ಉಡುಪಿ: ಜಿಲ್ಲೆಯ ಮರವಂತೆಯಲ್ಲಿ ಬೋರ್‌ವೆಲ್‌ಗೆ ಬಿದ್ದ ರೋಹಿತ್ ಖಾರ್ವಿ ರಕ್ಷಣೆ ಮಾಡಿದ ತಂಡಕ್ಕೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.
ಮರವಂತೆಯ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ 25 ಸಾವಿರ ನಗದು ನೀಡಿ, ಮರವಂತೆಯಲ್ಲೇ ಸನ್ಮಾನ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಮೊತ್ತ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬೋರ್‌ವೆಲ್ ಪಕ್ಕ ಭೂಕುಸಿತ – 6 ಗಂಟೆ ಹೋರಾಡಿ ಸಾವನ್ನೇ ಗೆದ್ದ ಯುವಕ
Advertisement
Advertisement
ಯುವಕ ರೋಹಿತ್ ಖಾರ್ವಿಗೆ ಯಾವುದೇ ಗಾಯವಾಗದಂತೆ ರಕ್ಷಣೆಯಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಎಲ್ಲರಿಗೂ ಶಕ್ತಿ ಕೊಟ್ಟಳು. ಅಗ್ನಿಶಾಮಕ, ಜಿಲ್ಲಾಡಳಿತ ಕಾರ್ಯ ಯಶಸ್ವಿಯಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರು, ಮಾಧ್ಯಮಗಳು ನಿರಂತರ ಕೆಲಸ ಮಾಡಿವೆ. ಅವರೆಲ್ಲರಿಗೂ ಅಭಿನಂದನೆ ಎಂದು ಹೇಳಿದರು.
Advertisement
Advertisement
ಬೆಂಗಳೂರಿನಲ್ಲಿ ವಿಧಾನಸಭಾ ಕಲಾಪದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಕಾರಣ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರು, ಭಜನಾ ಮಂಡಳಿಗಳು ಸಹಕಾರ ನೀಡಿವೆ. ಎಲ್ಲರಿಗೂ ಧನ್ಯವಾದ ಎಂದು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದರು. ಇದನ್ನೂ ಓದಿ: ಬೋರ್‌ವೆಲ್ ಪಕ್ಕ ಭೂಕುಸಿತ- ಕುತ್ತಿಗೆವರೆಗೆ ಹೂತ ಯುವಕ