ಮೈಸೂರು: ಅವರೇ ಓಡಿದ್ರು.. ಅವರೇ ಬಿದ್ರು. ಅವರೇ ದಸರಾ ಮಾಡಿದರು ಎಂದು ಹೇಳುವ ಮೂಲಕ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸಚಿವ ಜಿಟಿ ದೇವೇಗೌಡ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.
ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡ ಹಬ್ಬ ದಸರಾಗೆ ನಮ್ಮಿಂದ ಯಾವುದೇ ಸಮಸ್ಯೆ ಆಗಬಾರದು ಎಂದು ಸುಮ್ಮನೆ ಇದ್ದೆವು. ಇಡೀ ದಸರಾ ಕಾರ್ಯಕ್ರಮದ ಅನೇಕ ಲೋಪದಿಂದ ನಡೆದಿದೆ. ಅವರೇ ಓಡಿದ್ರು.. ಅವರೇ ಬಿದ್ರು.. ಕೊನೆಗೆ ಅವರೇ ದಸರಾ ಮಾಡಿದರು ಎಂದು ಆರೋಪ ಮಾಡಿದರು.
Advertisement
Advertisement
ಈ ಬಾರಿಯ ದಸರಾದಲ್ಲಿ ನಡೆದ್ದು ಕೇವಲ ಲೋಪಗಳಷ್ಟೇ ಉಸ್ತುವಾರಿ ಸಚಿವರ ಕೈ ಗೊಂಬೆಗಳಾಗಿ ಅಧಿಕಾರಿಗಳು ವರ್ತನೆ ಮಾಡಿ ಜನಪ್ರತಿನಿಧಿಗಳನ್ನು ಹೀನಾಯವಾಗಿ ನಡೆಸಲಾಗಿದೆ. ಅಲ್ಲದೇ ಪಾಸ್ ವಿತರಣೆಯಲ್ಲೂ ಜಿಲ್ಲಾ ಆಡಳಿತ ಲೋಪ ಮಾಡಿದೆ. ದಸರಾ ಹಬ್ಬದಲ್ಲಿ ಉಂಟಾದ ಎಲ್ಲಾ ಸಮಸ್ಯೆಗಳ ಕುರಿತು ಉತ್ತರ ನೀಡಬೇಕಿದೆ. ಅದ್ದರಿಂದಲೇ ಈ ಸುದ್ದಿಗೋಷ್ಠಿ ನಡೆಸುತ್ತಿರುವುದಾಗಿ ತಿಳಿಸಿದರು.
Advertisement
ಕಾಂಗ್ರೆಸ್ ಬೆಂಬಲದಿಂದ ಸಮ್ಮಿಶ್ರ ಸರ್ಕಾರ ಬಂದಿದ್ದರೂ ಜಿಲ್ಲಾ ಪಕ್ಷದ ಅಧ್ಯಕ್ಷರಿಗೆ ಕೆಲವೇ ಪಾಸ್ ನೀಡಿದ್ದರು. ಅವುಗಳನ್ನು ವಾಪಸ್ ಕಳುಹಿಸಿದ್ದೇವೆ. ಸಂಜೆ ನಡೆದ ಪಂಜಿನ ಕವಾಯತು ಕಾರ್ಯಕ್ರಮದಲ್ಲೂ ಇದೇ ರೀತಿ ನಡೆದಿದೆ. ವ್ಯವಸ್ಥಿತವಾಗಿ ಜಿಲ್ಲಾ ಆಡಳಿತದ ಮೇಲೆ ಒತ್ತಡ ಹಾಕಿ ಜಿಲ್ಲಾ ಉಸ್ತುವಾರಿ ಸಚಿವರು 10 ಸಾವಿರ, ಸಾರಾ ಮಹೇಶ್ 5 ಸಾವಿರ, ಸಿಎಂ ಕಚೇರಿಗೆ 5 ಸಾವಿರ ಸೇರಿದಂತೆ ಪಾಸ್‍ಗಳ ಮಾರಾಟ ನಡೆಸಿದ್ದಾರೆ. ಇವುಗಳ ಬಗ್ಗೆ ತನಿಖೆ ನಡೆಸಬೇಕು ಆಗ್ರಹಿಸಿದರು. ಇದನ್ನು ಓದಿ: ಪಂಚೆಯಲ್ಲಿಯೇ ಓಡಿ ಬಿದ್ರು ಸಚಿವರು: ವಿಡಿಯೋ
Advertisement
ಸಿದ್ದರಾಮಯ್ಯ ಅವರು ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದ್ದರೂ ಕೂಡ ಉಸ್ತುವಾರಿ ಸಚಿವರು ಅಧಿಕಾರಿಗಳ ಮೇಲು ಕೂಡ ಒತ್ತಡ ಹಾಕಿದ್ದಾರೆ. ಜಿಲ್ಲಾ ಆಡಳಿತ ಕೂಡ ತಮ್ಮ ಕೆಲಸ ಮರೆತು ಕಾರ್ಯನಿರ್ವಹಿಸಿದೆ. ಕಾರ್ಯಕ್ರಮದ ಸಮಯದಲ್ಲೂ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಅಲ್ಲದೇ ದಸರಾಗೆ ಬಂದ ಪ್ರೇಕ್ಷಕರ ಮೇಲೂ ಲಾಠಿ ಚಾರ್ಚ್ ಮಾಡಲಾಗಿದೆ. ಇದು ಅತ್ಯಂತ ಕೆಟ್ಟ ವರ್ತನೆ ಎಂದು ಆರೋಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv