ಮಂಡ್ಯ: ಜೆಡಿಎಸ್‍ನಲ್ಲಿ ಹಣವಿದ್ದರೇ ಮಾತ್ರ ಚುನಾವಣೆಗೆ ಟಿಕೆಟ್ ನೀಡ್ತಾರೆ, ಹಣ ಇಲ್ಲ ಅಂದ್ರೆ ಟಿಕೆಟ್ ಸಿಗೋಲ್ಲಾ ಎಂದು ಜೆಡಿಎಸ್‍ನ ಎಂಎಲ್‍ಸಿ ಮರಿತಿಬ್ಬೇಗೌಡ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಮೇಲೆ ಹಾಗೂ ನಾಯಕರ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಆರೋಪ ಮಾಡಿ ವಾಗ್ದಾಳಿ ಮಾಡುತ್ತಿತ್ತು. ಆದರೆ ಇದೀಗ ಜೆಡಿಎಸ್ ಎಂಎಲ್‍ಸಿ ಮರಿತಿಬ್ಬೇಗೌಡ ಸ್ವಪಕ್ಷದ ನಾಯಕರ ಮೇಲೆ ಗಂಭೀರ ಆರೋಪ ಮಾಡುವುದ ಜೊತೆಗೆ ತಮ್ಮ ಅಸಮಧಾನ ತೊಡಿಕೊಂಡು ವಾಗ್ದಾಳಿ ನಡಸಿದ್ದಾರೆ.
Advertisement
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆಪ್ತ ಕಿಲಾರ ಜಯರಾಂ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಗೆ ಟಿಕೆಟ್ ಕೇಳಿದಕ್ಕೆ ಆತನ ಬಳಿ ಹಣ ಇಲ್ಲ. ಅವನಿಗೆ ಟಿಕೆಟ್ ಬೇಡಾ ಎಂದು ಜೆಡಿಎಸ್ ವರಿಷ್ಠರು ಹೇಳಿದ್ದರು. ಇದಾದ ಬಳಿಕ ಪಕ್ಷದ ಬಾವುಟ ಹಿಡಿಯದ ಹೆಚ್.ಕೆ.ರಾಮುಗೆ ಟಿಕೆಟ್ ನೀಡಿದ್ದಾರೆ. ಈ ಮೂಲಕ ಜೆಡಿಎಸ್‍ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಕೊಡುವುದು ತಿಳಿಯುತ್ತದೆ. ಜೆಡಿಎಸ್‍ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ, ಇಲ್ಲಿ ಹಣ ಇದ್ದವರಿಗೆ ಬೆಲೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿ ಸೋಲಲು ಶಾಸಕರು, ಕಾರ್ಯಕರ್ತರು, ಜನರು ಕಾರಣರಲ್ಲ, ಇದಕ್ಕೆ ಅವರ ಕುಟುಂಬದಲ್ಲಿ ತೆಗೆದುಕೊಂಡ ನಿರ್ಣಯಗಳೇ ಕಾರಣ. ಕುಟುಂಬ ರಾಜಕೀಯದಿಂದಲೇ ಈ ಸೋಲು ಉಂಟಾಗಿದೆ. ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿದ ಮೇಲೆ ದೇವೇಗೌಡರು ಚುನಾವಣೆಗೆ ನಿಲ್ಲುವ ಅವಶ್ಯಕತೆ ಇರಲಿಲ್ಲ. ನಿಖಿಲ್ ಮಂಡ್ಯಗೆ ಬೇಡಾ ಎಂದು ನಾನು ಒತ್ತಿ ಹೇಳಿದೆ. ಹೀಗಿದ್ದರೂ, ನನ್ನ ಮಾತನ್ನು ಕೇಳದೆ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರಿಂದ ಸೋತರು. ಈ ಸೋಲಿಗೆ ಯಾರು ಕಾರಣರಲ್ಲ ಸ್ವತಃ ದೇವೇಗೌಡರ ಕುಟುಂಬವೇ ಇದಕ್ಕೆ ಮೂಲ ಕಾರಣ ಎಂದು ಕಿಡಿಕಾರಿದರು.
ನನಗೆ ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್‍ನಲ್ಲಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ನನ್ನ ಸೋಲಿಸಬೇಕೆಂದು ಪಕ್ಷದ ವರಿಷ್ಠರು, ನಾಯಕರು ಪ್ಲಾನ್ ಮಾಡಿದ್ದರು. ನಾನು ಪಟ್ಟ ಶ್ರಮದಿಂದ ನಾನು ಆಯ್ಕೆಯಾಗಿ ಬಂದೆ. ಇದಾದ ಬಳಿಕವೂ ಪಕ್ಷದಲ್ಲಿ ಒಂದೆಲ್ಲ ಒಂದು ವಿಚಾರಕ್ಕೆ ನನಗೆ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಪ್ರವಾಸಿಗರ ಆಕರ್ಷಣೆಗೆ ನಿರ್ಮಾಣವಾಗಿದ್ದ ಮಲ್ಪೆಯ ತೇಲುವ ಸೇತುವೆ ಸ್ಥಗಿತ
ಆದರೂ ನಾನು ಇಷ್ಟು ದಿನ ಸಹಿಸಿಕೊಂಡು ಬಂದಿದ್ದೆ. ಇದೀಗ ಇವರ ನಡವಳಿಕೆಗೆ ಬೇಸತ್ತು ಮಾತನಾಡುತ್ತಿದ್ದೇನೆ. ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗೆ ನನ್ನ ಬೆಂಬಲವಿಲ್ಲ, ಯಾರಿಗಾದರೂ ಮತ ಹಾಕಿ ಜೆಡಿಎಸ್ ಅಭ್ಯರ್ಥಿ ರಾಮುಗೆ ಮತ ಹಾಕಬೇಡಿ ಎಂದು ಬಹಿರಂಗವಾಗಿ ಸಭೆಯಲ್ಲಿ ವಾಗ್ದಾಳಿ ನಡೆಸಿದರು.
ಜಿ.ಟಿ. ದೇವೇಗೌಡ ಬಳಿಕ ಇದೀಗ ಎಂಎಲ್‍ಸಿ ಮರಿತಿಬ್ಬೇಗೌಡ ಜೆಡಿಎಸ್ ನಾಯಕರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಇದರಿಂದ ಜೆಡಿಎಸ್‍ಗೆ ಮತ್ತಷ್ಟು ಟ್ರಬಲ್ ನೀಡಿದೆ. ಈ ಡ್ಯಾಮೆಜ್‍ನ್ನು ಕಂಟ್ರೋಲ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜೆಡಿಎಸ್‍ಗೆ ಮತ್ತಷ್ಟು ಆಘಾತ ಉಂಟಾಗಲಿದೆ. ಇದನ್ನೂ ಓದಿ: ದೆಹಲಿಯ ಶಾಹೀನ್‌ಬಾಗ್ ಪ್ರದೇಶದಲ್ಲಿ ಜೆಸಿಬಿಗಳ ಘರ್ಜನೆ