ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ (SN SubbaReddy) ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾದವರಿಗೆ ಜೊತೆಗೆ ಸೀಮೆ ಹಸು, 50,000 ರೂ. ನಗದು ಹಣ, ಕೊಳವೆಬಾವಿ ಸೇರಿದಂತೆ ಡಿ.ಎಲ್ ಇದ್ದವರಿಗೆ ವಾಹನ ಹೀಗೆ ಹತ್ತು ಹಲವು ಅಫರ್ ಘೋಷಿಸಿದ್ದರು. ಇದರಿಂದ ಆಫರ್‌ಗೆ ಮನಸೋತು ಅಪ್ರಾಪ್ತರೂ ಮದುವೆಯಾಗಲು ಅರ್ಜಿ ಹಾಕಿದ್ದು ಕೊನೆ ಕ್ಷಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare Department) ಅಧಿಕಾರಿಗಳ ಎಂಟ್ರಿಯಿಂದ ಅಪ್ರಾಪ್ತರ ಮದುವೆಗೆ ಬ್ರೇಕ್ ಬಿದ್ದಿದೆ.
Advertisement
ಹೌದು. ಡಿಸೆಂಬರ್ 06 ರಂದು ಗಡಿದಂ ದೇವಾಲಯದ ಆವರಣದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮದುವೆಯಲ್ಲಿ ವಧು-ವರ ಹಾಗೂ ಅವರ ತಂದೆ ತಾಯಿಗೆ ಹೊಸ ಬಟ್ಟೆ ಸೇರಿದಂತೆ ನೂತನ ದಂಪತಿಗೆ ಒಂದು ಸೀಮೆ ಹಸು, ಸರ್ಕಾರದಿಂದ 50,000 ರೂ. ಪ್ರೋತ್ಸಾಹ ಧನ, ಸೇರಿದಂತೆ ಕಡು ಬಡವರಾದಲ್ಲಿ ಸಣ್ಣ ರೈತರಾಗಿದ್ರೆ ಉಚಿತ ಕೊಳವೆಬಾವಿ, ಡಿಎಲ್ ಇರುವ ವರನಿಗೆ ಒಂದು ವಾಹನ ಸಹ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮಾಸುವ ಮುನ್ನವೇ ಹೆರಿಗೆ ಬಳಿಕ ಮಗು ಸಾವು!
Advertisement
Advertisement
ಶಾಸಕರ ಆಫರ್‌ಗಳಿಗೆ ಮನಸೋತ ನೂರಾರು ಮಂದಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದು, ನಾ ಮುಂದು ತಾ ಮುಂದು ಅಂತ ಅರ್ಜಿ ಸಲ್ಲಿಸಿದ್ದರು. ಬರೋಬ್ಬರಿ 160ಕ್ಕೂ ಹೆಚ್ಚು ಜೋಡಿಗಳು ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದ್ರೆ ಅವರಲ್ಲಿ 50 ರಿಂದ 60 ಮಂದಿ 18 ವರ್ಷ ತುಂಬದ ಬಾಲಕಿಯರು, 21 ವರ್ಷ ಆಗದ ಯುವಕರು ಇದ್ದಿದ್ದು ಕಂಡುಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಂಟ್ರಿಯಾದ ನಂತರ 60ಕ್ಕೂ ಹೆಚ್ಚು ಅರ್ಜಿಗಳನ್ನ ತಿರಸ್ಕಾರ ಮಾಡಲಾಗಿದೆ. ಅದ್ರಲ್ಲೂ 18 ವರ್ಷ ಆಗಲು ಒಂದು ವಾರ, ಒಂದು ತಿಂಗಳು, 2-3 ವಾರ ಹೀಗೆ ಹಲವು ಜೋಡಿಗಳಿದ್ದು ಅವರ ಅರ್ಜಿಗಳನ್ನ ಅಂಗೀಕಾರ ಮಾಡಿಲ್ಲ ಅಂತ ಸ್ವತಃ ಶಾಸಕ ಸುಬ್ಬಾರೆಡ್ಡಿ ಹೇಳಿದರು. ಇದನ್ನೂ ಓದಿ: ಆಧ್ಯಾತ್ಮಿಕ ಶುದ್ಧೀಕರಣ ಕಾರ್ಯಕ್ರಮದಲ್ಲಿ ಕಪ್ಪೆಯ ವಿಷ ಸೇವಿಸಿ ಮೆಕ್ಸಿಕನ್ ನಟಿ ಸಾವು!
Advertisement
ಸಲ್ಲಿಕೆಯಾಗಿದ್ದ ಅರ್ಜಿಗಳನ್ನ ಬಾಲ್ಯವಿವಾಹಗಳನ್ನ ತಡೆಯುವ ಸಲುವಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಒಂದೊಂದಾಗಿ ಪರಿಶೀಲನೆ ನಡೆಸಿದಾಗ ಅಪ್ರಾಪ್ತರು ಸಹ ಮದುವೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರೋದು ಬೆಳಕಿಗೆ ಬಂದಿದೆ. ಇದ್ರಿಂದ ಎಚ್ಚೆತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ಕಾನೂನು ಪ್ರಕಾರ 18 ವರ್ಷ ವಯಸ್ಸಾಗಿರುವ ವಧು ಹಾಗೂ 21 ವರ್ಷ ತುಂಬಿದ ವರನ ವಿವಾಹಕ್ಕೆ ಮಾತ್ರ ಅನುಮತಿ ಕೊಟ್ಟಿದ್ದಾರೆ. ಇನ್ನೂ ಶಾಸಕರ ಆಫರ್ಸ್ ಕೇಳಿದ ಕೂಡಲೇ ಮತ್ತೆ ಈ ಆಫರ್ಸ್ ಸಿಗುತ್ತೋ ಇಲ್ವೋ ಅಂತ ಅಪ್ರಾಪ್ತರು ಸಹ ಮದುವೆಯಾಗುವ ಬಯಕೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿಕೊಂಡಿದ್ರು. ಆದ್ರೆ ಅಪ್ರಾಪ್ತರ ಮದುವೆಗೆ ಬ್ರೇಕ್ ಹಾಕಿದ್ದಾರೆ.