ಬೆಂಗಳೂರು: ಮಾತನಾಡುತ್ತಿರುವಾಗಲೇ ಮೊಬೈಲ್ ಸ್ಫೋಟಗೊಂಡು ಯುವಕನ ಕಿವಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನಲ್ಲಿ ನಡೆದಿದೆ.
ಆನೇಕಲ್ ಗಡಿಗೆ ಹೊಂದಿಕೊಂಡಿರುವ ಕುರುಬರಪಲ್ಲಿ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಆರ್ಮುಗ ಗಾಯಗೊಂಡ ಯುವಕ. ಈತ ಸಂಬಂಧಿಕರ ಮನೆಗೆ ತೆರಳುವಾಗ ವಿಳಾಸ ತಿಳಿಯಲು ಕರೆ ಮಾಡಿದ್ದಾನೆ. ಕರೆ ಮಾಡಿ ಮಾತನಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಗೊಂಡಿದೆ.
ಸ್ಫೋಟದ ತೀವ್ರತೆಗೆ ಆರ್ಮುಗನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಫೋಟಗೊಂಡ ಮೊಬೈಲ್ ವಿವೋ ಕಂಪನಿಯದ್ದು ಎಂದು ತಿಳಿದು ಬಂದಿದೆ.