ಮೈಸೂರು: ಒಂದು ವರ್ಷದಲ್ಲಿ ನಾವು ಮಾಡಬೇಕಾದ ಕೆಲಸ ಮಾಡಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಲ್ಲಿ ಹಲವು ಚುನಾವಣೆಗಳು ಬಂದವು. ಬಿಜೆಪಿ, ಶಾಸಕರ ಖರೀದಿಗೆ ಮುಂದಾಗಿತ್ತು. ಲೋಕಸಭಾ ಚುನಾವಣೆಯೂ ಬಂದಿತ್ತು. ಈ ಎಲ್ಲ ಕಾರಣದಿಂದಾಗಿ ನಾವು ಒಂದು ವರ್ಷದಲ್ಲಿ ಮಾಡಬೇಕಾದ ಕೆಲಸ ಪರಿಪೂರ್ಣ ಆಗಿಲ್ಲ. ಆದರೆ ಮುಂದಿನ ನಾಲ್ಕು ವರ್ಷ ನಾವು ಸಮರ್ಥವಾಗಿ ಆಡಳಿತ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದರು.
Advertisement
Advertisement
ಹೊಂದಾಣಿಕೆ ಇಲ್ಲದಿದ್ದರೆ ಸರ್ಕಾರ ವಿಸರ್ಜನೆ ಮಾಡಿ ಎಂಬ ಬಸವರಾಜ್ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಮುಂಬರುವ ಹೊಸ ಸರ್ಕಾರದ ಬಗ್ಗೆ ಮಾತನಾಡೋಣ. ರಾಜ್ಯದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಬಗ್ಗೆ ಯಾಕೆ ಮಾತು ಎಂದು ಶಾಸಕರು ಇದೇ ವೇಳೆ ಪ್ರಶ್ನಿಸಿದರು.