– ಗೇಮ್ ಆಡ್ತಾ ಹಣ ಕಳ್ಕೊಂಡ ಗ್ರಾಹಕ
ಹುಬ್ಬಳ್ಳಿ: ಮೊಬೈಲ್‍ನಲ್ಲಿ ಆನ್‍ಲೈನ್ ಗೇಮ್ ಆಡುವಾಗ ಕಡಿತಗೊಂಡ ಹಣದ ಬಗ್ಗೆ ವಿಚಾರಿಸಲು ಹೋಗಿ ನಕಲಿ ಕಸ್ಟಮರ್ ಕೇರ್ ನವರಿಂದ ಮತ್ತಷ್ಟು ಹಣ ಕಳೆದುಕೊಂಡ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಹಕ ತನ್ನ ಮೊಬೈಲ್ ಪೋನ್‍ನಲ್ಲಿ ಗೇಮ್ ಆಡುವಾಗ ಎಸ್‍ಬಿಐ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದನು. ಈ ವೇಳೆ ಆತನ ಬ್ಯಾಂಕಿನಲ್ಲಿ 9,739 ರೂ. ಕಡಿತವಾಗಿತ್ತು. ಈ ಬಗ್ಗೆ ವಿಚಾರಿಸಲು ಗ್ರಾಹಕ ಗೂಗಲ್ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಶಂಕರ್ ಮಂಡಲ್ ಎಂದು ಪರಿಚಯಿಸಿಕೊಂಡಿದ್ದಾನೆ.
Advertisement
Advertisement
ಕಡಿತಗೊಂಡ ಹಣವನ್ನು ಮರಳಿ ವರ್ಗಾವಣೆ ಮಾಡುವುದಾಗಿ ಹೇಳಿದ ಈತ ಮೊಬೈಲ್‍ಗೆ ‘Any desk app’ ಇನ್‌ಸ್ಟಾಲ್ ಮಾಡಿಕೊಳ್ಳಲು ಹೇಳಿದ್ದಾನೆ. ಬಳಿಕ ಡೆಬಿಟ್ ಕಾರ್ಡ್ ನಂ. ಮತ್ತು ಸಿವಿವಿ ನಂ. ಮಾಹಿತಿ ಪಡೆದು 16,689 ರೂಪಾಯಿಯನ್ನು ತನ್ನ ಪೇಟಿಎಂ ಖಾತೆ ನಂಬರ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
Advertisement
ಗ್ರಾಹಕ ಮತ್ತೆ ಅದೇ ನಂಬರ್‌ಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.