ದಿಢೀರ್ ಹೊತ್ತಿ ಉರಿಯಿತು ಜೇಬಿನಲ್ಲಿದ್ದ ಮೊಬೈಲ್!

Public TV
1 Min Read
bgk mobile blast

ಬಾಗಲಕೋಟೆ: ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಚೀನಾ ಮೂಲದ ಕಂಪನಿಯ ಸ್ಮಾರ್ಟ್ ಫೋನ್ ದಿಢೀರ್ ಬೆಂಕಿ ಕಾಣಿಸಿಕೊಂಡು ಫೋನ್ ಹೊತ್ತಿ ಉರಿದ ಘಟನೆ ಬಾಗಲಕೋಟೆ ನಗರದ ಕಿಲ್ಲಾ ಓಣಿಯಲ್ಲಿ ನಡೆದಿದೆ.

ಕಿಲ್ಲಾ ಓಣಿಯ ನಿವಾಸಿ ರಾಘವೇಂದ್ರ ಕುಲಕರ್ಣಿ ಅವರಿಗೆ ಈ ಮೊಬೈಲ್ ಸೇರಿದ್ದು, ಇಂದು ರಾಘವೇಂದ್ರ ಅವರು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡಿದ್ದಾಗ ದಿಢೀರ್ ಬೆಂಕಿ ಹೊತ್ತಿಕೊಂಡು ಹೊಗೆ ಬರಲು ಶುರುವಾಗಿದೆ. ತಕ್ಷಣ ಇದನ್ನು ಅರಿತ ರಾಘವೇಂದ್ರ, ಮೊಬೈಲ್ ಜೇಬಿನಿಂದ ತೆಗೆದು ಹೊರಗಡೆ ಎಸೆದಿದ್ದಾರೆ. ಇದನ್ನೂ ಓದಿ:ಮೊಬೈಲ್ ಸ್ಫೋಟಗೊಂಡು ಯುವಕ ಗಂಭೀರ!

bgk mobile blast 1

ಅಷ್ಟರಲ್ಲೇ ಮೊಬೈಲ್ ಸ್ಫೋಟಗೊಂಡು ಹೊತ್ತಿ ಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಆದರೆ ಇದ್ದಕ್ಕಿದಂತೆ ಈ ರೀತಿ ಮೊಬೈಲ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದಕ್ಕೆ ಸ್ಥಳೀಯರು ಕೂಡ ಕೆಲ ಕಾಲ ಗಾಬರಿಯಾದರು.

Share This Article
Leave a Comment

Leave a Reply

Your email address will not be published. Required fields are marked *