ಬೆಂಗಳೂರು: ಪಕ್ಷ ವಿರೋಧಿ ಹೇಳಿಕೆಗಳನ್ನು ಇನ್ನು ಮುಂದೆ ಮಂತ್ರಿಗಳು, ಶಾಸಕರು ಕೊಡಬಾರದು. ಒಂದು ವೇಳೆ ಅಂತಹ ಹೇಳಿಕೆಗಳನ್ನು ಕೊಟ್ಟರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೋದಾಗಿ ಕಾಂಗ್ರೆಸ್ ಶಿಸ್ತು ಪಾಲನೆ ಸಮಿತಿ ಉಪಾಧ್ಯಕ್ಷ ಕೋಳಿವಾಡ (Koliwad) ಎಚ್ಚರಿಕೆ ಕೊಟ್ಟಿದ್ದಾರೆ.
ಅಧಿಕಾರ ಹಂಚಿಕೆಗೆ ಬಗ್ಗೆ ಶಾಸಕರು, ಸಚಿವರು ಹೇಳಿಕೆಗಳ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಚಿವರು, ಶಾಸಕರ ಹೇಳಿಕೆಗಳನ್ನು ಗಮನಿಸಿದ್ದೇವೆ. ಈ ಸಂಬಂಧವಾಗಿ ನಿನ್ನೆ ಸಭೆ ಮಾಡಿದ್ದೇವೆ. ಸಿಎಂ, ಡಿಸಿಎಂ ಏನು ಮಾತಾಡುತ್ತಿಲ್ಲ. ಅವರ ಬೆಂಬಲಿಗರು ಮಾತ್ರ ಮಾತಾಡ್ತಿದ್ದಾರೆ. ಶಾಸಕರು, ಸಚಿವರ ಇಂತಹ ಹೇಳಿಕೆಗೆ ಯಾವುದೇ ಬೆಲೆ ಇಲ್ಲ. ಏನೇ ವಿಷಯ ಇದ್ದರು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.
Advertisement
Advertisement
ಇನ್ನು ಮುಂದೆ ಯಾರೇ ಆದರು ಪಕ್ಷಕ್ಕೆ ಮುಜುಗರ ಆಗೋ ಹೇಳಿಕೆ ಕೊಡಬಾರದು. ಪಕ್ಷ ವಿರೋಧಿ ಹೇಳಿಕೆ ಕೊಟ್ಟರೆ ನೋಟಿಸ್ ಕೊಟ್ಟು ಕ್ರಮ ತೆಗೆದುಕೊಳ್ಳುತ್ತೇವೆ. ಈಗ ಹೇಳಿಕೆ ಕೊಟ್ಟಿರೋರಿಗೆ ಮತ್ತೆ ಮಾತಾಡಬೇಡಿ ಅಂತ ಹೇಳಿದ್ದೇವೆ. ಈಗ ಮಾತಾಡಿರೋ ಎಲ್ಲರನ್ನು ಹೊರಗೆ ಹಾಕೋಕೆ ಆಗೊಲ್ಲ. ಈಗ ಮಾತಾಡೋರಿಗೆ ವಾರ್ನಿಂಗ್ ಕೊಡ್ತೀವಿ. ಇನ್ನು ಮುಂದೆ ಯಾರೂ ಪಕ್ಷದ ವಿರುದ್ಧ ಮಾತಾಡಬಾರದು ಅಂತ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಸೀಟ್ ಖಾಲಿ ಇಲ್ಲ, ಇನ್ನು 5 ವರ್ಷ ಸಿದ್ದರಾಮಯ್ಯನೇ ಸಿಎಂ: ಜಮೀರ್
Advertisement
ಶಾಸಕರು ಅವರ ನಾಯಕರ ಪರ ಇದ್ದೇವೆ ಅಂತ ತೋರಿಸೋಕೆ ಮಾತಾಡ್ತಾರೆ. ಇದಕ್ಕೆ ಇನ್ನು ಮುಂದೆ ಬೆಲೆ ಇಲ್ಲ. ನಮ್ಮ ಕನ್ನಡಿಗ ಖರ್ಗೆ ಅವರೇ ಎಐಸಿಸಿ ಅಧ್ಯಕ್ಷರು ಇದ್ದಾರೆ. ಅವರಿಗೆ ಎಲ್ಲಿಗೆ ಗೊತ್ತಿದೆ. ಇಂದಿನಿಂದ ಯಾರೇ ಮಾತಾಡಿದ್ರು ನೋಟಿಸ್ ಕೊಡ್ತೀವಿ. ಮಂತ್ರಿ ಶಾಸಕರು ಯಾರೇ ಮುಂದೆ ಮಾತಾಡಿದ್ರು ಅವರ ವಿರುದ್ಧ ಕ್ರಮ ತೆಗೆದುಕೊಳ್ತೀವಿ. ಮಾಧ್ಯಮಗಳ ಮುಂದೆ ಯಾರು ಹೋಗಬಾರದು. ಹೋದ್ರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ತೀವಿ ಅಂತ ಎಚ್ಚರಿಕೆ ನೀಡಿದ್ರು.
Advertisement
ಇನ್ನು ಅಧಿಕಾರ ಹಂಚಿಕೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡದ ಅವರು, ಅಧಿಕಾರ ಹಂಚಿಕೆ ಸೂತ್ರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇವರನ್ನೆ ಮುಂದುವರಿಸುತ್ತಾರೋ ರೀ ಶಫಲ್ ಮಾಡ್ತಾರೋ ಗೊತ್ತಿಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ತೀರ್ಮಾನವೇ ಕಾಂಗ್ರೆಸ್‌ನಲ್ಲಿ ಅಂತಿಮ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಅಲುಗಾಡಿಸಲು ಸಾಧ್ಯವಿಲ್ಲ, ಅವರೇ ಸಿಎಂ ಅಂತ ಹೈಕಮಾಂಡ್ ಹೇಳಿದೆ – ಶಿವಲಿಂಗೇಗೌಡ
Web Stories