ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಆಪರೇಷನ್ ಕಮಲದ ಭೀತಿ ಬಿಟ್ಟುಬಿಡದಂತೆ ಕಾಡುತ್ತಿದೆ. ಹೀಗಾಗಿ ಎರಡೂ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಅವರ ಕ್ಷೇತ್ರಗಳಿಗೆ ಕಳುಹಿಸದೇ ರೆಸಾರ್ಟ್ ನಲ್ಲೇ ಉಳಿಸಿಕೊಂಡಿವೆ.
ಈ ಸರ್ಕಾರ ಹೆಚ್ಚು ದಿನ ನಡೆಯಲ್ಲ. ಮತ್ತೊಮ್ಮೆ ಒಂದು ಕೈ ನೋಡೇ ಬಿಡೋಣ ಅಂತ ಬಿಜೆಪಿ ಹೈಕಮಾಂಡ್ ಚಿಂತನೆಯಲ್ಲಿದೆಯೆಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಆಮಿಷಗಳಿಗೆ ಬಲಿಯಾಗಬೇಡಿ ಎಂದು ಕಾಂಗ್ರೆಸ್- ಜೆಡಿಎಸ್ ನಾಯಕರು ನೀತಿ ಪಾಠ ಹೇಳುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಶಾಸಕರು ಒಂದು ದಿನದ ಮಟ್ಟಿಗೆ ಕ್ಷೇತ್ರಗಳಿಗೆ ಹೋಗಿ ಬರೋದು ಬೇಡ, ಇಲ್ಲೇ ಇರಲಿ : ಡಿಕೆಶಿ
Advertisement
Advertisement
ಕಾಂಗ್ರೆಸ್ ಶಾಸಕರು ಎಂಬೆಸ್ಸಿ ಗಾಲ್ಫ್ ಲಿಂಕ್ ನಲ್ಲಿರೋ ಹೊಟೆಲ್ ನಲ್ಲಿ ವಾಸ್ತವ್ಯ ಮುಂದುವರೆಸಿದ್ರೆ, ಜೆಡಿಎಸ್ ಶಾಸಕರು ಮಾತ್ರ ಬೆಂಗಳೂರು ಹೊರವಲಯಕ್ಕೆ ಶಿಫ್ಟ್ ಆಗಿದ್ದಾರೆ. ನಂದಿ ಬೆಟ್ಟದ ತಪ್ಪಲಲ್ಲಿ ಇರುವ ರೆಸಾರ್ಟ್ ಗೆ ತಮ್ಮ ಬಿಡಾರ ಬದಲಿಸಿದ್ದಾರೆ. ಇನ್ನೂ ನಾಲ್ಕು ದಿನ ಅಂದರೆ, ಸದನದಲ್ಲಿ ವಿಶ್ವಾಸಮತ ಯಾಚನೆ ಆಗೋವರೆಗೂ ಎಲ್ಲರೂ ಅಲ್ಲೇ ಇರಲಿದ್ದಾರೆ. ಜೊತೆಗೆ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಲು ಅವಕಾಶ ಮಾಡಿಕೊಡಲಾಗಿದೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!