ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಮುಂಬೈ ಟೀಂನಲ್ಲಿ ದೊಡ್ಡ ಬಿರುಕು ಮೂಡಿದೆ. ಇಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯವೈಖರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಮಿತ್ರ ಮಂಡಳಿಯಲ್ಲಿ ಬಿರುಕನ್ನು ಬಹಿರಂಗಪಡಿಸಿದರು.
Advertisement
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಬರುವಾಗ ನಮಗೆ ಫೋನ್ ಮಾಡಿ ಸಭೆಗೆ ಆಹ್ವಾನಿಸುತ್ತಾರೆ. ಎರಡು ಮೂರು ಗಂಟೆ ಮುಂಚಿತವಾಗಿ ಸಭೆಗೆ ಬರುವಂತೆ ಫೋನ್‍ನಲ್ಲಿ ಆಹ್ವಾನ ಕೊಡುತ್ತಾರೆ. ನಾವೇನು ನಿರುದ್ಯೋಗಿಗಳಾ? ನೀವು ಕರೆದ ಕೂಡಲೇ ಓಡಿ ಬರೋಕೆ. ಒಂದು ದಿನ ಮುಂಚಿತವಾಗಿ ಜನಪ್ರತಿನಿಧಿಗಳಿಗೆ ಸಭೆಗೆ ಆಹ್ವಾನ ನೀಡಬೇಕು. ನಮ್ಮನ್ನು ಟೇಕ್ ಇಟ್ ಫ್ಹಾರ್ ಗ್ರ್ಯಾಟೆಂಡ್ ಅಂದು ಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಯಾವ ಪಿಕ್ಚರ್, ರೀಲು ಇಲ್ಲ: ಸಚಿವ ಆನಂದ್ ಸಿಂಗ್‍ಗೆ ಎಸ್‍ಟಿಎಸ್ ಟಾಂಗ್https://t.co/RaWnLqQlcU#STSomashekhar #AnandSingh #KannadaNews #BJP #CMBommai #BasarajBommai
— PublicTV (@publictvnews) August 16, 2021
Advertisement
ಮೈಸೂರಿಗೆ ಒಂದು ಸಚಿವ ಸ್ಥಾನ ಕೊಡಿ ಅಂತಾ ಸಿಎಂ ಬಳಿ ಕೇಳಿದ್ದೇನೆ. ಮೈಸೂರು ವಿಭಾಗಕ್ಕೆ ಸಚಿವರೇ ಇಲ್ಲ. ರಾಜಕೀಯವಾಗಿ ಶಕ್ತಿ ಇರುವ ವಿಭಾಗವಿದು. ಮೈಸೂರಿನ ರಾಮದಾಸ್ ರನ್ನು ಮಂತ್ರಿ ಮಾಡಿ. ಅವರನ್ನು ಯಾಕೆ ಮಂತ್ರಿ ಮಾಡಬಾರದು? ನಾಲ್ಕು ಸ್ಥಾನ ಖಾಲಿ ಇದೆ. ರಾಮದಾಸ್ ಹಿರಿಯರು ಇದ್ದಾರೆ. ಅವರಿಗೆ ಒಂದು ಸ್ಥಾನ ಕೊಡಿ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವ್ಯಂಗ್ಯ