ದತ್ತಾತ್ರೇಯ ಗೋತ್ರದ ರಾಹುಲ್ ದತ್ತಜಯಂತಿಗೆ ಬರಲಿ- ಸುನೀಲ್ ಕುಮಾರ್ ಟಾಂಗ್

Public TV
1 Min Read
SUNIL KUMAR RAHUL GANDHI

ಉಡುಪಿ: ತನ್ನದು ದತ್ತಾತ್ರೇಯ ಗೋತ್ರ ಎಂದು ಘೋಷಿಸಿಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.

ವಿಧಾನಸಭಾ ವಿಪಕ್ಷ ಮುಖ್ಯ ಸಚೇತರ ಸುನೀಲ್ ಕುಮಾರ್ ತಮ್ಮ ಟ್ವೀಟ್ ನಲ್ಲಿ ಮಾತನಾಡಿ, ಡಿಸೆಂಬರ್ 22 ಚಿಕ್ಕಮಗಳೂರು ದತ್ತಪೀಠದಲ್ಲಿ ದತ್ತ ಜಯಂತಿ ಉತ್ಸವ ನಡೆಯಲಿದೆ. ಚಿಕ್ಕಮಗಳೂರಿನ ದತ್ತಪೀಠಕ್ಕೆ ನೀವು ಬನ್ನಿ. ನಲ್ವತ್ತು ವರ್ಷಗಳ ಬಳಿಕ ನಿಮ್ಮ ಗೋತ್ರದ ಬಗ್ಗೆ ಘೋಷಣೆಯಾಗಿದೆ. ನಿಮ್ಮದು ದತ್ತಾತ್ರೇಯ ಗೋತ್ರವಾಗಿರುವುದರಿಂದ ನೀವು ದತ್ತಪೀಠಕ್ಕೆ ಬರಲೇಬೇಕೆಂದು ವಿಡಿಯೋ ಮಾಡಿ ಕಾಲೆಳೆದಿದ್ದಾರೆ.

ಇದಲ್ಲದೇ ದತ್ತ ಜಯಂತಿಯಲ್ಲಿ ನೀವು ನಮ್ಮ ಜೊತೆ ಪಾಲ್ಗೊಳ್ಳಬೇಕು. ದತ್ತ ಪೀಠದ ಸಮಸ್ಯೆಯ ಆಲಿಸಿ, ಸಾಧ್ಯವಾದರೆ ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಿ. ದತ್ತ ಜಯಂತಿಯಲ್ಲಿ ನಮ್ಮ ಜೊತೆ ಪಾಲ್ಗೊಳ್ಳಿ ಎಂದು ಆಹ್ವಾನ ಮಾಡಿದ್ದಾರೆ.

758956 rahul gandhi at savitri ghat in pushkar

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *