Connect with us

Latest

ಹೂ ನೀಡುವ ಬದಲು ಪುಸ್ತಕ ನೀಡಿ – ಜನರಲ್ಲಿ ಶಾಸಕ ಮನವಿ

Published

on

– ಜನರು ನೀಡಿದ ಪುಸ್ತಕ ಶಾಲೆಗಳಿಗೆ ದಾನ
– ಕ್ಷೇತ್ರದ ಗ್ರಂಥಾಲಯಕ್ಕೆ ನೀಡಲಿದ್ದಾರೆ ಪುಸ್ತಕ

ತಿರುವನಂತಪುರಂ: ಹೂಗಳ ಬದಲಾಗಿ ಪುಸ್ತಕವನ್ನು ನೀಡಿ ಎಂದು ಕೇರಳ ಶಾಸಕರೊಬ್ಬರು ಜನರಲ್ಲಿ ಮನವಿ ಮಾಡಿದ್ದು, ಈಗ 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹಗೊಂಡಿದೆ.

ಕೇರಳದ ವಟ್ಟಿಯೂರ್ಕವು ಶಾಸಕ ವಿ.ಕೆ ಪ್ರಶಾಂತ್ ಹೂಗಳ ಬದಲು ಪುಸ್ತಕಗಳನ್ನು ನೀಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಜನ ಸ್ಪಂದಿಸಿದ್ದು ಶಾಸಕರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕರು ತಮ್ಮ ಕ್ಷೇತ್ರದಲ್ಲಿ ಗ್ರಂಥಾಲಯ ತೆರೆಯಲು ಮುಂದಾಗಿದ್ದರು. ಗ್ರಂಥಾಲಯಕ್ಕೆ ಪುಸ್ತಕ ಬೇಕಾಗಿದ್ದರಿಂದ ತನ್ನ ಭೇಟಿಗೆ ಬರುವ ಜನರು ಹೂ, ಹಾರವನ್ನು ತರದೇ ಪುಸ್ತಕವನ್ನು ತನ್ನಿ. ಈ ಪುಸ್ತಕವನ್ನು ಸರ್ಕಾರಿ ಶಾಲೆಯ ಗ್ರಂಥಾಲಯಕ್ಕೆ ನೀಡುತ್ತೇನೆ ಎಂದು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.

ಪ್ರಶಾಂತ್ ಅವರು ಫೇಸ್‍ಬುಕ್‍ನಲ್ಲಿ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆ ಹಲವರು ತಮ್ಮ ಬಳಿಯಿದ್ದ ಪುಸ್ತಕಗಳನ್ನು ಅವರಿಗೆ ನೀಡಿದ್ದಾರೆ. ತಮ್ಮ ಫೇಸ್‍ಬುಕ್‍ನಲ್ಲಿ ಜನರು ಪುಸ್ತಕಗಳನ್ನು ನೀಡುತ್ತಿರುವ ಫೋಟೋಗಳನ್ನು ಪ್ರಶಾಂತ್ ಹಂಚಿಕೊಂಡಿದ್ದಾರೆ. ಪ್ರಶಾಂತ್ ಅವರಿಗೆ 35 ಸಾವಿರಕ್ಕೂ ಹೆಚ್ಚು ಪುಸ್ತಕಗಳು ದೊರೆತಿವೆ. ಪ್ರಶಾಂತ್ ಆ ಪುಸ್ತಕಗಳನ್ನು ತಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗೆ ನೀಡಲಿದ್ದಾರೆ. ಇದೇ ವೇಳೆ ಪುಸ್ತಕ ನೀಡಿದ ಜನರಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಸದ್ಯ ಶಾಸಕ ಪ್ರಶಾಂತ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 2018ರಲ್ಲಿ ಕೇರಳದಲ್ಲಿ ಪ್ರವಾಹ ಬಂದಿದ್ದಾಗ ಪ್ರಶಾಂತ್ ಪರಿಹಾರದ ಕಾರ್ಯಗಳಲ್ಲಿ ಸಕ್ರಯವಾಗಿ ಭಾಗವಹಿಸಿದ್ದರು. ಇದಾದ ಬಳಿಕ ಜನರು ಅವರನ್ನು ‘ಮೇಯರ್ ಬ್ರೋ’ ಎಂದು ಕರೆಯಲು ಶುರು ಮಾಡಿದ್ದರು.

Click to comment

Leave a Reply

Your email address will not be published. Required fields are marked *