ತುಮಕೂರು: ಲೋಕಸಭಾ ಚುನಾವಣೆಯಲ್ಲಿ (Lok sabha election 2024) ಡಿ.ಕೆ ಸುರೇಶ್ (DK Suresh) ಸೋಲಿಗೆ ಸಿದ್ದರಾಮಯ್ಯ (CM Siddaramaiah) ಹಾಗೂ ಅವರ ಟೀಮ್ ಕಾರಣ ಎಂದು ಬಿಜೆಪಿ (BJP) ಶಾಸಕ ಸುರೇಶ್ ಗೌಡ (Sureshgowda) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರಿಯಬೇಕು ಎಂದು ಅಹಿಂದ ಟೀಮ್ ಯಾವಾಗಲೂ ಕೆಲಸ ಮಾಡುತ್ತಿದೆ. ಆ ಅಹಿಂದ ಟೀಮ್ ಮತ್ತು ಸಿದ್ದರಾಮಯ್ಯ ಸೇರಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ. ಚುನಾವಣೆಗಿಂತ ಮೊದಲೇ ಜಾರಕಿಹೊಳಿ, ಪರಮೇಶ್ವರ್, ರಾಜಣ್ಣ ಹಾಗೂ ಸಿದ್ದರಾಮಯ್ಯ ಇಷ್ಟೂ ಜನ ಸೇರಿ ಡಿ.ಕೆ ಸುರೇಶ್ ಅವರನ್ನು 2 ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಎಂದು ನಾನು ಹೇಳಿದ್ದೆ. ಅದು ಈಗ ನಿಜವಾಗಿದ್ದು, ಅದ್ಕಕಿಂತ ಹೆಚ್ಚಿನ ಅಂತರದಲ್ಲಿ ಅವರು ಸೋತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆಯೂ ಮೋದಿ ಪ್ರಮಾಣವಚನಕ್ಕೆ ಮಾಲ್ಡೀವ್ಸ್ ಅಧ್ಯಕ್ಷರಿಗೆ ಆಹ್ವಾನ
ಡಿ.ಕೆ ಸುರೇಶ್ ಅವರ ಸೋಲು, ಸಂಚಿನ ಒಂದು ಭಾಗವಾಗಿದೆ. ಡಿ.ಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಬಾರದು. ಅವರ ನೈತಿಕತೆ ಕುಸಿಯಬೇಕು ಎಂದು ಹೀಗೆ ಮಾಡಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಆಗಲ್ಲ, ಈ ಸರ್ಕಾರ ಉಳಿಯಲ್ಲ. ಇಲ್ಲಿಂದ ರಾಜಕೀಯ ಧ್ರುವೀಕರಣ ಪ್ರಾರಂಭವಾಗಿ, ಕಾಂಗ್ರೆಸ್‍ನಲ್ಲಿ ಒಳಜಗಳ ಶುರುವಾಗಲಿದೆ. ಈಗಾಗಲೇ ಬೆಳಗಾವಿಯಲ್ಲಿ ಕಿತ್ತಾಟ ಶುರುವಾಗಿದೆ. ಬೆಂಗಳೂರು ಗ್ರಾಮಾಂತರದ ಸೋಲಿನಿಂದ ಇಲ್ಲಿಯೂ ಕೂಡ ಜಗಳ ಶುರುವಾಗಿದೆ. ಇನ್ನೂ ಸರ್ಕಾರ ಪತನವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು