– ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಅಂತ ವ್ಯಕ್ಯಿ ರಾಜಕಾರಣ ಮೆರೆಯುತ್ತಿದೆ ಎಂದ ಎಂಎಲ್‌ಸಿ
ಹಾಸನ: ಹೊಗಳಿಕೆಯಿಂದ ಎಲ್ಲಾ ರಾಜಯಕೀಯ ಪಕ್ಷಗಳು (Political Parties) ಹಾಳಾಗಿ ಹೋಗಿವೆ. ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ (H Vishwanath) ಬೇಸರ ಹೊರಹಾಕಿದರು.
ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಗಳಿಕೆಯಿಂದ ಎಲ್ಲಾ ರಾಜಕೀಯ ಪಕ್ಷಗಳು ಹಾಳಾಗಿ ಹೋಗಿವೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾದ, ವಿವಾದ, ಪ್ರತಿವಾದ ಟೀಕೆ ಸಹಜ. ಅದು ಇಲ್ಲದೇ ಇದ್ದರೇ ಚಮಚಾಗಿರಿ ಮಾಡಿಕೊಂಡು ಕೂರಬೇಕಾಗುತ್ತದೆ. ಯಾರನ್ನೋ ಮೆಚ್ಚಿಸಲು ನೀನು ಸತ್ಯವಂತ ಎಂದು ಹೇಳೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಂದಿನ ಶುಕ್ರವಾರದಿಂದ ಚಾಮುಂಡಿ ಬೆಟ್ಟದಲ್ಲಿ ಆಷಾಢ ಪೂಜೆ ಆರಂಭ – ವಿಶೇಷ ಪಾಸ್ ರದ್ದು
ಭ್ರಷ್ಟನನ್ನ ಭ್ರಷ್ಟ ಎಂದೇ ಹೇಳಬೇಕು. ಹಾಗೆ ಹೇಳಿದರೆ ವಿಶ್ವನಾಥ್ ಎಲ್ಲರ ಬಗ್ಗೆನು ಮಾತಾಡ್ತಾರೆ ಅಂತಾರೆ. ಜನತಂತ್ರ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಇಲ್ಲದೇ ಬರೀ ಹೊಗಳಿಕೆ ಇದ್ದರೆ ಹೇಗೆ? ಎಲ್ಲಾ ರಾಜಕೀಯ ಪಕ್ಷಗಳು ಹೊಗಳಿಕೆಯಿಂದಲೇ ಹಾಳಾಗಿ ಹೋಗಿವೆ. ಒಂದು ಪಕ್ಷದ ಕಾರ್ಯಕರ್ತರು ನಾಯಕ ಏನೇ ತಪ್ಪು ಮಾಡಿದರೂ ಅವನನ್ನು ಹೊಗಳುತ್ತಾರೆ. ನೀನು ತಪ್ಪು ಮಾಡಿದ್ದೀಯ ಅಂತ ಹೇಳುವುದಿಲ್ಲ. ಹಾಗಾಗಿ ಇವತ್ತು ಪಕ್ಷ ರಾಜಕಾರಣ ಹಾಳಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣದ ಬಗ್ಗೆ ವಿಸ್ತೃತ ಚರ್ಚೆ ಬಳಿಕ ಸೂಕ್ತ ತೀರ್ಮಾನ: ಎಂ.ಬಿ.ಪಾಟೀಲ್
ಇಂದು ಹೊಗಳುವಿಕೆಯಿಂದ ಪಕ್ಷ ರಾಜಕಾರಣ ಹಾಳಾಗಿ, ವ್ಯಕ್ತಿ ರಾಜಕಾರಣ ಮೆರೆಯುತ್ತಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಹೀಗೆ ವ್ಯಕ್ಯಿ ರಾಜಕಾರಣ ಶುರುವಾಗಿದೆ. ದೇಶದಲ್ಲೇ ಈಗ ಪಕ್ಷ ರಾಜಕಾರಣ ಇಲ್ಲದಂತಾಗಿದೆ. ಎಲ್ಲರೂ ಮಾಡುವ ತಪ್ಪನ್ನೇ ನಾನು ಮಾಡಿದ್ರೆ ವಿಶೇಷ ಹೇಗಾಗ್ತೀನಿ? ಹಾಗಾಗಿ ನಾನು ಆ ತಪ್ಪು ನಾನು ಮಾಡೋಕೆ ಹೋಗಲ್ಲ. ಮತ್ತೊಬ್ಬನನ್ನು ಟೀಕೆ ಮಾಡಬೇಕಾದ್ರೆ ಮೊದಲು ನಾನು ಸರಿ ಇರಬೇಕು. ಇದನ್ನ ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಹೊಸ ಕ್ರಿಮಿನಲ್ ಕಾನೂನಿನಡಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಸ್ ದಾಖಲು