ಬೆಂಗಳೂರು: ಭಗವಂತನ ಕೃಪೆಯಿಂದಾಗಿ ನಡೆದಾಡುವ ದೇವರು ಆರೋಗ್ಯವಾಗಿದ್ದಾರೆ. ಗುರುಗಳ ಆರೋಗ್ಯದ ಬಗ್ಗೆ ನಿಗಾವಹಿಸಿ ರಾಜ್ಯ ಹಾಗೂ ದೇಶದ ಜನ ನೋಡಲು ಕಾರಣವಾದ ಆಸ್ಪತ್ರೆಯ ವೈದ್ಯರಿಗೆ ಮಾಜಿ ಸಚಿವ, ಶಾಸಕ ವಿ ಸೋಮಣ್ಣ ಧನ್ಯವಾದ ತಿಳಿಸಿದ್ದಾರೆ.
ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಹಾಗೂ ವೈದ್ಯರ ತಂಡ ಯಶಸ್ವಿ ತಪಾಸಣೆ ನಡೆಸಿದ್ದಾರೆ. ಎರಡು ಸ್ಟಂಟ್ ಗಳನ್ನು ಅಳವಡಿಸಿದ್ದಾರೆ. ಸದ್ಯ ಗುರುಗಳು ಲವಲವಿಕೆಯಿಂದ ಇದ್ದಾರೆ ಅಂದ್ರು.
Advertisement
Advertisement
ದೇವರು ಇದ್ದಾನೆ ಅನ್ನೋದಕ್ಕೆ ಶಿವಕುಮಾರ ಸ್ವಾಮೀಜಿಗಳು ಒಂದು ದೊಡ್ಡ ಉದಾಹರಣೆಯಾಗಿದ್ದಾರೆ. ಸದ್ಯ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಈ ಮೂಲಕ ಭಕ್ತರ ಕಳವಳ ಬಗೆಹರಿದಿದೆ. ಗುರುಗಳು ಮತ್ತೆ ಯಥಾಸ್ಥಿತಿಯಲ್ಲಿ ಪೂಜಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಾರಣರಾದ ಎಲ್ಲಾ ವೈದ್ಯರಿಗೆ ಇದೇ ಸಂದರ್ಭದಲ್ಲಿ ಧನ್ಯವಾದ ಸಮರ್ಪಿಸಿದ್ರು.
Advertisement
Advertisement
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಮಾತನಾಡಿ, ಪಿತ್ತಕೋಶ ಮತ್ತು ಪಿತ್ತನಾಳದಲ್ಲಿ ಸೋಂಕು ಉಂಟಾಗಿತ್ತು. ಎಂಡೋಸ್ಕೋಪಿ ಮೂಲಕ ಹೊಸ ಎರಡು ಸ್ಟಂಟ್ ಹಾಕಿದ್ದೇವೆ. ಈಗ ಸೋಂಕು ಕಡಿಮೆಯಾಗಿದೆ. ಒಂದೂವರೆ ಗಂಟೆಯ ಈ ಕಾರ್ಯದ ವೇಳೆ ಅನಸ್ತೇಶಿಯಾದಲ್ಲಿ ಸ್ವಾಮೀಜಿ ಇದ್ರು. ಸಾಮಾನ್ಯವಾಗಿ ಇಂಥಾ ಸಂದರ್ಭಗಳಲ್ಲಿ ಪ್ರೊಸೀಜರ್ ಆದ್ಮೇಲೆ ಐಸಿಯುಗೆ ಶಿಫ್ಟ್ ಮಾಡ್ತೀವಿ. ಆದ್ರೆ ಸ್ವಾಮೀಜಿ ಆರಾಮಾಗಿದ್ದಾರೆ. ಸದ್ಯ ವಾರ್ಡಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಗಾಲ್ ಬ್ಲಾಡರ್ ಇನ್‍ಫೆಕ್ಷನ್ ಇದ್ದಾಗ ಕೆಲವೊಮ್ಮೆ ಮತ್ತೆ ಜ್ವರ ಬರುವ ಸಾಧ್ಯತೆ ಇರುತ್ತೆ. ಹಾಗಾಗಿ ಸ್ವಾಮೀಜಿಯನ್ನು ಆಸ್ಪತ್ರೆಯಲ್ಲೇ ಅಬ್ಸರ್ವಶೇನ್ ಇರಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದೇವೆ ಅಂತ ತಿಳಿಸಿದ್ರು.
ಶ್ರೀಗಳು ಆರಾಮಾಗಿ, ಆರೋಗ್ಯವಾಗಿದ್ದಾರೆ. ಏನೂ ಸಮಸ್ಯೆಯಿಲ್ಲ. ವಿಶ್ರಾಂತಿ ಪಡೆಯುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ. ಇಂದು ಸಂಜೆ ಇಲ್ಲ ನಾಳೆ ಡಿಸ್ಚಾರ್ಜ್ ಆಗ್ತಾರೆ ಅಂತ ಬಿಬಿಎಂಪಿ ಮೇಯರ್ ಗಂಗಾಬಿಕೆ ಹೇಳಿದ್ರು.
ಇದೇ ಸಂದರ್ಭದಲ್ಲಿ ಬಿಜಿಎಸ್ ಆಸ್ಪತ್ರೆಗೆ ಆದಿ ಚುಂಚನಗಿರಿ ಮಠದ ನಿರ್ಮಾಲಾನಂದ ಸ್ವಾಮೀಜಿ ಆಗಮಿಸಿ, ಶ್ರೀಗಳ ಆರೋಗ್ಯ ವಿಚಾರಿಸಿದ್ರು. ಶನಿವಾರ ರಾತ್ರಿ ಡಾ. ರವೀಂದ್ರ ಅವರಿಂದ ಶ್ರೀ ಗಳಿಗೆ ಮೂರು ಭಾರಿ ಜನರಲ್ ಚೆಕ್ ಅಪ್ ನಡೆಸಲಾಗಿತ್ತು. ವೈದ್ಯರು ನಿನ್ನೆಯಿಂದ ರಕ್ತಪರೀಕ್ಷೆ, ಅಲ್ಟ್ರಾಸೌಂಡ್, ಶ್ವಾಸಕೋಶ ಸಂಬಂಧಿ ಕೆಲ ಪರೀಕ್ಷೆ ನಡೆಸಿದ್ದಾರೆ. ಇಂದು ಬೆಳಗ್ಗೆ 5.30ಕ್ಕೆ ಎದ್ದಿರುವ ಶ್ರೀಗಳು, ಎಂದಿನಂತೆ ಲವಲವಿಕೆಯಿಂದ ಪೂಜೆ ಮುಗಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv