ರಾಯಚೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ವಸಂತ್ ಕುಮಾರ್ (Vasanath Kumar) ಭರ್ಜರಿ ನಿದ್ದೆ ಮಾಡಿ ಸುದ್ದಿಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಅಧಿಕಾರಿಗಳ ಸಭೆಯಲ್ಲಿ ಮುಂದಿನ ಸಾಲಿನಲ್ಲೇ ಕುಳಿತಿದ್ದ ನೂತನ ಕಾಂಗ್ರೆಸ್ ಪರಿಷತ್ ಸದಸ್ಯ (Congress MLC) ಎ.ವಸಂತ ಕುಮಾರ್ ಕೆಲಕಾಲ ನಿದ್ದೆಗೆ ಜಾರಿದ್ದರು. ಇದನ್ನೂ ಓದಿ: ದರ್ಶನ್ ಕೊಲೆ ಮಾಡೋ ವ್ಯಕ್ತಿ ಅಲ್ಲ : ಮದ್ದೂರು ಎಂಎಲ್‌ಎ ಉದಯ್ ಗೌಡ ಸರ್ಟಿಫಿಕೇಟ್
ಕುಡಿಯುವ ನೀರಿನ ಸಮಸ್ಯೆ, ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ ಎ.ವಸಂತ ಕುಮಾರ್ ಸಭೆಯನ್ನೇ ಮರೆತುಬಿಟ್ಟು ಸಭೆಯಲ್ಲಿ ನಿದ್ದೆ ಮಾಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ದರ್ಶನ್ ಅಭಿಮಾನಿ – ಮಹಿಳೆ ವಿರುದ್ಧ ಮಂಡ್ಯದಲ್ಲಿ ದೂರು!
ಸಭೆಯಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ, ಡಾ.ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ್, ಸಂಸದ ಜಿ.ಕುಮಾರ್ ನಾಯಕ್ ಸೇರಿ ಹಲವರು ಭಾಗವಹಿಸಿದ್ದರು.
ಬಿತ್ತನೆ ಬೀಜ, ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.