ದಾವಣಗೆರೆ: ನಮ್ಮ ಕ್ಷೇತ್ರದ ಸ್ಲಮ್‌ಗಳಲ್ಲಿ ಜನರು ಪ್ರತಿಯೊಬ್ಬರ ಮನೆಯಲ್ಲೂ ದೇವರ ಫೋಟೋ ಜೊತೆಗೆ ಸಿದ್ದರಾಮಯ್ಯ (Siddaramaiah) ಅವರ ಫೋಟೋ ಸಹ ಇಟ್ಟಿದ್ದರು ಎಂದು ಶಾಸಕ ಜಮೀರ್ ಅಹ್ಮದ್‌ಖಾನ್ (Zameer Ahmed Khan) ಹೇಳಿದ್ದಾರೆ.
Advertisement
ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಸ್ಲಮ್‌ಗಳಲ್ಲಿ ಜನರು ಪ್ರತಿ ಮನೆಯಲ್ಲಿ ದೇವರ ಫೋಟೋ ಜೊತೆಗೆ ಸಿದ್ದರಾಮಯ್ಯ ಫೋಟೋ ಇಟ್ಟಿದ್ದರು. ಯಾಕೆ ಎಂದು ಕೇಳಿದಾಗ ಕೋವಿಡ್ ಸಂದರ್ಭದಲ್ಲಿ ಅವರು ಕೊಟ್ಟ ಅಕ್ಕಿ ಇರಲಿಲ್ಲ ಅಂದಿದ್ರೆ, ಉಪವಾಸ ಸಾಯಬೇಕಿತ್ತು ಅಂತಾ ಹೇಳಿದ್ರು. ಆದರೆ ಬಿಜೆಪಿ (BJP) ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನೇ ಕಡಿತಗೊಳಿಸಿದರು ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: 25 ವರ್ಷ ಬಿಜೆಪಿಯನ್ನು ಸಹಿಸಿದ್ದು ಸಾಕು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ: ಹೆಚ್.ಎಸ್.ಚಂದ್ರಮೌಳಿ
Advertisement
Advertisement
ಬಸವಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆ ಶುರು ಮಾಡಿದ್ವಿ, ಎಲ್ಲಿ ಹೋದರೂ ಜನಸ್ಪಂದನೆ ಸಾಕಷ್ಟು ಇದೆ. ಅಭಿವೃದ್ಧಿಯಾಗಬೇಕು ಅಂದ್ರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಯಡಿಯೂರಪ್ಪ (BS Yediyurappa) ಅವರಿಗೆ ಪರಿಷತ್ ನಲ್ಲಿ ರೈತರ ಸಾಲ ಮನ್ನಾ ಮಾಡಿ ಅಂದ್ರೆ ನೋಟ್ ಪ್ರಿಂಟ್ ಮಿಷನ್ ಇಲ್ಲ ಅಂದ್ರು, ನಮ್ಮ ಸಿದ್ದರಾಮಯ್ಯನವರ ಕಡೆ ನೋಟ್ ಪ್ರೀಂಟ್ ಮಿಷನ್ ಇತ್ತಾ? ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ತಂದು ಅಭಿವೃದ್ಧಿ ಮಾಡಲಿಲ್ವಾ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಲಂಚ ಸ್ವೀಕರಿಸುವಾಗ ಎಸಿ ಕಚೇರಿ ಸಹಾಯಕ ಲೋಕಾಯುಕ್ತರ ಬಲೆಗೆ