ದಿಸ್ಪುರ್: ಅಸ್ಸಾಂನ ಕಾಮ್ರುಪ್ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ 500ಕ್ಕೂ ಅಧಿಕ ಪುರುಷರ ಗುಂಪು ಮಹಿಳಾ ನೃತ್ಯಗಾರ್ತಿಯರಿಗೆ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿರುವ ಅಘಾತಕಾರಿ ಘಟನೆ ನಡೆದಿದೆ.
ಅಸ್ಸಾಂನ ಅಸೋಲ್ಪಾರಾನಲ್ಲಿ ಈ ಘಟನೆ ನಡೆದಿದ್ದು, ಸಾಂಸ್ಕ್ರತಿಕ ತಂಡವು ಈ ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರ ವಿರುದ್ಧ ಚಾಯ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಭಾನುವಾರ ಬಂಧಿಸಿದ್ದಾರೆ. ಇಬ್ಬರನ್ನು ಶಾರುಖ್ ಖಾನ್ ಮತ್ತು ಸುಭಾಹನ್ ಖಾನ್ ಎಂದು ಗುರುತಿಸಲಾಗಿದೆ.
Advertisement
Advertisement
ಸುಮಾರು 500 ಮಂದಿಯ ಗುಂಪು ಮಹಿಳಾ ನೃತ್ಯಗಾರ್ತಿಯರನ್ನು ಸ್ಟ್ರಿಪ್ ಡ್ಯಾನ್ಸ್ ಮಾಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಕಾರ್ಯಕ್ರಮ ಆಯೋಜಕರು ಸ್ಟ್ರಿಪ್ ಡಾನ್ಸ್ ತೋರಿಸುವುದಾಗಿ ಜನರಿಂದ ಅಧಿಕ ಹಣವನ್ನು ವಸೂಲಿ ಮಾಡಿ ಟಿಕೆಟ್ ನೀಡಿದ್ದಾರೆ ಎಂದು ನೃತ್ಯತಂಡವು ಆರೋಪಿಸಿದೆ.
Advertisement
ಪಶ್ಚಿಮ ಬಂಗಾಳದ ಕೂಬ್ವೀರ್ ನಿಂದ ಡ್ಯಾನ್ಸ್ ಮಾಡಲು ಬಂದಿದ್ದರು. ಈ ಕಾರ್ಯಕ್ರಮಕ್ಕೆ 500 ಮಂದಿ ಬಂದಿದ್ದರು. ಈ ವೇಳೆ ನೃತ್ಯಗಾರ್ತಿಯರಿಗೆ ಬಟ್ಟೆ ಬಿಚ್ಚುವಂತೆ ಒತ್ತಡ ಮಾಡಲಾಗಿದೆ. ಆಗ ನೃತ್ಯಗಾರ್ತಿಯರು ಇದಕ್ಕೆ ವಿರೋಧ ಮಾಡಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದಾರೆ. ಆದರೂ ಜನರು ಅವರ ವಾಹನದ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಸದ್ಯಕ್ಕೆ ನೃತ್ಯತಂಡ ನೀಡಿದ ದೂರಿನ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.