ಬೆಂಗಳೂರು: ಅಮಾನತುಗೊಂಡ ಪೊಲೀಸ್ ಇನ್‌ಸ್ಪೆಕ್ಟರನ್ನು ಸಿಐಡಿಗೆ ವರ್ಗಾವಣೆ ಮಾಡಿರುವ ಕ್ರಮವನ್ನು ಪ್ರಶ್ನಿಸಿ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ಗೆ (G.Parameshwara) ಬಿಜೆಪಿ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ವರ್ಗಾವಣೆ ಕುರಿತು ಗೃಹ ಇಲಾಖೆಯ ಕ್ರಮವನ್ನು ಪ್ರಶ್ನಿಸಿರುವ ಶಾಸಕ ಸುರೇಶ್ ಕುಮಾರ್, ಈ ಬಗ್ಗೆ ಸ್ಪಷ್ಟನೆ ಕೇಳಿ ಬರೆದಿದ್ದಾರೆ. ಇದನ್ನೂ ಓದಿ: ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!
- Advertisement -
- Advertisement -
ನಗರ ಪೊಲೀಸ್ ಆಯುಕ್ತರು ಒಂದು ವಿದ್ಯಮಾನದಲ್ಲಿ ಮಂಜುನಾಥ್ ಅವರ ವಿಚಾರಣೆ ನಡೆಸಿದ ನಂತರ ಅಮಾನತು ಮಾಡಿದ್ದಾರೆ. ಈ ಮಾಹಿತಿ ಮಾಧ್ಯಮದ ಮೂಲಕ ನನಗೆ ತಿಳಿಯಿತು. ಅದೇ ಸುದ್ದಿಯಲ್ಲಿ ಮತ್ತೊಂದು ಅಚ್ಚರಿಯ ಮಾಹಿತಿಯನ್ನೂ ಓದಿದೆ. ಅಮಾನತುಗೊಂಡ ಆ ಪೊಲೀಸ್ ಇನ್‌ಸ್ಪೆಕ್ಟರನ್ನು ಅದರ ಬೆನ್ನಲ್ಲೇ ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದರಿಂದ ನನ್ನಲ್ಲಿ ಕೆಲವು ಪ್ರಶ್ನೆಗಳು ಉದ್ಭವವಾಗಿವೆ ಎಂದು ಪತ್ರದಲ್ಲಿ ಬರೆದಿದ್ದಾರೆ.
- Advertisement -
- Advertisement -
ಆ ಪೊಲೀಸ್ ಇನ್‌ಸ್ಪೆಕ್ಟರನ್ನು ಆಯುಕ್ತರು ಅಮಾನತು ಮಾಡಿದ ಆದೇಶ ಇಂದು ಯಾವ ಸ್ಥಿತಿಯಲ್ಲಿದೆ? ಅಮಾನತುಗೊಂಡ ಹಿಂದೆಯೇ ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿಸಿರುವ ಹಿಂದಿನ ಶಕ್ತಿ ಯಾವುದು? ಆ ಪೊಲೀಸ್ ಅಧಿಕಾರಿಯನ್ನು ಕರ್ತವ್ಯಲೋಪದ ಕಾರಣ ಅಮಾನತು ಮಾಡಿದ ಪೊಲೀಸ್ ಆಯುಕ್ತರಿಗೆ ಇದರಿಂದ ನೈತಿಕ ಬಲ ಕುಸಿದಂತೆ ಆಗಿಲ್ಲವೇ? ಸಿಐಡಿ ಎಂದರೆ ಇಂತಹ ಕರ್ತವ್ಯಲೋಪ ಎಸಗಿರುವವರನ್ನು, ಅದಕ್ಷತೆ ತೋರಿಸುವವರನ್ನು, ಭ್ರಷ್ಟಾಚಾರ ಪ್ರಕರಣ ಎದುರಿಸುವವರನ್ನು ವರ್ಗಾವಣೆ ಮಾಡುವ ಒಂದು ಕೇಂದ್ರವೇ? ಪೊಲೀಸ್ ಇಲಾಖೆಯಲ್ಲಿ ಸಿಐಡಿ ವಿಭಾಗಕ್ಕೆ ಯಾವುದೇ ಮಹತ್ವ ಇಲ್ಲವೇ? ತಾವು ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ಸಾವಿರ ರೂ. ಸಾಲ ಮರುಪಾವತಿಸದ್ದಕ್ಕೆ ವ್ಯಕ್ತಿಯ ಬೆತ್ತಲೆ ಮೆರವಣಿಗೆ!
Web Stories