– `ಕೈ’ ಕೊಟ್ಟು ಬಿಜೆಪಿ ಸೇರಲು ಶಾಸಕ ಉಮೇಶ್ ಜಾಧವ್ ರೆಡಿ
ಕಲಬುರಗಿ: ಲೋಕಸಭಾ ಚುನಾವಣೆಯ ವೇಳೆ ಸಂಸದ ಮಲ್ಲಿಕಾರ್ಜುನ ಖರ್ಗೆ ಎದುರು ಚಿಂಚೋಳಿ ಶಾಸಕ ಉಮೇಶ್ ಜಾಧವ್ ಕಣಕ್ಕಿಳಿಯೋದು ಬಹುತೇಕ ಅಂತಿಮವಾಗಿದ್ದು, ಸಂಕ್ರಾತಿ ಬಳಿಕ ಕೈ ಶಾಸಕ ಉಮೇಶ್ ಜಾಧವ್ ತಮ್ಮ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.
ಈ ಕುರಿತು ಖುದ್ದು ಶಾಸಕರ ಸಹೋದರ ರಾಮಚಂದ್ರ ಜಾಧವ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬಿಜೆಪಿ ರಾಷ್ಟ್ರ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆಯಾಗಿದ್ದು, ಅವರು ಬಿಜೆಪಿ ಸೇರಿದ್ರೆ ಚಿಂಚೋಳಿಗೆ ಅವರು ಹೇಳಿದ ಅಭ್ಯರ್ಥಿಯನ್ನೆ ವಿಧಾನಸಭೆ ಚುನಾವಣೆಗೆ ನಿಲ್ಲಿಸಲಾಗುವುದು ಎಂಬ ಭರವಸೆ ಸಹ ನೀಡಲಾಗಿದೆ.
Advertisement
Advertisement
ಬಂಜಾರಾ ಸಮುದಾಯದ ನಡೆದಾಡುವ (ಆಂಧ್ರ ಪ್ರದೇಶದ ಪೌರಾಗಡ ಮಹಾರಾಜ್) ದೇವರು ರಾಮ ರಾಮ ಮಹಾರಾಜ್ ಸಹ ಅವಕಾಶ ಇದ್ರೆ ಬಿಜೆಪಿ ಹೋಗಿ ಎಂದು ಗ್ರೀನ್ ಸಿಗ್ನಲ್ ನೀಡಿದ್ದು, ಸದ್ಯ ಸರ್ಕಾರದಲ್ಲಿ ನಮ್ಮ ಸಮುದಾಯದ ಜನರಿಗೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಇನ್ನು ಖರ್ಗೆಯವರು ಮನಸ್ಸು ಮಾಡಿದ್ರೆ ಶಾಸಕ ಜಾಧವ್ ಅವರನ್ನು ಸಚಿವರನ್ನಾಗಿ ಮಾಡಬಹುದಿತ್ತು. ಮಾಜಿ ಸಿಎಂ ಧರ್ಮಸಿಂಗ್ ಸಾವಿನ ನಂತರ ನಾವು ಅನಾಥರಾದ್ದಂತಾಗಿದೆ. ಹೀಗಾಗಿ ಉಮೇಶ್ ಜಾಧವ್ ಅವರು ಬಿಜೆಪಿಗೆ ಹೋಗುವ ಕುರಿತು ಚರ್ಚೆ ನಡೆಸಿದ್ದು, ಕೆಲ ಕಾಂಗ್ರೆಸ್ ನಾಯಕರು ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಎಲ್ಲವೂ ಅಂದುಕೊಂಡಂತೆ ನಡೆದ್ರೆ ಉಮೇಶ್ ಜಾಧವ್ ಅವರು ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಸಭೆಯಲ್ಲಿ ರೆಡಿಯಾಗಲಿದ್ದಾರೆ. ಈ ಕುರಿತು ಶಾಸಕ ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಅವರು ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.
Advertisement
ಆಡಿಯೋದಲ್ಲೇನಿದೆ..?
ಪಬ್ಲಿಕ್ ಟಿವಿ – ಅದೇ ಸರ್ ಬಿಜೆಪಿಗೆ ಜಾಧವ್ ಬಿಜೆಪಿಗೆ ಸೇರುತ್ತಾರಾ…?
ರಾಮಚಂದ್ರ ಜಾಧವ್-ಇಲ್ಲ…ಇಲ್ಲ ಸರ್…ಇನ್ನೂ ಏನು ಇಲ್ಲ..? ಅವರು ಬನ್ನಿ ಎಂದು ಒತ್ತಡ ಹಾಕುತ್ತಿದ್ದಾರೆ.
ಪಬ್ಲಿಕ್ ಟಿವಿ -ರಾಮ್…ರಾಮ್…ಮಹಾರಾಜ್ ಹತ್ತಿರ ಹೋಗಿದರಂತೆ ಆಂಧ್ರಕ್ಕೆ..? ಈ ಬಗ್ಗೆ ಚರ್ಚೆ ಮಾಡಿದ್ದರಂತೆ
ರಾಮಚಂದ್ರ ಜಾಧವ್ – ಈ ಬಗ್ಗೆ ಅಲ್ಲ ಎಲ್ಲವೂ ಒಳ್ಳೆದಾಗಲಿಯೆಂದು ಆರ್ಶೀವಾದ ಪಡೆದುಕೊಂಡು ಬಂದಿದ್ದಾರೆ.
ಪಬ್ಲಿಕ್ ಟಿವಿ -ಬಿಜೆಪಿ ಸೇರು ಸಂಬಂಧ ಯಾರು-ಯಾರು ಮಾತನಾಡಿದ್ದಾರೆ ಸರ್..
ರಾಮಚಂದ್ರ ಜಾಧವ್-ಯಾರು ಅಂತಾ ನನಗೂ ಅಷ್ಟ ಐಡಿಯಿಲ್ಲ…ರಾಷ್ಟ್ರ ರಾಜ್ಯ ನಾಯಕರು ಮಾತನಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv