ಬೆಂಗಳೂರು: ಟಿ20 ವರ್ಲ್ಡ್ ಕಪ್ (T20 World Cup 2024) ಗೆದ್ದ ಟೀಂ ಇಂಡಿಯಾ ತಂಡಕ್ಕೆ ವಿಧಾನ ಪರಿಷತ್ ಕಲಾಪದಲ್ಲಿ ಅಭಿನಂದನೆ ಸಲ್ಲಿಸಲಾಯ್ತು. ಬಿಜೆಪಿ ಸದಸ್ಯ ಡಿ.ಎಸ್.ಅರುಣ್ (D.S.Arun) ಕಲಾಪದಲ್ಲಿ ಅಭಿನಂದನೆ ನಿರ್ಣಯ ಮಂಡಿಸಿದರು. ಅರುಣ್ ಪ್ರಸ್ತಾಪಕ್ಕೆ ಇಡೀ ಸದನ ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ (Prakash Rathod), ರಾಹುಲ್ ದ್ರಾವಿಡ್ ನಮ್ಮ ಕರ್ನಾಟದ ಹೆಮ್ಮೆ, ಅವರನ್ನ ಕರೆದು ಕರ್ನಾಟಕ ಸರ್ಕಾರ ಸನ್ಮಾನ ಮಾಡಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ರಾಹುಲ್ ದ್ರಾವಿಡ್‌ಗೆ ಸನ್ಮಾನ ಮಾಡಿದ್ದಾರೆ. ಹಣದ ರೂಪದಲ್ಲಿ ಗೌರವ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಕೂಡಾ ದ್ರಾವಿಡ್ ಕರೆದು ಸನ್ಮಾನ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಕಾಶ್ ರಾಥೋಡ್ ಒತ್ತಾಯ ಮಾಡಿದರು. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್ – 7ನೇ ವೇತನ ಆಯೋಗದ ಶಿಫಾರಸು ಜಾರಿ: ಸಿಎಂ ಘೋಷಣೆ
Advertisement
Advertisement
ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ರಾಹುಲ್ ದ್ರಾವಿಡ್‌ರಂತೆ ಫೈನಲ್ ಮ್ಯಾಚ್ ಗೆಲ್ಲಲು ಕಾರಣರಾದ ನಮ್ಮ ಕರ್ನಾಟಕದ ಅಳಿಯ ಸೂರ್ಯಕುಮಾರ್ ಯಾದವ್‌ಗೂ ಸನ್ಮಾನ ಮಾಡಬೇಕು ಅಂತ ಮನವಿ ಮಾಡಿದರು.