ಬೆಳಗಾವಿ: ಕುಂದಾ ನಗರಿ ಬೆಳಗಾವಿ (Belagavi) ಜಿಲ್ಲೆಯ ಬರ ನಿರ್ವಹಣೆಗಾಗಿ ಕರೆದ ಸಭೆಗೆ “ಶಾಸಕರ ಬರ” ಎದುರಾಗಿದ್ದು ಇಂತಹ ಜನಪ್ರತಿನಿಧಿಗಳಿಂದ ಪ್ರಜ್ಞೆಗಳು ಏನನ್ನ ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆ ಮೂಡಿದೆ.
ತಾಲೂಕಿನ ಹಲಗಾ ಮತ್ತು ಬಸ್ತವಾಡ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬರ ನಿರ್ವಹಣಾ ಸಭೆ ಕರೆಯಲಾಗಿದೆ. ಆದರೆ ಸಚಿವರ ಸಭೆಗೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹೇಂದ್ರ ತಮ್ಮಣ್ಣವರ, ವಿಶ್ವಾಸ್ ವೈದ್ಯ ಭಾಗಿಯಾಗಿದ್ದು ಉಳಿದಂತೆ ಸಭೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಹುತೇಕ ಶಾಸಕರು ಗೈರಾಗಿದ್ದು ಜಿಲ್ಲೆಯ 18 ಶಾಸಕರ ಪೈಕಿ ಕೇವಲ 3 ಶಾಸಕರು ಮಾತ್ರ ಭಾಗಿಯಾಗಿದ್ದಾರೆ.
ಜಿಲ್ಲೆಯಲ್ಲಿ 61% ರಷ್ಟು ಮಳೆ ಕೊರೆತೆಯಿಂದ ತೀವ್ರ ಬರ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಬೇಕಿದ್ದ ಶಾಸಕರೇ ಸಭೆಗೆ ಗೈರಾಗಿದ್ದು ತಮ್ಮ ತಮ್ಮ ಕ್ಷೇತ್ರದಲ್ಲಿದ್ದರೂ ಬರ ನಿರ್ವಹಣೆ ಸಭೆಗೆ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಶಾಸಕರು ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರು ಪೂರೈಕೆ ಸೇರಿ ಗಂಭೀರ ವಿಚಾರ ಚರ್ಚೆ ನಡೆಯುತ್ತಿದೆ. ಆದರೂ ಸಭೆಗೆ ಗೈರಾಗಿದ್ದು ಪ್ರಜ್ಞೆಗಳು ಇಂತಹ ಶಾಸಕರಿಂದ ಏನು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ; ಇಸ್ರೇಲ್, ಹಮಾಸ್ ಯುದ್ಧ – ಸಾವು ನೋವುಗಳನ್ನು ಖಂಡಿಸಿದ ಪ್ರಧಾನಿ ಮೋದಿ
ಸಭೆಗೆ ಗೈರಾದ ಶಾಸಕರು: ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ), ಆಸೀಫ್ ಸೇಠ್ (ಬೆಳಗಾವಿ ಉತ್ತರ ಕ್ಷೇತ್ರ), ಅಭಯ್ ಪಾಟೀಲ್ (ಬೆಳಗಾವಿ ದಕ್ಷಿಣ ಕ್ಷೇತ್ರ), ವಿಠಲ ಹಲಗೇಕರ್ (ಖಾನಾಪುರ ಕ್ಷೇತ್ರ), ಮಹಾಂತೇಶ ಕೌಜಲಗಿ (ಬೈಲಹೊಂಗಲ ಕ್ಷೇತ್ರ), ಅಶೋಕ್ ಪಟ್ಟಣ (ರಾಮದುರ್ಗ ಶಾಸಕ), ಬಾಬಾಸಾಹೇಬ್ ಪಾಟೀಲ್ (ಕಿತ್ತೂರು ಶಾಸಕ), ರಮೇಶ್ ಜಾರಕಿಹೊಳಿ (ಗೋಕಾಕ್ ಕ್ಷೇತ್ರ), ಬಾಲಚಂದ್ರ ಜಾರಕಿಹೊಳಿ (ಅರಭಾವಿ ಕ್ಷೇತ್ರ), ನಿಖಿಲ್ ಕತ್ತಿ (ಹುಕ್ಕೇರಿ ಕ್ಷೇತ್ರ), ಗಣೇಶ್ ಹುಕ್ಕೇರಿ (ಚಿಕ್ಕೋಡಿ ಕ್ಷೇತ್ರ), ರಾಜು ಕಾಗೆ (ಕಾಗವಾಡ ಕ್ಷೇತ್ರ), ಲಕ್ಷ್ಮಣ ಸವದಿ (ಅಥಣಿ ಕ್ಷೇತ್ರ),ಶಶಿಕಲಾ ಜೊಲ್ಲೆ (ನಿಪ್ಪಾಣಿ), ದುರ್ಯೋಧನ ಐಹೊಳೆ (ರಾಯಬಾಗ ಕ್ಷೇತ್ರ)ದ ಶಾಸಕರು ಗೈರಾಗಿದ್ದಾರೆ.