ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ 116 ಕೋಟಿ ರೂಪಾಯಿ ಆಸ್ತಿ ಒಡೆಯ ಬಿ.ಸೋಮಶೇಖರ್ ಕಣಕ್ಕಿಳಿದಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸೋಮಶೇಖರ್ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಇವರು ನೆಲೆಸಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಹೊಂದಿದ್ದಾರೆ. ಇವರಿಗೆ ಪತ್ನಿ ಮಂಜುಳಾ ಹಾಗೂ ಮೂವರು ಮಕ್ಕಳು ಇದ್ದಾರೆ.
Advertisement
Advertisement
ಸೋಮಶೇಖರ್ ಅವರ ಹೆಸರಲ್ಲಿ 35 ಕೋಟಿ ರೂ. ಚರಾಸ್ತಿ ಹಾಗೂ 80 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಐದು ಬ್ಯಾಂಕುಗಳಲ್ಲಿ 6.32 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. 28.52 ಕೋಟಿ ಹಣವನ್ನು ಉದ್ಯಮದಲ್ಲಿ ತೊಡಗಿಸಿದ್ದಾರೆ. ಇದರಲ್ಲಿ ಬಹುತೇಕ ಹಣವನ್ನು ಜಮೀನು ಮುಂಗಡ ನೀಡಿದ್ದಾರೆ. 30 ಲಕ್ಷ ಮೌಲ್ಯದ ರೇಂಜ್ ರೋವರ್ ಕಾರು, ಪತ್ನಿಗೆ ಇನ್ನೊವಾ ಕಾರು ಇದೆ. ಇದನ್ನೂ ಓದಿ: ಅಕಾಲಿಕ ಮಳೆ – ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಕರೆದ ಸಿಎಂ
Advertisement
ಸೋಮಶೇಖರ್ ಅವರ ಪತ್ನಿ ಮಂಜುಳಾ ಅವರ ಬಳಿಯೂ 1.4 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇವೆ. 22.4 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಇದೆ. ಪ್ರಸ್ತುತ ಸೋಮಶೇಖರ್ ಅವರ ಬಳಿ 116 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಇವರ ಪತ್ನಿಯೂ ಕೂಡ 23 ಕೋಟಿ ರೂ. ಆಸ್ತಿಯ ಒಡತಿ ಎಂದು ಘೋಷಿಸಿಕೊಂಡಿದ್ದಾರೆ.
Advertisement
ಅದು ಅಲ್ಲದೇ ಮಂಜುಳಾ ಅವರು 91 ಲಕ್ಷ ಹಾಗೂ ಸೋಮಶೇಖರ್ 71 ಲಕ್ಷ ರೂ. ಸಾಲ ಮಾಡಿದ್ದಾರೆಂದು ಇಂದು ಸಲ್ಲಿಸಿರುವ ನಾಮಪತ್ರದ ಆಸ್ತಿ ವಿವರಣೆಯಲ್ಲಿ ಘೋಷಿಸಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆ