ಮಡಿಕೇರಿ: ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ರಸ್ತೆ ಮತ್ತು ಚರಂಡಿಯಂತಹ ‘ಸಣ್ಣ ಸಮಸ್ಯೆಗಳ’ ಬಗ್ಗೆ ಮಾತನಾಡಬೇಡಿ, ಆದರೆ ‘ಲವ್ ಜಿಹಾದ್’ (Love Jihad) ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ ಎಂದು ಹೇಳಿಕೆ ನೀಡಿರುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಹಿನ್ನೆಲೆ ಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು, ಛೀ.. ಥೂ.. ಎಂದು ಎಂಎಲ್‌ಸಿ ವಿಶ್ವನಾಥ್ (Vishwanath) ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ನಿಮಗೆ ಇದು ಸಣ್ಣ ಪುಟ್ಟ ವಿಷಯವೇ ಆದರೆ ಕೇರಿಯಲ್ಲಿ ಬದುಕುವವರ ಕಥೆ ಏನು? ಕೇರಿಯಲ್ಲಿ ಬದುಕುವ ನಮಗೆ ನಮ್ಮ ಮೂಲಭೂತ ಸೌಲಭ್ಯ ಮುಖ್ಯ. ನಮ್ಮ ಪಾಯಿಖಾನೆ ಏನಾಯ್ತು? ನಮ್ಮ ಚರಂಡಿ, ರಸ್ತೆ, ಮನೆ ಏನಾಯ್ತು? ನಮ್ಮ ಕೇರಿ ನೀರೇನಾಯ್ತು? ಇದುವೇ ನಮ್ಮ ಸಮಸ್ಯೆ. ಅದು ಬಿಟ್ಟು ಲವ್ ಜಿಹಾದ್ ಹೆಸರಿನಲ್ಲಿ ನೀವು ಜನರನ್ನು ಹೇಗೆ ದಿಕ್ಕು ತಪ್ಪಿಸುತ್ತೀರಿ ನೋಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ತಂದಿಟ್ಟು ತಮಾಷೆ ನೋಡುವ ಕಲೆ ಕುಮಾರಸ್ವಾಮಿ ಅವರಿಗೆ ಸಿದ್ಧಿಸಿದೆ: ಬಿಜೆಪಿ ಕಿಡಿ
Advertisement
Advertisement
ಒಂದು ರಾಜ್ಯ ಆಳುವ ಪಕ್ಷದ ಅಧ್ಯಕ್ಷ ಹೀಗೆ ಅರ್ಥವಿಲ್ಲದ ಮಾತುಗಳನ್ನಾಡಬಾರದು. ಛೀ.. ಥೂ… ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
Advertisement
Advertisement
ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿ ಎದುರು ನಾಯಿಮರಿ ರೀತಿ ನಿಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಕೂಡಾ ಸಿಎಂ ಆಗಿದ್ದವರು. ಈಗ ಬೊಮ್ಮಾಯಿ ನಮ್ಮ ಸಿಎಂ ಆಗಿದ್ದಾರೆ. ಯಾರೇ ಆದರೂ ಈ ರೀತಿ ಲಘುವಾಗಿ ಮಾತನಾಡಬಾರದು ಎಂದರು. ಇದನ್ನೂ ಓದಿ: ಬಿಜೆಪಿ, ಕಾಂಗ್ರೆಸ್ ನಾಯಕರ ಮಾತಿಗೆ ತಲೆ ಕೆಡಿಸಿಕೊಳ್ಳಲ್ಲ: ಜನಾರ್ದನ ರೆಡ್ಡಿ