ಚಿಕ್ಕಬಳ್ಳಾಪುರ: ಮತದಾರರಿಗೆ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಅಣೆ ಪ್ರಮಾಣ ಮಾಡಿಸಿರುವ ಘಟನೆ ಚಿಕ್ಕಬಳ್ಳಾಪುರ ಕೋಲಾರ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದಿದೆ.
Advertisement
ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಬಳಿಯ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಅವರ ಫಾರಂ ಹೌಸ್ ನಲ್ಲಿ ಬಾಗೇಪಲ್ಲಿ ಗುಡಿಬಂಡೆ ತಾಲೂಕಿನ ಮತದಾರರನ್ನು ಸೇರಿಸಿ ಅಣೆ ಪ್ರಮಾಣ ಮಾಡಿಸಲಾಗಿದೆ.
Advertisement
Advertisement
ಬಾಗೇಪಲ್ಲಿ ತಾಲೂಕಿನ ಬಿಜೆಪಿ ಅಧ್ಯಕ್ಷ ಪ್ರತಾಪ್ ದೇವರ ಫೋಟೋ ಮೇಲೆ ಮತದಾರರ ಕೈ ಹಿಡಿಸಿ ಪ್ರಮಾಣ ಮಾಡಿಸಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಡಾ.ವೇಣುಗೋಪಾಲ ಪರ 3ನೇ ನಂಬರ್ ಗುರುತಿಗೆ ಮತ ಹಾಕುವುದಾಗಿ ಕೇಳಿದ್ದಾರೆ. ಇದನ್ನೂ ಓದಿ: ಮತಗಟ್ಟೆ ಬಳಿ ಹಾಕಿರುವ ಬೌಂಡರಿ ಒಳಗೆ ಬನ್ನಿ: ಈಶ್ವರ್ ಖಂಡ್ರೆಗೆ ಪ್ರಕಾಶ್ ಖಂಡ್ರೆ ಸವಾಲು
Advertisement
ಈ ಸಮಯದಲ್ಲಿ ಮತದಾರರಿಗೆ 75,000 ಹಣ ಹಾಗೂ ತಿರುಪತಿ ಲಡ್ಡು ನೀಡಿ ಆಮಿಷ ಹೊಡ್ಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಹಲೆವೆಡೆ ಹಣವನ್ನು ರಾಜಾರೋಷವಾಗಿ ಹಂಚಿಕೆ ಮಾಡಿರುವ ಆರೋಪಗಳು ಕೇಳಿ ಬರ್ತಿವೆ. ಕಾಂಗ್ರೆಸ್ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರನ್ನು ಹಣದ ಆಮಿಷದ ಮೂಲಕ ಸೆಳೆಯಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ.