ಮೈಸೂರು: ಮೈಸೂರಿನ ಎನ್.ಆರ್. ಕ್ಷೇತ್ರಕ್ಕೆ ಬಂದು ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಏಕ ವಚನದಲ್ಲೇ ತಿರುಗೇಟು ನೀಡಿದ್ದಾರೆ.
ಅವನ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಇದು ಸಭ್ಯತೆ ಇರುವವನು ಆಡುವ ಮಾತಲ್ಲ. ಜಮೀರ್ ಅಹ್ಮದ್ ಜೊತೆ ನಾನು ರಾಜಕೀಯವಾಗಿ ಅಥವಾ ವೈಯುಕ್ತಿವಾಗಿ ಸಂಘರ್ಷಕ್ಕೆ ಸಿದ್ಧ. ಆದರೆ, ಮಾಧ್ಯಮಗಳ ಮುಂದೆ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದರು.
Advertisement
ನಮ್ಮ ಜನಾಂಗ ಒಪ್ಪಿಕೊಳ್ಳುವ ನಾಯಕತ್ವ ಅವನಲ್ಲಿ ಇಲ್ಲ ಎಂದು ಹೇಳಿದ್ದೇನೆ. ಈಗಲೂ ನಾನು ಅದನ್ನೆ ಹೇಳುತ್ತಿದ್ದೇನೆ. ಮೊನ್ನೆಯ ನನ್ನ ಕ್ಷೇತ್ರಕ್ಕೆ ಬಂದು ಕೆಟ್ಟ ಹುಳುವಾಗಿ ಬೆಳೆದಿರುವವರ ಪರವಾಗಿ ಜಮೀರ್ ಕೆಲಸ ಮಾಡಿದ ಎಂದು ಆರೋಪಿಸಿದರು. ಇದನ್ನೂ ಓದಿ: ಮುಸ್ಲಿಂ ನಾಯಕ ಯಾರು ಅನ್ನೋದನ್ನು ಜನ ಗುರುತಿಸುತ್ತಾರೆ: ತನ್ವೀರ್ ಸೇಠ್‍ಗೆ ಜಮೀರ್ ತಿರುಗೇಟು
Advertisement
Advertisement
ಶಕ್ತಿ ಪ್ರದರ್ಶನ ಜನರನ್ನು ಸೇರಿಸಿ ತೋರಿಸುವುದಲ್ಲ. ಜನರನ್ನ ಮನಸ್ಸನ್ನ ಗೆದ್ದು ತೋರಿಸುವುದು ಎಂದು ಚಾಟಿ ಬೀಸಿದರು. ನಾನು ಕ್ಷೇತ್ರ ಬಿಟ್ಟು ಹೊರಗೆ ಹೋಗಿದ್ದೇನೋ ಇಲ್ಲವೊ. ನನಗೆ ಎಷ್ಟು ಜನರ ಬೆಂಬಲ ಇದೆ ಎಂದು ಅಹಂ ತೋರಿಸುವ ಅಗತ್ಯ ನನಗೆ ಇಲ್ಲ ಎಂದರು.
Advertisement
ಬಹುತೇಕ ಮುಸ್ಲಿಂ ಸಮುದಾಯದ ಜನರು ಕಾಂಗ್ರೆಸ್ ಪರ ಇದ್ದರು. ನಾಲ್ಕು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ಕೇಳಿದ್ದೇವು. ಕೆಲವು ಜನಾಂಗದವರು ಡಿಸಿಎಂ ಸ್ಥಾನ ಕೇಳುತ್ತಿದ್ದಾರೆ. ಅವರು ಪಕ್ಷಕ್ಕೆ ಬೆಂಬಲಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಮುಸ್ಲಿಂಮರು ಮಾತ್ರ ಸಂಪೂರ್ಣವಾಗಿ ಕಾಂಗ್ರೆಸ್ ಪರ ಇದ್ದರು. ನಾವು ಸಂಘಟಿತರಾಗಿ ಸ್ಥಾನ ಕೇಳುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು.
ಹೈಕಮಾಂಡ್ ನನಗೆ ಪಕ್ಷಕ್ಕೆ ಮುಜುಗರ ತರುವಂತೆ ಮಾತನಾಡಬೇಡಿ ಎಂದಿದ್ದು ಅದನ್ನು ನಾನು ಪಾಲಿಸುತ್ತಿದ್ದೇನೆ. ಜಮೀರ್ ನೀಡಿರುವ ಸವಾಲನ್ನು ನಾನು ಸ್ವೀಕರಿಸುವುದು ಇಲ್ಲ, ತಳ್ಳಿಹಾಕೋದು ಇಲ್ಲ. ಕ್ಷೇತ್ರಕ್ಕೆ ಬರುವುದು ಬಿಡುವುದು ಜಮೀರ್ ಗೆ ಬಿಟ್ಟದ್ದು ಎಂದು ತನ್ವೀರ್ ಸೇಠ್ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾರು ನನಗ್ಯಾಕೆ ಬೇಕು: ಮಾಧ್ಯಮಗಳ ಮುಂದೆ ಕಾರಣ ಬಿಚ್ಚಿಟ್ಟ ಜಮೀರ್ ಅಹ್ಮದ್