ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

Public TV
2 Min Read
gujarat students attack

ಅಹಮದಾಬಾದ್: ಕಳೆದ ರಾತ್ರಿ ಗುಜರಾತ್ ವಿಶ್ವವಿದ್ಯಾಲಯದ (Gujarat University) ಹಾಸ್ಟೆಲ್‌ಗೆ ನುಗ್ಗಿದ ಗುಂಪೊಂದು, ನಮಾಜ್ ಮಾಡಿದ ಆರೋಪದ ಮೇಲೆ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಐವರು ವಿದೇಶಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ ಅವರು ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಮತ್ತು ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ನಿರ್ದೇಶನ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಇಲ್ಲದೇ ಇದ್ದಿದ್ರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ: ಸಂಜಯ್‌ ರಾವತ್‌

ಅಹಮದಾಬಾದ್ ಮೂಲದ ಕ್ಯಾಂಪಸ್‌ನಲ್ಲಿ ಯಾವುದೇ ಮಸೀದಿ ಇಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದ್ದರಿಂದ ಅವರು ರಂಜಾನ್ ಸಮಯದಲ್ಲಿ ರಾತ್ರಿ ನೀಡಲಾಗುವ ತರಾವೀಹ್ – ನಮಾಜ್ ಮಾಡಲು ಹಾಸ್ಟೆಲ್‌ನೊಳಗೆ ಜಮಾಯಿಸಿದ್ದರು. ಸ್ವಲ್ಪ ಸಮಯದ ನಂತರ ದೊಣ್ಣೆಗಳು ಮತ್ತು ಚಾಕುಗಳೊಂದಿಗೆ ಮಾರಕಾಸ್ತ್ರಗಳೊಂದಿಗೆ ಗುಂಪೊಂದು ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ಅವರ ಕೊಠಡಿಗಳನ್ನು ಧ್ವಂಸಗೊಳಿಸಿದೆ. ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್ ಗುಂಪನ್ನು ತಡೆಯಲು ಪ್ರಯತ್ನಿಸಿ ವಿಫಲರಾದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ತುರ್ಕಮೆನಿಸ್ತಾನ್‌ನ ತಲಾ ಒಬ್ಬರು ಮತ್ತು ಆಫ್ರಿಕನ್ ದೇಶಗಳ ಇಬ್ಬರ ಮೇಲೆ ಹಲ್ಲೆ ನಡೆದಿದೆ. ಪೊಲೀಸರು ಬರುವಷ್ಟರಲ್ಲಿ ಗುಂಪು ಓಡಿಹೋಗಿತ್ತು. ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿದ್ದಾರೆ. ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಉಳಿದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇದನ್ನೂ ಓದಿ: WPL Final; ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಇಂದು ಮುಖಾಮುಖಿ – ಈ ಸಲ ಕಪ್ ಯಾರಿಗೆ?

ಹಾನಿಗೊಳಗಾದ ಬೈಕ್‌ಗಳು, ಒಡೆದ ಲ್ಯಾಪ್‌ಟಾಪ್‌ಗಳು ಮತ್ತು ಧ್ವಂಸಗೊಂಡ ಕೊಠಡಿಗಳ ದೃಶ್ಯಗಳಿರುವ ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗುಂಪು ಹಾಸ್ಟೆಲ್‌ಗೆ ಕಲ್ಲು ಎಸೆಯುತ್ತಿರುವುದು ಮತ್ತು ವಿದೇಶಿ ವಿದ್ಯಾರ್ಥಿಗಳನ್ನು ನಿಂದಿಸುತ್ತಿರುವ ದೃಶ್ಯದ ವೀಡಿಯೋ ಕೂಡ ವೈರಲ್‌ ಆಗಿದೆ.

ಒಂದು ವೀಡಿಯೊದಲ್ಲಿ ಗುಂಪಿನಲ್ಲಿದ್ದ ಯುವಕನೊಬ್ಬ ಸೆಕ್ಯುರಿಟಿ ಗಾರ್ಡ್‌ ಬಳಿ, ಅವರು ಏಕೆ ನಮಾಜ್ ಮಾಡುತ್ತಿದ್ದಾರೆ? ಇದು ನಮಾಜ್‌ ಮಾಡುವ ಸ್ಥಳವೇ? ಎಂದು ಕೇಳುತ್ತಿದ್ದಾರೆ. ಈ ವೇಳೆ ವಿದ್ಯಾರ್ಥಿಯೊಬ್ಬ ಕಿರುಚಾಡಿ ಯುವಕನ ಬಳಿ ಬಂದು ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಸೋಮವಾರ ಬಿಜೆಪಿ ಸೇರ್ಪಡೆ: ಡಾ. ಮಂಜುನಾಥ್‌

Share This Article