ಮಂಡ್ಯ: ಜಿಲ್ಲೆಯಲ್ಲಿ ಮತ್ತೊಂದು ಮೊಬೈಲ್ ಬ್ಲಾಸ್ಟ್ ಆಗಿದ್ದು, ನಮ್ಮ ಕೈಯಲ್ಲಿರುವ ಸ್ಮಾರ್ಟ್ ಫೋನ್‍ಗಳು ಎಷ್ಟು ಸೇಫ್ ಎಂಬ ಅನುಮಾನ ಮೂಡುವಂತೆ ಮಾಡಿದೆ
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಪ್ರದೀಪ್ ಎಂಬವರ ಅಂಗಡಿಯಲ್ಲಿ ಮೊಬೈಲ್ ಬ್ಲಾಸ್ಟ್ ಆಗಿದೆ. ಚೈನಾ ಮೂಲದ ಕಂಪನಿಗೆ ಸೇರಿದ ಮೊಬೈಲ್ ಆನ್ ಆಗುತ್ತಿಲ್ಲ ಎಂದು ಗ್ರಾಹಕರೊಬ್ಬರು ಪ್ರದೀಪ್ ಅವರ ಬಳಿಗೆ ರಿಪೇರಿಗೆ ತಂದಿದ್ದಾರೆ. ಈ ವೇಳೆ ಮೊಬೈಲ್ ಬ್ಲಾಸ್ಟ್ ಆಗಿದೆ. ಈ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಪ್ರದೀಪ್ ಮೊಬೈಲ್ ತೆಗೆದುಕೊಂಡು ರಿಪೇರಿ ಮಾಡಲೆಂದು ಪರೀಕ್ಷಿಸಲು ಆರಂಭಿಸಿದ್ದಾರೆ. ಈ ಸಂದರ್ಭ ಮೊಬೈಲ್‍ನಲ್ಲಿ ಹೊಗೆ ಕಾಣಿಸಿಕೊಂಡು ಬ್ಲಾಸ್ಟ್ ಆಗಿದೆ. ತಕ್ಷಣ ಪ್ರದೀಪ್ ಮೊಬೈಲ್ ದೂರ ಎಸೆದಿದ್ದಾರೆ.
Advertisement
Advertisement
ಮೊಬೈಲ್‍ನಲ್ಲಿ ಬಂದ ಹೊಗೆ ಪ್ರದೀಪ್ ಅವರ ಅಂಗಡಿಯನ್ನು ಆವರಿಸಿ ಕ್ಷಣ ಕಾಲ ಭಯದ ವಾತಾವರಣ ನಿರ್ಮಿಸಿತ್ತು.