ಚಿತ್ರದುರ್ಗ: ಲೋಕಸಭಾ ಚುನಾವಣೆಯ (Lok Sabha Election) ಬಿಜೆಪಿ (BJP) ಟಿಕೆಟ್ ತಮ್ಮ ಪುತ್ರನಿಗೆ ಕೈತಪ್ಪಿದ ಹಿನ್ನೆಲೆಯಲ್ಲಿ ರೆಬಲ್ ಆಗಿರುವ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ (M Chandrappa) ಕುಟುಂಬದ ಮನವೊಲಿಸಲು ಆಗಮಿಸಿದ್ದ ಬಿಜೆಪಿ ಎಂಎಲ್‌ಸಿ ರವಿಕುಮಾರ್ (MLC Ravikumar) ಸಂಧಾನ ಯತ್ನ ವಿಫಲವಾಗಿದೆ.
ಚಿತ್ರದುರ್ಗ (Chitradurga) ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾದಾಗಿನಿಂದ ಚಿತ್ರದುರ್ಗದ ಅಭ್ಯರ್ಥಿ ಗೋವಿಂದ ಕಾರಜೋಳ ಪ್ರಚಾರಕ್ಕೆ ಶಾಸಕ ಚಂದ್ರಪ್ಪ ಬೆಂಬಲಿಗರು ಅಡ್ಡಗಾಲಾಗಿದ್ದಾರೆ. ಅಲ್ಲದೇ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ತಮ್ಮ ಪುತ್ರ ರಘುಚಂದನ್ ಅವರನ್ನು ಕಣಕ್ಕಿಳಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಅವಧಿ ಮೀರಿ ಪಾರ್ಟಿ ಕೇಸ್ – ನಟ ದರ್ಶನ್ ಸೇರಿ 8 ಮಂದಿಗೆ ರಿಲೀಫ್
Advertisement
Advertisement
ಹೀಗಾಗಿ ಅಲರ್ಟ್ ಆದ ಬಿಜೆಪಿ ನಾಯಕರು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಕುಟುಂಬವನ್ನು ಮನವೊಲಿಸಲು ಬಿಜೆಪಿ ಪರವಾಗಿ ಸಂಧಾನಕಾರರಾಗಿ ಎಂಎಲ್‌ಸಿ ರವಿಕುಮಾರ್ ಅವರನ್ನು ಕಳುಹಿಸಿದೆ. ಶನಿವಾರ ರಾತ್ರಿ 8 ಗಂಟೆಗೆ ಆಗಮಿಸಿದ ಅವರು ಸುಮಾರು ಎರಡು ತಾಸು ಶಾಸಕರ ಮನೆಯಲ್ಲೇ ಕುಳಿತು ಶಾಸಕರ ಪತ್ನಿ ಚಂದ್ರಕಲಾ ಹಾಗೂ ಪುತ್ರ ರಘುಚಂದನ್ ಜೊತೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು INDIA ಒಕ್ಕೂಟದ ಒಗ್ಗಟ್ಟು ಪ್ರದರ್ಶನ
Advertisement
ಈ ವೇಳೆ ಶಾಸಕ ಚಂದ್ರಪ್ಪ ಮನೆಯಲ್ಲಿರಲಿಲ್ಲ. ಹೀಗಾಗಿ ರಘುಚಂದನ್‌ಗೆ ತುಂಬಾ ಅವಕಾಶಗಳಿವೆ. ಪಕ್ಷದ ಹಿರಿಯ ನಾಯಕರು ನಿಮ್ಮೊಂದಿಗೆ ಇರುತ್ತಾರೆ. ಮುಂದಿನ ದಿನಗಳಲ್ಲಿ ತಾನಾಗಿಯೇ ಅವಕಾಶ ನಿಮಗೆ ಒದಗಿ ಬರಲಿದ್ದು, ಬಿಜೆಪಿ ವಿರುದ್ಧ ಬಂಡಾಯವೇಳಬೇಡಿ. ಪಕ್ಷೇತರವಾಗಿ ಚುನಾವಣೆಗೆ ನಿಲ್ಲುವ ನಿರ್ಧಾರ ಕೈಬಿಡಿ ಎಂದು ಮನವಿ ಮಾಡಿದ್ದೇನೆಂದು ರವಿಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ
Advertisement
ಆದರೆ ಟಿಕೆಟ್ ನೀಡುವಂತೆ ರಘುಚಂದನ್ ಪಟ್ಟು ಹಿಡಿದಿದ್ದು, ತಮಗೆ ಆಗಿರುವ ಅನ್ಯಾಯದ ಬಗ್ಗೆ ರವಿಕುಮಾರ್ ಬಳಿ ಹೇಳಿಕೊಂಡಿದ್ದಾರೆ. ಹಾಗೆಯೇ ರವಿಕುಮಾರ್ ಅವರ ಮನವೊಲಿಕೆಗೆ ಜಗ್ಗದ ರಘುಚಂದನ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವರ ಸಂಧಾನ ವಿಫಲವಾಗಿದ್ದು, ಮತ್ತೆ ಸಂಧಾನಕ್ಕೆ ಬಿಜೆಪಿ ಯತ್ನಿಸಲಿದೆ. ಶಾಸಕ ಚಂದ್ರಪ್ಪ ಮಂತ್ರಿಯಾಗದಿದ್ದರೂ ಬಿಜೆಪಿಯಲ್ಲೇ ಉಳಿದಿದ್ದಾರೆ. ಇನ್ಮುಂದೆಯೂ ಇರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿ ಬಂದ ದಾರಿಗೆ ಸುಂಕವಿಲ್ಲವೆಂದು ಭಾವಿಸಿ ರವಿಕುಮಾರ್ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಸುನೀತಾ ಕೇಜ್ರಿವಾಲ್ ಭೇಟಿಯಾದ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಪತ್ನಿ
ಸಂಧಾನ ಸಭೆಯ ವೇಳೆ ಚಂದ್ರಪ್ಪ ಪುತ್ರ ರಘು ಚಂದನ್ ರವಿಕುಮಾರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ಬಿಎಸ್‌ವೈ ಅವರ ಮೇಲಿರುವ ಗೌರವ ಅಚಲ ಎಂದಿದ್ದಾರೆ. ಅಲ್ಲದೇ ಅವರ ಕುಟುಂಬ ಬಿಎಸ್ ವೈ ಕುಟುಂಬಕ್ಕೆ ತೋರಿದ ನಿಷ್ಠೆ ಹಾಗು ಪಕ್ಷದ ಏಳಿಗೆಗಾಗಿ ಮಾಡಿದ ತ್ಯಾಗಗಳನ್ನು ವಿವರಿಸಿದ್ದು, ತಮಗಾಗಿರುವ ಅನ್ಯಾಯದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಂಡಾಯ ಶಮನಗೊಳಿಸಲು ಬಿಜೆಪಿ ಚುನಾವಣಾ ಚಾಣಕ್ಯ ಅಖಾಡಕ್ಕೆ; ಏ.2ರಂದು ಅಮಿತ್ ಶಾ ರಾಜ್ಯ ಪ್ರವಾಸ