DistrictsKarnatakaKolarLatestMain Post

ಸಿದ್ದರಾಮಯ್ಯ ಕೋಲಾರಕ್ಕೆ ಬಂದ್ರೆ ಸೋಲಿನ ವಿದಾಯ ಖಚಿತ: ಎಂಎಲ್‍ಸಿ ಗೋವಿಂದರಾಜು

Advertisements

ಕೋಲಾರ: ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದ್ರೆ ಸೋಲಿನ ವಿದಾಯ ಖಚಿತ, ಕೋಲಾರದ ಜನ ಸೋಲಿಸಿ ಸೆಂಡ್ ಅಪ್ ಮಾಡಿ ಕಳುಹಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಭವಿಷ್ಯ ನುಡಿದರು.

ಕೋಲಾರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕಂದಾಯ ಸಚಿವ ಆರ್.ಅಶೋಕ್ ಹೇಳಿದಂತೆ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಹೆಸರಲ್ಲಿ ಅವರಿಗೆ ಸೆಂಡ್ ಅಪ್ ನೀಡಲಾಗುತ್ತಿದೆ ಎಂದು ಟೀಕಿಸಿದ ಅವರು, ಕೋಲಾರದ ಜನ ಸ್ವಾಭಿಮಾನಿಗಳು. ಕೋಲಾರದಲ್ಲಿ ಶಾಸಕರಾಗುವಂತಹ ಅಭ್ಯರ್ಥಿಗಳು ಇಲ್ವಾ ಎಂದು ಪ್ರಶ್ನೆ ಮಾಡಿದರಲ್ಲದೆ, ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಕೊಟ್ಟಿದ್ದು, ಕೋಲಾರ ಜಿಲ್ಲೆಯಾಗಿದೆ ಎಂದು ತಿಳಿಸಿದರು.

ಕೋಲಾರದಿಂದ ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ಬೈರೇಗೌಡ ಅಂತಹವರನ್ನು ಗೆಲ್ಲಿಸಿದ ಕೀರ್ತಿ ಇಲ್ಲಿಯ ಜನರಿಗಿದೆ. ನಿಷ್ಠಾವಂತ ನಾಯಕರನ್ನು ಅಂದೆ ಕೋಲಾರ ಜಿಲ್ಲೆ ಕೊಟ್ಟಿದೆ. ಈಗಿರುವಾಗ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದು ಪುಂಗಿ ಊದುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ದ್ರೌಪದಿ ಮುರ್ಮು ಗೆಲುವಿಗೆ ಪುಟಿನ್ ಅಭಿನಂದನೆ ಸಂದೇಶ

Congress

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತು ಕೇಳಿ ಶ್ರೀನಿವಾಸಗೌಡರು ಬಲಿಪಶು ಆಗುವುದು ಖಚಿತ. ಈಗ ಸಿದ್ದರಾಮಯ್ಯ ಬಂದ್ರೆ ಸೋಲಿಸಿ ಸನ್ಮಾನ ಮಾಡಿ ಕಳುಹಿಸಿಲಾಗುವುದು ಎಂದ ಅವರು, ಶ್ರೀನಿವಾಸಗೌಡರು ಕೋಲಾರ ಕ್ಷೇತ್ರದಲ್ಲಿ ಶಾಸಕರಾಗಿ ಗೆದ್ದರೆ ಅವರ ಮನೆ ಮುಂದೆ ವಾಚ್‍ಮೆನ್ ಆಗಿ ಕೆಲಸ ಮಾಡುವೆ. ಮತ್ತೆ 2023ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತೀನಿ ಎಂದಿರುವ ಶಾಸಕ ಕೆ.ಶ್ರೀನಿವಾಸಗೌಡ್ರು ನಿಜವಾಗಲು ಗಂಡಸರಾಗಿದ್ದರೆ ಗೆದ್ದು ತೋರಿಸಲಿ ಎಂದು ಸವಾಲೆಸೆದರು. ಇದನ್ನೂ ಓದಿ: ಬಿಎಸ್‍ವೈ ಅಂದ್ರೆ ಒಂದು ದೊಡ್ಡ ಶಕ್ತಿ, ಅವರ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ: ಬೊಮ್ಮಾಯಿ

Live Tv

Leave a Reply

Your email address will not be published.

Back to top button