ನೆಲಮಂಗಲ: ಊರ ಹಬ್ಬ ಹಾಗೂ ಜಾತ್ರೆ ಸಂಭ್ರಮದ ವೇಳೆ ಕಾಂಗ್ರೆಸ್ ಶಾಸಕ ವೆಂಕಟರಮಣಯ್ಯ ಮಕ್ಕಳೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಮಣಯ್ಯ ತಮ್ಮ ಸ್ವಗ್ರಾಮದ ಹುಲಿಕುಂಟೆಯಲ್ಲಿ ನಡೆದ ಊರ ಹಬ್ಬ ಹಾಗೂ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ದೇವರ ಉತ್ಸವ ಸಂದರ್ಭದಲ್ಲಿ ಮಕ್ಕಳು ತಮಟೆ ಏಟಿಗೆ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದರು. ಇದನ್ನೂ ಓದಿ: ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್ಪಿ ರವಿ.ಡಿ ಚೆನ್ನಣ್ಣನವರ್
ಈ ವೇಳೆ ತಮಟೆ ಏಟು ಶಾಸಕರ ಗಮನ ಸೆಳೆದಿದ್ದು, ತಮಟೆ ಸೌಂಡಿಗೆ ಸ್ಟೆಪ್ಸ್ ಹಾಕುವಂತೆ ಮಾಡಿತು. ಹೀಗಾಗಿ ಮಕ್ಕಳ ಜೊತೆ ವೆಂಕಟರಮಣಯ್ಯ ತಮಟೆ ಏಟಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಶಾಸಕರು ಕುಣಿಯುತ್ತಿದ್ದಂತೆ ಯುವಕರು ಹಾಗೂ ಮಕ್ಕಳಿಗೆ ಮತ್ತಷ್ಟು ಉತ್ಸಾಹ ಮೂಡಿದ್ದು, ಇನ್ನೂ ಕುಣಿಯಲು ಪ್ರಾರಂಭಿಸಿದ್ದಾರೆ.
ಈ ವೇಳೆ ಮಕ್ಕಳನ್ನೂ ನಾಚುವಂತೆ ಶಾಸಕರು ಡ್ಯಾನ್ಸ್ ಮಾಡಿದರು. ಇದು ಸ್ಥಳೀಯರು ಹೆಬ್ಬೇರಿಸುವಂತೆ ಮಾಡಿತು. ಶಾಸಕರು ತಮಟೆ ಸೌಂಡಿಗೆ ಸ್ಟೆಪ್ಸ್ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.