ಬೆಂಗಳೂರು: ಸಚಿವ ಬೈರತಿ ಸುರೇಶ್ ಒಬ್ಬ ದುರಹಂಕಾರಿ. ಅವನೊಬ್ಬ ದುರ್ಯೋಧನ, ದುಶ್ಯಾಸನ ಇದ್ದಂತೆ. ಅದೇ ಸಿದ್ದರಾಮಯ್ಯನವರನ್ನು ಹಾಳು ಮಾಡ್ತಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ (H.Vishwanath) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸುರೇಶ್ ಪಾತ್ರವಿದೆ. ಅವನನ್ನ ಹತ್ತಿರ ಬಿಟ್ಟುಕೊಂಡಿದ್ದೇ ತಪ್ಪು. ಮೊದಲು ಅವನನ್ನ ಒದ್ದು ಹೊರಗೆ ಹಾಕಬೇಕು. ಮುಡಾ ಕಮಿಷನರ್ ಆಗಿದ್ದ ನಟೇಶನನ್ನ ಹೊರಗೆ ಹಾಕ್ಬೇಕು. ಸರ್ಕಾರದ ಆಸ್ತಿ ಅಷ್ಟು ಲೂಟಿ ಮಾಡ್ತಿದ್ದಾರೆ. ಅಷ್ಟು ಲೂಟಿ ಮಾಡಿದ ಆಯುಕ್ತರ ಮೇಲೂ ಕ್ರಮವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ನಾನು ಮುಡಾ ಪ್ರಕರಣದಲ್ಲಿ (MUDA Case) ಸೈಲೆಂಟ್ ಆಗಿಲ್ಲ. ದಿನವೂ ಮಾತನಾಡೋಕೆ ಆಗುತ್ತಾ? ನಾನು ಮೊದಲೇ ಸಿದ್ದರಾಮಯ್ಯನವರಿಗೆ ಸರೆಂಡರ್ ಮಾಡಿ ಅಂದಿದ್ದೆ. ಅದ್ಯಾಕೋ ಅವರು ಸುಮ್ಮನಾದರು. ಸ್ವತಃ ಮೈಸೂರಿನವರಾದ ಸಿದ್ದರಾಮಯ್ಯ (Siddaramaiah) ಅವರಿಗೂ ಮೂಡಾ ರಿಪೇರಿ ಮಾಡೋಕೆ ಆಗಲಿಲ್ಲ ಅಂದ್ರೆ ಹೇಗೆ? ಬಡವರಿಗೆ ಸೈಟ್ ಕೊಡಿ ಅಂದ್ರೆ ಕೊಡಲಿಲ್ಲ. ಇದನ್ನ ಸಿದ್ದರಾಮಯ್ಯ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಎಂದು ಸಿಎಂ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.