– ಬಿಜೆಪಿಯಲ್ಲಿ 4 ಗುಂಪು ಇರೋದು ಸತ್ಯ ಎಂದ ಎಂಎಲ್‌ಸಿ
ಮೈಸೂರು: ಇದು ಸಿದ್ದರಾಮಯ್ಯ (Siddaramaiah) ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ. ಈ ತೀರ್ಪಿನಿಂದ ಹಗರಣಗಳು ಮುಚ್ಚಿ ಹೋಗುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಉಪ ಚುನಾವಣೆಯಲ್ಲಿ (BY Poll) ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ. ಈ ತೀರ್ಪಿನಿಂದ ಹಗರಣಗಳು ಮುಚ್ಚಿ ಹೋಗುವುದಿಲ್ಲ, ಗೆದ್ದವರು ಬೀಗುವ ಅಗತ್ಯವೂ ಇಲ್ಲ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್
ಹಣ, ಹೆಂಡ, ಶಿಫಾರಸ್ಸು ಇಂತಹದರ ಮೇಲೆಯೆ ಚುನಾವಣೆ ನಡೆಯುವುದು. ಈ ಚುನಾವಣೆಯೂ ಅದೇ ರೀತಿ ನಡೆದಿದೆ. ಮುಡಾ ಹಗರಣ ಮೈಸೂರು ವ್ಯಾಪ್ತಿಯದ್ದು, ಹೀಗಾಗಿ ಅದು ಚನ್ನಪಟ್ಟಣದಲ್ಲಿ ವರ್ಕ್ ಆಗುತ್ತೆ ಅಂದುಕೊಳ್ಳುವುದು ಬೇಡ. ಸಿದ್ದರಾಮಯ್ಯ ಸರ್ಕಾರಕ್ಕೆ ಜನಕೊಟ್ಟ ತೀರ್ಪು ಇದಲ್ಲ. ಉಪಚುನಾವಣೆಗಳು ಯಾವ ರೀತಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೂರೂ ಕ್ಷೇತ್ರಗಳ ಸೋಲಿನಿಂದ ನಮಗೆ ನಿರಾಸೆ ಆಗಿರೋದು ಸತ್ಯ: ವಿಜಯೇಂದ್ರ
ಬಿಜೆಪಿ 4 ಗುಂಪು ಇರೋದು ಸತ್ಯ:
ಹಗರಣದ ಆರೋಪ ಹೊತ್ತವರು, ಈ ತೀರ್ಪುನಿಂದ ಖುಷಿ ಪಡುವ ಅಗತ್ಯ ಇಲ್ಲ. ನಿಖಿಲ್ ಸೋತಿದ್ದಾರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಬಿಜೆಪಿಯವರು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿದರು, ಆದರೂ ಅದು ಫಲಕೊಟ್ಟಿಲ್ಲ. ಬಿಜೆಪಿ 4 ಗುಂಪು ಇರೋದು ಸತ್ಯ. ಅವಕಾಶ ಕೊಟ್ಟವರಿಗೆ ಮತ್ತೆ ಮತ್ತೆ ಅವಕಾಶ ಕೊಟ್ಟಿದ್ದಾರೆ ವಿಶ್ವನಾಥ್ ಹೇಳಿದ್ದಾರೆ.