ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ – ಕೈ ಶಾಸಕರು ಕಾಂಗ್ರೆಸ್‌ ಪಕ್ಷದ ಶಾಲು ಧರಿಸಲು ಸೂಚನೆ!

Public TV
1 Min Read
Siddaramaiah 02

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ 15ನೇ ಬಾರಿ ಬಜೆಟ್‌ ಮಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ದಾಖಲೆ ಬರೆಯಲಿದ್ದಾರೆ. ಬೆಳಗ್ಗೆ 10.15ಕ್ಕೆ ಬಜೆಟ್‌ ಮಂಡನೆ ಶುರು ಮಾಡಲಿದ್ದಾರೆ.

ಬಜೆಟ್‌ ಮಂಡನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದು, ಸಚಿವರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಲಾಗಿದೆ. ಬಜೆಟ್‌ ಮಂಡನೆಗೂ ಮುನ್ನವೇ ಸಂಪುಟ ಸಹೋದ್ಯೋಗಿಗಳ ಜೊತೆ ಕ್ಯಾಬಿನೆಟ್‌ ಮೀಟಿಂಗ್‌ ನಡೆಸುತ್ತಿರುವ ಸಿಎಂ ಕ್ಯಾಬಿನೆಟ್‌ನಲ್ಲಿ ಬಜೆಟ್‌ಗೆ ಒಪ್ಪಿಗೆ ಪಡೆಯಲಿದ್ದಾರೆ. ಇದನ್ನೂ ಓದಿ: ಕರ್ನಾಟಕ ಬಜೆಟ್‌ 2024 – Karnataka Budget 2024 LIVE UPDATES

ಕಾಂಗ್ರೆಸ್‌ ಶಾಲು ಧರಿಸಲು ಸೂಚನೆ:
ಸಿಎಂ ಸಿದ್ದರಾಮಯ್ಯ ಬಜೆಟ್‌ ಓದುವ ವೇಳೆ ಕಾಂಗ್ರೆಸ್‌ ಶಾಲು ಹಾಕಿಕೊಳ್ಳಲು ಕಾಂಗ್ರೆಸ್‌ ಶಾಸಕರಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ಮುಖ್ಯಸಚೇತಕ ಅಶೋಕ್‌ ಪಟ್ಟಣ ವಿಧಾನಸಭೆ ಸಭಾಂಗಣ ಪ್ರವೇಶಿಸುವ ಕಾಂಗ್ರೆಸ್‌ ಶಾಸಕರಿಗೆ ಕಾಂಗ್ರೆಸ್‌ ಶಾಲು ಹಾಕಿ ಕಳುಹಿಸುತ್ತಿದ್ದಾರೆ. ಇದನ್ನೂ ಓದಿ: Karnataka Budget: ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್‌ನಲ್ಲಿ ಸಿಗುತ್ತಾ ಅನುದಾನ?

ಈಗಾಗಲೇ ವಿಧಾನಸೌಧಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಬಜೆಟ್‌ ಪುಸ್ತಕ ತರಲಾಗಿದೆ. ಬೆಳಗ್ಗೆ 10:15 ರಿಂದ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ 3.75 ಲಕ್ಷ ಕೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎನ್ನಲಾಗಿದೆ.

Share This Article