ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಲ್ಲಿ ಎಟಿಎಂ (ATM) ಗೆ ತುಂಬುವ ವಾಹನ ಸಮೇತ ಹಣ ಕಳವುಗೈದ ಚಾಲಕನನ್ನು ಕರ್ನಾಟಕದಲ್ಲಿ ಅರೆಸ್ಟ್ ಮಾಡಲಾಗಿದೆ.
ಬಂಧಿತನನ್ನು ಫಾರೂಕ್ ಎಂದು ಗುರುತಿಸಲಾಗಿದ್ದು, ಈತ ಸಿಎಂಎಸ್ (CMS) ಕಂಪನಿಯ ಎಟಿಎಂಗೆ ಹಣ ತುಂಬುವ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ಆಂಧ್ರಪ್ರದೇಶ (Andhrapradesh) ದ ಕಡಪ ನಗರದ ಎಸ್‍ಬಿಎಂ (SBM) ಬ್ಯಾಂಕ್‍ನಿಂದ 53.5ಲಕ್ಷ ಹಣ ಎಟಿಎಂ (ATM) ಗೆ ತುಂಬಲು ತಂದಿದ್ದ. ಆದರೆ ತದನಂತರ ಸಿಎಂಎಸ್ ಕಂಪನಿ ವಾಹನದಿಂದ ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡಿದ್ದಾನೆ.
Advertisement
Advertisement
ಇಟಿಯೋಸ್ ಕಾರಿಗೆ ಹಣ ಶಿಫ್ಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಪಿ 39 ಎಚ್ ಜಿ 3109 ಟಾಟಾ ಇಟಿಯೋಸ್ ಕಾರಿನಲ್ಲಿ ಹಣ ಇಟ್ಟುಕೊಂಡು ಪರಾರಿಗೆ ಯತ್ನಿಸಿದ್ದಾನೆ. ಆಂಧ್ರ ಗಡಿಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್ ಬಳಿ ಇಟಿಯೋಸ್ ಕಾರಿಗೆ ಪೊಲೀಸರು ತಡೆಕೋರಿದ್ದಾರೆ. ಪೊಲೀಸರನ್ನ ಕಂಡ ಕೂಡಲೇ ಫಾರೂಕ್ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್
Advertisement
Advertisement
ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಇಟಿಯೋಸ್ ಕಾರು ಸಮೇತ 53.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.