ಬೆಂಗಳೂರು: ಹೊಸ ವರ್ಷಕ್ಕೆ (New Year) ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿಸಿಪಿ (DCP) ರ‍್ಯಾಂಕ್ ಅಧಿಕಾರಿಗಳಿಗೆ ಹೊಸ ಮೊಬೈಲ್(Mobile Phone) ಉಡುಗೊರೆಯಾಗಿ ದೊರೆತಿದೆ.
ಹೊಸ ವರ್ಷಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ವಿಶೇಷ ಜಿಪಿಎಸ್ ಟೆಕ್ನಾಲಜಿ ಅಳವಡಿಸಿರುವ ಸ್ಯಾಮ್‌ಸಂಗ್ ಮೊಬೈಲ್ ಉಡುಗೊರೆಯಾಗಿ (Gift) ನೀಡಲಾಗಿದೆ. ಇದನ್ನೂ ಓದಿ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!
ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ (Dayananda) ಅವರು ಈ ಫೋನ್ ವಿತರಿಸಿದ್ದಾರೆ.
ಎಲ್ಲಾ ಡಿಸಿಪಿ ರ‍್ಯಾಂಕ್ ಅಧಿಕಾರಿಗಳು ಕಡ್ಡಾಯವಾಗಿ ಜಿಪಿಎಸ್ ಮೊಬೈಲ್ ಬಳಸಲು ಆದೇಶ ನೀಡಲಾಗಿದೆ.