ಮೈಸೂರು: ಕಾಂಗ್ರೆಸ್‍ನೊಂದಿಗೆ ದೇಶದ್ರೋಹ ಹೊಕ್ಕಳು ಬಳ್ಳಿಯ ರೀತಿ ಅಂಟಿಕೊಂಡಿದೆ. ಬ್ರಿಟಿಷ್ ಕಾಲದಿಂದಲೂ ಹೊಂದಾಣಿಕೆ ಮಾಡಿಕೊಂಡೆ ಕಾಂಗ್ರೆಸ್ಸಿನವರು ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಕಿಡಿಕಾರಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಯುದಾಳಿ ನಡೆಸಿದೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬ್ರಿಟಿಷ್ ಕಾಲದಿಂದಲೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡೆ ಬಂದಿದೆ. ಕ್ರಾಂತಿಕಾರಿಗಳು ರಕ್ತಸುರಿಸಿ ಆದರೂ ಸ್ವಾತಂತ್ರ್ಯ ಪಡೆದುಕೊಳ್ತಿವಿ ಅಂತ ಹೋದರೆ ಕಾಂಗ್ರೆಸ್ ಒಪ್ಪಿರಲಿಲ್ಲ. ಬ್ರಿಟಿಷ್ ಬಳಿ ದೇಶ ನಿಮ್ಮ ಹಿಡಿತದಲ್ಲೇ ಇರಲಿ. ಆದ್ರೆ ನಮಗೆ ಅಧಿಕಾರ ಕೊಡಿ ಸಾಕು ಅಂತ ಆಗಿನಿಂದಲೂ ಕಾಂಗ್ರೆಸ್ ಅಧಿಕಾರ ಅನುಭವಿಸಿಕೊಂಡು ಬಂದವರು ಎಂದು ಟೀಕಿಸಿದ್ದಾರೆ.
Advertisement
Advertisement
ಮುಂಬೈ ಮೇಲೆ ದಾಳಿ ಮಾಡಿದಾಗ ಇವರು ಪಾಕಿಸ್ಥಾನದ ಮೇಲೆ ದಾಳಿ ಮಾಡಬೇಕಿತ್ತು. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿಗೆ ಪಾಕಿಸ್ತಾನ ಗಡಿ ದಾಟಿ ಹೋಗಲು ತಾಕತ್ ಇಲ್ಲ. ಆಗ ಕಾಂಗ್ರೆಸ್ ಅವರು ಯುದ್ಧ ಮಾಡಿದ್ದರೆ ಜನರು ಇವರನ್ನು ಹೊಗಳುತ್ತಿದ್ದರು. ಭಾರತದ ಗಡಿ ದಾಟಿ ಯೋಧರ ಶಿರ ತೆಗೆದುಕೊಂಡು ಹೋದಾಗ ಇವರು ಏನು ಮಾಡಲಿಲ್ಲ. ಈಗ ಇವರು ಚುನಾವಣೆ ಹಿನ್ನೆಲೆ ಎಂದು ಹೇಳುತ್ತಾರೆ. ಇವರಿಗೆ ಇದು ಅಭ್ಯಾಸವಾಗಿ ಹೋಗಿದೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ದೇಶದ ಸುರಕ್ಷಿತ ದೃಷ್ಟಿಯಿಂದ ಸರ್ಕಾರ ವಾಯುದಾಳಿ ನಡೆಸಿದೆ. ಇವರಿಗೆ ಯಾವಾಗಲೂ ಹೊಂದಾಣಿಗೆ ಬೇಕು. ಹೊಂದಾಣಿಕೆಯಿಂದ ಇವರು ಅಧಿಕಾರ ಅನುಭವಿಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಉಗ್ರರಿಗೆ ತಕ್ಕ ಉತ್ತರ ನೀಡಿದ್ದಾರೆ. ಯುದ್ಧ ವಿಚಾರದಲ್ಲಿ ಮೋದಿ ಎದೆಗಾರಿಕೆ ತೋರಿದ್ದಾರೆ. ಈ ದಿಟ್ಟ ನಿರ್ಧಾರಗಳು ಜನರಿಗೆ ಆಕರ್ಷಣೆಯಾಗಿವೆ. ಇದನ್ನೇ ಯಡಿಯೂರಪ್ಪ ಅವರು ಹೇಳಿರೋದು. ಕಾಂಗ್ರೆಸ್‍ನವರು ಈ ಹೇಳಿಕೆಯನ್ನು ಬೇರೆ ರೀತಿಯಾಗಿ ಹೇಳುತ್ತಿದ್ದಾರೆ ಅಷ್ಟೇ ಎಂದು ಬಿಜೆಪಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಹೆಚ್.ಡಿ.ದೇವೇಗೌಡ ಅಥವಾ ನಿಖಿಲ್‍ಕುಮಾರಸ್ವಾಮಿ ಸ್ಪರ್ಧೆ ವಿಚಾರ ಪ್ರತಿಕ್ರಿಯಿಸಿ, ನಾಲ್ಕು ಮುಕ್ಕಾಲು ವರ್ಷದಲ್ಲಿ ಮೈಸೂರಿನಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಹಿಂದೆ ಯಾವ ಸಂಸದ ಮಾಡದ ಕೆಲಸ ಮಾಡಿದ್ದೇನೆ. ಮೋದಿ ಗೆಲ್ಲಿಸಲು ಜನರು ಮುಂದಾಗಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆದರು ಕೂಡ ಏನು ಆಗಲ್ಲ. ಇನ್ನೊಮ್ಮೆ ನಾನು ಎಂಪಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv