್ ಮುಖ್ಯಸ್ಥರು ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

10 ವರ್ಷಗಳ ಹಿಂದೆ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದ್ದವು. ಈಗ ಅತ್ಯುತ್ತಮ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಲಭಿಸುತ್ತಿದೆ. 10 ವರ್ಷಗಳ ಹಿಂದಿನ ದರದ 3 ಪಟ್ಟು ಹೆಚ್ಚು ಎಂಎಸ್‍ಪಿ ಈಗ ಕೊಡುತ್ತಿದ್ದು, ಉತ್ಪಾದಕತೆ, ಕೃಷಿ ತಂತ್ರಜ್ಞಾನಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ: ಅಶ್ವಿನಿ ವೈಷ್ಣವ್‌

Make In India modi

ಎಂಎಸ್‍ಎಂಇಗಳ ಸ್ಥಿತಿಯೂ ಗರಿಷ್ಠ ಸುಧಾರಿಸಿದೆ. ಕೋವಿಡ್ ಅವಧಿಯ ನಡುವೆಯೂ ಉತ್ತಮ ಸಾಲ ವ್ಯವಸ್ಥೆ, ದೊಡ್ಡ ಕೈಗಾರಿಕೆಗಳಿಂದ ಬೆಂಬಲದಿಂದ ಎಂಎಸ್‍ಎಂಇಗಳೂ ಉತ್ತಮ ಸ್ಥಿತಿಯಲ್ಲಿವೆ. ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ನಾವು ಭವಿಷ್ಯದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿ ಇಟ್ಟುಕೊಂಡು ಶೇ.6ರಿಂದ 8ರಷ್ಟು ಬೆಳವಣಿಗೆ ದರವನ್ನು ಕಾಪಾಡುವ ಸ್ಥಿತಿಯಲ್ಲಿದ್ದೇವೆ ಎಂದು ವಿಶ್ವಾಸದೊಂದಿಗೆ ಹೇಳುವ ದೇಶ ನಮ್ಮದಾಗಿದೆ ಎಂದು ವಿಶ್ಲೇಷಿಸಿದರು.

ಕಡಿಮೆ ಆದಾಯ, ಮಧ್ಯಮ ಆದಾಯದ ಕುಟುಂಬಗಳಿಗೆ ಆದ್ಯತೆ ನೀಡುವ ಕೆಲಸವನ್ನು ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರು ಮಾಡಿದ್ದಾರೆ. 12 ಲಕ್ಷ ಆದಾಯಕ್ಕೆ ತೆರಿಗೆ ಇಲ್ಲ ಎಂಬುದು ವೇತನದಾರರಿಗೆ ದೊಡ್ಡ ಕೊಡುಗೆ ಎಂದು ತಿಳಿಸಿದರು. 10 ವರ್ಷಗಳ ಹಿಂದೆ ಸುಮಾರು 2.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಇದ್ದರೆ, ಅದು ಈಗ 15 ಲಕ್ಷ ಕೋಟಿಗೆ ಏರಿದೆ ಎಂದು ವಿವರಿಸಿದರು.

ಹೊಸ ಬಂಡವಾಳ ಹೂಡಿಕೆ ಎಂದರೆ ಹೊಸ ಉದ್ಯೋಗ ಸೃಷ್ಟಿ, ಬೆಳವಣಿಗೆಗೆ ಅವಕಾಶ ಎಂದ ಅವರು, ಬೆಂಗಳೂರು ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಪಡೆದರೆ, ಹೆಚ್ಚು ಜನರು ಅಲ್ಲಿ ಕೆಲಸ ಮಾಡುವಂತಾಗುತ್ತದೆ. ಹೆಚ್ಚು ಅಂಗಡಿಗಳಿಗೆ ಅವಕಾಶ ಲಭಿಸುತ್ತದೆ. ಹೊಸ ರೈಲ್ವೆ ನಿಲ್ದಾಣ ನಿರ್ಮಾಣವಾದರೆ, ಹೆಚ್ಚು ಉದ್ಯೋಗ ಲಭಿಸುವುದು ಸಹಜ ಎಂದು ತಿಳಿಸಿದರು.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕ್ಷೇತ್ರವಾದ ಎಂಎಸ್‍ಎಂಇಯನ್ನು ಬೆಳವಣಿಗೆಯ ಹೊಸ ಎಂಜಿನ್ ಎಂದೇ ಪರಿಗಣಿಸಲಾಗಿದೆ. ಎಂಎಸ್‍ಎಂಇಗಳು ಅಗತ್ಯ ಬಂಡವಾಳ ಹೊಂದಲು ಆದ್ಯತೆ ಕೊಡಲಾಗಿದೆ. ಭಾರತವು ಪ್ರಮುಖ ಸೇವಾ ಕ್ಷೇತ್ರದ ದೇಶವಾಗಿದೆ. ದೊಡ್ಡ ಪ್ರಮಾಣದ ಐ.ಟಿ. ಸರ್ವಿಸಸ್ ಹೊಂದಿದ ಬೆಂಗಳೂರು ಇದಕ್ಕೆ ಸಮರ್ಥ ಉದಾಹರಣೆ ಎಂದರು.

 

TAGGED:Ashwini Vaishnawbengalurukarnatakamobileಅಶ್ವಿನಿ ವೈಷ್ಣವ್ಕರ್ನಾಟಕಬೆಂಗಳೂರುಮೊಬೈಲ್
Share This Article
Facebook Whatsapp Whatsapp Telegram

Cinema Updates

vivek oberoi
ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?
22 minutes ago
prabhas tripti dimri
‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ
1 hour ago
karunya ram
ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ
2 hours ago
RAGINI 4
‘ಜಾವಾ’ ಸಿನಿಮಾದಲ್ಲಿ ರಾಗಿಣಿ ಬೋಲ್ಡ್ ಅವತಾರ- ಪೋಸ್ಟರ್ ರಿವೀಲ್
4 hours ago

You Might Also Like

UT Khader 1
Bengaluru City

18 ಬಿಜೆಪಿ ಶಾಸಕರ ಅಮಾನತು ವಾಪಸ್, ವನವಾಸ ಅಂತ್ಯ; ಸ್ಪೀಕರ್ ನೇತೃತ್ವದ ಸಭೆಯಲ್ಲಿ ನಿರ್ಣಯ

Public TV
By Public TV
11 minutes ago
Narendra Modi 2
Latest

ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ 3ನೇ ವ್ಯಕ್ತಿಯ ಪಾತ್ರವಿಲ್ಲ – ಮೋದಿ

Public TV
By Public TV
21 minutes ago
CET SUMANTH 4TH RANK CET CREATIVE COLLEGE
Dakshina Kannada

ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4ನೇ ರ‍್ಯಾಂಕ್

Public TV
By Public TV
23 minutes ago
CSK 3
Cricket

ಚೆನ್ನೈ ಗುನ್ನಕ್ಕೆ ಗುಜರಾತ್‌ ಧೂಳಿಪಟ – CSKಗೆ 83 ರನ್‌ಗಳ ಭರ್ಜರಿ ಜಯ, ಆರ್‌ಸಿಬಿಗಿದೆಯಾ ನಂ.1 ಪಟ್ಟಕ್ಕೇರುವ ಚಾನ್ಸ್‌?

Public TV
By Public TV
57 minutes ago
School
Bengaluru City

ಕೋವಿಡ್ ಮಧ್ಯೆ ಶಾಲಾ ಕಾಲೇಜುಗಳು ಆರಂಭ – ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್!

Public TV
By Public TV
2 hours ago
Uttarakhand Rain Landslides Traffic 1
Latest

ಉತ್ತರಾಖಂಡ | ಭಾರೀ ಮಳೆಗೆ ಭೂಕುಸಿತ – ಹೆದ್ದಾರಿಯಲ್ಲಿ 6 ಕಿ.ಮೀ ಟ್ರಾಫಿಕ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?