ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕ ನಾರಾಯಣ ಮೂರ್ತಿ ಪತ್ನಿ ಸುಧಾಮೂರ್ತಿಯವರ ದಸರಾ ಉದ್ಘಾಟನೆಗೆ ಅಪಸ್ವರ ಎತ್ತಿದ್ದ ಪ್ರಗತಿಪರ ಚಿಂತಕಿ ಪ್ರಭಾ ಬೆಳವಂಗಲ ಹೇಳಿಕೆಗೆ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದಾರೆ.
ಪ್ರಗತಿಪರ ಚಿಂತಕಿ ಪ್ರಭಾ ಬೆಳವಂಗಲ ಮಾಡಿದ್ದ ಫೇಸ್ಬುಕ್ ಪೋಸ್ಟ್ ಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ ಸುರೇಶ್ ಕುಮಾರ್ ತಮ್ಮ ಟ್ವಿಟ್ವರ್ ಖಾತೆಯಲ್ಲಿ, ಎಲ್ಲರೂ ಒಪ್ಪುವ ಸುಧಾಮೂರ್ತಿಯವರು ದಸರಾ ಉತ್ಸವವನ್ನು ಉದ್ಘಾಟಿಸುತ್ತಿರುವುದನ್ನು, ಯಾರನ್ನೂ ಒಪ್ಪದ “ಬುದ್ದಿವಂತೆ”ಯೊಬ್ಬರು ತಾಳಲಾರದ ಸಂಕಟದಿಂದ ಟೀಕಿಸಿದ್ದಾರೆ. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎಂದು ಬರೆಯುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಎಲ್ಲರೂ ಒಪ್ಪುವ ಸುಧಾಮೂರ್ತಿಯವರು ದಸರಾ ಉತ್ಸವವನ್ನು ಉದ್ಘಾಟಿಸುತ್ತಿರುವುದನ್ನು ಯಾರನ್ನೂ ಒಪ್ಪದ "ಬುದ್ದಿವಂತೆ"ಯೊಬ್ಬರು ತಾಳಲಾರದ ಸಂಕಟದಿಂದ ಟೀಕಿಸಿದ್ದಾರೆ.
ಆಗ ಅನಿಸಿದ್ದು
"ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ"
— S.Suresh Kumar (@nimmasuresh) August 30, 2018
ರಾಜ್ಯ ಸರ್ಕಾರ ಈ ಬಾರಿ ದಸರಾ ಉದ್ಘಾಟನೆಗೆ ಸುಧಾಮೂರ್ತಿಯವರನ್ನು ಆಯ್ಕೆಮಾಡಿದ್ದಕ್ಕೆ ಪ್ರಭಾ ಬೆಳವಂಗಲರವರು ಅಪಸ್ವರ ತೋರಿ ತಮ್ಮ ಫೇಸ್ಬುಕ್ ಖಾತೆಯಲ್ಲಿ “ದುಡ್ಡು ಮಾಡಿ ನಾಜೂಕಿನ ಮಾತು ಕಲಿತುಬಿಟ್ಟರೆ ದಸರಾ ಉದ್ಘಾಟನೆ ಮಾಡಬಹುದೆಂದು” ಪೋಸ್ಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv