ಚಿಕ್ಕಮಗಳೂರು: ಪ್ರಧಾನಿ ಕೊಲ್ಬೇಕು ಅಂದವ್ರ ಮೇಲೆ ಸುಮೋಟೋ ಕೇಸ್ ಆಗಲಿಲ್ಲ. ಆದರೆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಕೊಟ್ಟವರ ಮೇಲೆ ಎಫ್‍ಐಆರ್ ಆಗಿದೆ ಎಂದು ಎಂಎಲ್‍ಸಿ ಸಿ.ಟಿ.ರವಿ (C.T Ravi) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಲ್ಲಿ (Chikkamagaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಮಂಡ್ಯದ ಮದ್ದೂರು ಪ್ರಕರಣ (Maddur Violence) ಸಂಬಂಧ ತಮ್ಮ ವಿರುದ್ಧ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ದಾಖಲಾದ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದೇಶದ ಪ್ರಧಾನಿಯನ್ನ ಕೊಲ್ಬೇಕು ಎಂದವರ ಮೇಲೆ ಸುಮೋಟೋ ಕೇಸ್ ದಾಖಲಾಗಲಿಲ್ಲ. ಆದರೆ, ಕ್ರಿಯೆಗೆ ತಕ್ಕ ಕೊಟ್ಟರೆ ಮಾತ್ರ ಎಫ್‍ಐಆರ್ ಆಗುತ್ತೆ ಎಂದು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದವರ ಬಾಯಿಗೆ ಗುಂಡು ಹೊಡೆಯಬೇಕು: ಯತ್ನಾಳ್ ಕಿಡಿ
ಪಾಕಿಸ್ತಾನ ಜಿಂದಾಬಾದ್ ಎಂದರೂ ಸುಮ್ಮನಿರಬೇಕು. ಕಲ್ಲು ಹೊಡೆದು, ಪೆಟ್ರೋಲ್ ಬಾಂಬ್ ಹಾಕಿದರೂ ಸಹಿಸಿಕೊಳ್ಳಬೇಕು. ಸಹನೆಗೂ ಒಂದು ಮಿತಿ ಇದೆ ಅಲ್ವಾ? ಎಷ್ಟು ದಿನ ಅಂತ ಸಹಿಸಿಕೊಳ್ಳೋದು? ಯಾವ ಮತಗ್ರಂಥಗಳು ತಾನೇ ಅಸಹಿಷ್ಣುತೆಯನ್ನ ಪ್ರಚೋದನೆ ಮಾಡುತ್ತವೆ. ಗಣಪತಿ ನೋಡಿದ ಕೂಡಲೇ ಉಗಿಯಬೇಕು ಅನ್ಸತ್ತೆ ಅಂದ್ರೆ ಆ ಪ್ರಚೋದನೆ ಎಲ್ಲಿಂದ ಬರುತ್ತೆ. ಮನೆಯಲ್ಲೇ ಅಪ್ಪ-ಅಮ್ಮ ಹೇಳಿಕೊಟ್ರಾ? ಮದರಸಾಗಳಲ್ಲಿ ಹೇಳಿಕೊಟ್ರಾ? ಅಥವಾ ಹುಟ್ಟುವಾಗಲೇ ಭಯೋತ್ಪಾದಕರ ಬ್ಲಡ್ ಬೆರಕೆಯಾಗಿ ಹುಟ್ಟಿವೆಯೋ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಲ್ಲು ಹೊಡೆದವರೇ ಒಪ್ಪಿಕೊಂಡ್ರು ನಮ್ಮಿಂದ ತಪ್ಪಾಗಿದೆ ಅಂತ. ಆದ್ರೆ, ಅವರಿಗೆ ಮಾತ್ರ ಕೇಸ್ ಹಾಕಿದ್ರೆ ಬೇಜಾರಾಗ್ತಾರೆ ಅಂತ ನನ್ನ ಮೇಲೆ ಹಾಗೂ ಯತ್ನಾಳ್ ಮೇಲೆ ಕೇಸ್ ಹಾಕಿದ್ದಾರೆ. ಪಾಪ ಅವರಿಗೆ ಸಂಕಟ ಆಗುತ್ತಿದೆ. ಉದಯಗಿರಿ-ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡ್ದೋರ ಕೇಸ್ ಹಿಂಪಡೆಯಲು ಶಿಫಾರಸು ಮಾಡಿದ್ದೀರಿ. ನಮ್ಮ ಮೇಲೆ ಕೇಸ್ ಹಾಕೋಕೆ ನಿಮಗ್ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಸತ್ಯ ಹೇಳಿದರೆ ಕೇಸ್ ಹಾಕ್ತಾರೆ. ಇಲ್ಲ ಸಿಎಂ ಹೇಳಿದಂತೆ ಸುಳ್ಳು ಹೇಳಬೇಕು. ಇಸ್ಲಾಂ ಅಂದ್ರೆ ಶಾಂತಿ, ಶಾಂತಿ ಇರೋ ಇಸ್ಲಾಂ ಜಗತ್ತಿನ ಭಯೋತ್ಪಾದನೆಗೆ ಬೀಜ-ಗೊಬ್ಬರ-ನೀರು ಹಾಕ್ತಿರೋದು. ಅದರ ಹೆಸರಿನಲ್ಲೇ ಜಗತ್ತಿನ 30ಕ್ಕೂ ಹೆಚ್ಚು ನಾಗರೀಕತೆಗಳನ್ನ ನಾಶ ಮಾಡಿದ್ದು, ಅದರ ಹೆಸರಿನಲ್ಲೇ ಬಾಮಿಯಾನ್‍ನಲ್ಲಿ ನಗುತ್ತಾ ನಿಂತಿದ್ದ ಬುದ್ಧನ ವಿಗ್ರಹವನ್ನ ನಾಶಮಾಡಿದ್ದು, ಅದರ ಹೆಸರಿನಲ್ಲೇ ಭಾರತದ ರಾಷ್ಟ್ರೀಯ ಲಾಂಛನ ಅಶೋಕಚಕ್ರವನ್ನ ಕಲ್ಲಿನಿಂದ ಕುಟ್ಟಿ-ಕುಟ್ಟಿ ಒಡೆದು ಹಾಕಿದ್ದು. ಸತ್ಯ ಹೇಳಿದರೆ ಕೇಸ್ ಹಾಕ್ತಾರೆ. ಸಿಎಂ ರೀತಿ ಸುಳ್ಳು ಹೇಳಿದರೆ ಹೇ… ಹಮಾರಾ ಹೈ… ಹಮಾರಾ ಹೈ ಅಂತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮದ್ದೂರು ಗಲಭೆ | ಪ್ರಚೋದನಕಾರಿ ಭಾಷಣಕ್ಕಾಗಿ ಯತ್ನಾಳ್, ಸಿ.ಟಿ ರವಿ ವಿರುದ್ಧ FIR: ಪರಮೇಶ್ವರ್