– ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕರಿಂದ ಸ್ಪಷ್ಟನೆ
ಚಾಮರಾಜನಗರ: ಲಾರಿ (Lorry) ಬರುತ್ತಲ್ಲ ಕಲ್ಲು ಹೊಡೆಯಿರಿ, ಮುತ್ತಿಗೆ ಹಾಕಿ ಎಂದು ಗ್ರಾಮಸ್ಥರಿಗೆ ಗುಂಡ್ಲುಪೇಟೆ (Gundlupete) ಶಾಸಕ ಗಣೇಶ್ ಪ್ರಸಾದ್ (Ganesh Prasad) ಪ್ರಚೋದನೆ ಕೊಟ್ಟಿದ್ದಾರೆ ಎನ್ನಲಾದ ವಿಡಿಯೋ (Video) ಎಲ್ಲೆಡೆ ವೈರಲ್ ಆಗುತ್ತಿದೆ.
Advertisement
ಯಾರೋ ರಸ್ತೆ ಅಗಲೀಕರಣ ಮಾಡ್ಕೊಂಡಿದ್ದಾರೆ. ಅವರಿಗೆ ಮುತ್ತಿಗೆ ಹಾಕಿ ಎಂದು ಪ್ರಚೋದನೆ ನೀಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ನಿನ್ನೆ ಗುಂಡ್ಲುಪೇಟೆ ತಾಲೂಕಿನ ಕಾಲ ಹಿರಿಕಾಟಿ ಗ್ರಾಮಕ್ಕೆ ಕಾರ್ಯಕ್ರಮಕ್ಕೆ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿದ್ದರು. ಇದನ್ನೂ ಓದಿ: ಆಯುರ್ವೇದ ಔಷಧಿ ಹೆಸರಿನಲ್ಲಿ ಗಾಂಜಾ ಚಾಕೊಲೇಟ್ ಮಾರಾಟ – ಅಪ್ರಾಪ್ತರನ್ನೇ ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್ ಬಂಧನ
Advertisement
Advertisement
ಈ ವೇಳೆ ಟಿಪ್ಪರ್ ಲಾರಿ ಸಂಚಾರ, ರಸ್ತೆ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭ ಶಾಸಕರು, ಲಾರಿ ಬರುತ್ತಲ್ಲ ಕಲ್ಲು ಹೊಡೆಯಿರಿ ಎಂಬ ಪ್ರಚೋದನೆ ಕೊಟ್ಟಿದ್ದಾರೆ. ಇದೀಗ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಾಸಕರ ಮಾತಿಗೆ ಪರ-ವಿರೋಧ ಚರ್ಚೆಯಾಗ್ತಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದು ಪತ್ನಿಯೊಂದಿಗೆ ಟೆಕ್ಕಿ ಆತ್ಮಹತ್ಯೆ
Advertisement
ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕ ಗಣೇಶ್ ಪ್ರಸಾದ್ ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ರಸ್ತೆ ನೋಡಲು ಅಲ್ಲಿಗೆ ಹೋಗಿದ್ದೆ. ಲಾರಿಗಳು ಓಡಾಡಿ ರಸ್ತೆ ಹಾಳಾಗಿದೆ. ಮಾನವೀಯತೆ ದೃಷ್ಟಿಯಿಂದ ಯಾರು ರಸ್ತೆ ಉಪಯೋಗಿಸುತ್ತಾರೋ ಅವರೇ ಇದನ್ನು ತುಂಬಿಕೊಡಬೇಕು. ಫುಟ್‌ಪಾತ್‌ಗೂ ರಸ್ತೆ ಮಾಡಿದ್ದಾರೆ. ಸರ್ಕಾರದ ರಸ್ತೆಯನ್ನು ಅಧ್ವಾನ ಮಾಡಿದ್ದಾರೆ. ಶಾಲಾ ಮಕ್ಕಳು ಕೂಡಾ ಲಾರಿ ನಿಲ್ಲಿಸಿ ಎಂದು ಮನವಿ ಕೊಟ್ಟಿದ್ದಾರೆ. ಕಲ್ಲು ಇಡಿ ಅಂತಾ ಹೇಳಲು ಹೋಗಿ ಕಲ್ಲು ಹೊಡೆಯಿರಿ ಅಂದಿದ್ದೇನೆ ಎಂದರು. ಇದನ್ನೂ ಓದಿ: ಮಗುವನ್ನು ನೋಡಲೆಂದು ಪತ್ನಿ ಮನೆಗೆ ಹೋದಾಗ ಹಲ್ಲೆಗೈದು ಹಲ್ಲು ಕಿತ್ತ ಮಾವ!
ಬಿಜೆಪಿಯವರು (BJP) ಸೋತು ಡಿಪ್ರೆಷನ್‌ಗೆ ಒಳಗಾಗಿ ಈ ರೀತಿ ಆಡುತ್ತಿದ್ದಾರೆ. ನಮ್ಮದು ಕೂಡಾ ಕ್ರಷರ್ ಇದೆ. ಸಾರ್ವಜನಿಕರು ದೂರು ಕೊಟ್ಟಿದ್ದರು. ನಾವು ಬೇರೆ ರಸ್ತೆ ಮಾಡಿಕೊಂಡಿದ್ದೇವೆ. ನಾನು ಸಾರ್ವಜನಿಕವಾಗಿ ಯಾರಿಗೂ ಕೂಡ ಪ್ರಚೋದನೆ ಮಾಡಲ್ಲ. ನಾನು ಯಾರನ್ನೂ ಕೂಡ ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ
Web Stories