ರಾಯಚೂರು: ಜಿಲ್ಲೆಯ ದೇವದುರ್ಗದಲ್ಲಿ ಅಹ್ಮದೀಯ (Ahmadiyya) ತತ್ವ ಪ್ರಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಮುಸ್ಲಿಮ್ (Muslim) ಗುಂಪುಗಳ ನಡುವೆ ಕಿತ್ತಾಟ ನಡೆದಿದೆ.
ತಾಲೂಕಿನ ದೇವತಗಲ್ ಗ್ರಾಮದಲ್ಲಿ ವಿಜಯನಗರ ಜಿಲ್ಲೆಯಿಂದ ಬಂದಿದ್ದ ಮೌಲ್ವಿಗಳು ಅಹ್ಮದೀಯ ತತ್ವದ ಬಗ್ಗೆ ಪ್ರಚಾರ ಮಾಡಿದ್ದಾರೆ. ಅಹ್ಮದಿ ಮಸೀದಿಯಲ್ಲಿ (Mosque) ಮುಸ್ಲಿಮರಿಗೆ ಧರ್ಮದ ಆಚರಣೆ ಬಗ್ಗೆ ಪ್ರವಚನ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಫೆಬ್ರವರಿಯಲ್ಲೇ ಸಮಸ್ಯೆ – ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ
Advertisement
Advertisement
ಪ್ರವಚನದಿಂದ ಆಕ್ರೋಶಗೊಂಡ ಮುಸ್ಲಿಂ ಧರ್ಮದ ಉಳಿದ ಪಂಗಡದ ಮುಖಂಡರು ಅಹ್ಮದೀಯ ಪಂಗಡ ತತ್ವ ಪ್ರಚಾರ ನಡೆಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ಮುಸ್ಲಿಮರೇ ಅಲ್ಲ ನಿಮ್ಮ ತತ್ವ ಪ್ರಚಾರ ಮಾಡಬೇಡಿ ಎಂದು ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಮಹಿಳೆಗೆ ಬೆತ್ತಲೆ ಫೋಟೋ ಕಳಿಸಿ ಬ್ಲ್ಯಾಕ್‌ಮೇಲ್ – 5 ಲಕ್ಷಕ್ಕೆ ರೌಡಿ ಶೀಟರ್ ಡಿಮ್ಯಾಂಡ್
Advertisement
ಘಟನೆಯಲ್ಲಿ ಸಾದತ್ ಅಹಮದ್, ಸೈಯದ್ ಪಹೀಮ್, ಖಾಜಿ ಮೊಹಮದ್ ರಫಿ ಸೇರಿ ಆರು ಜನರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಹ್ಮದಿ ಮೌಲ್ವಿ ಖಾಜಿ ಮೊಹಮದ್ ರಫಿ ಎಂಬುವವರು ದೂರು ದಾಖಲಿಸಿದ್ದಾರೆ.
Advertisement
ಮಹೆಬೂಬ್, ಸಾಜಿದ್, ಮುಜೀಬ್, ಅಷ್ಪಕ್ ಎಂಬುವವರ ವಿರುದ್ದ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.