ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಯಾವುದೇ ಹುರುಳಿಲ್ಲ. 2006 ರಿಂದ ಇದೇ ರೀತಿಯ ಬ್ಲಾಕ್ ಮೇಲ್ ರಾಜಕೀಯ ಮಾಡ್ತಿದ್ದಾರೆ. ಸಿಎಂ ಬರೀ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ಅವರು ರಾಜೀನಾಮೆ ಕೊಟ್ಟು ನಂತರ ಯಾವುದೇ ರೀತಿಯ ತನಿಖೆಗೆ ಕೊಡಲಿ ಎಂದು ಶಾಸಕ ಶ್ರೀರಾಮುಲು ಆಗ್ರಹಿಸಿದ್ದಾರೆ.
Advertisement
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಅವರು, ತನಿಖೆಯನ್ನ ಎಸ್ ಐಟಿಗೆ ಕೊಟ್ಟಿರೋದನ್ನ ಬಿಜೆಪಿ ಖಂಡಿಸುತ್ತದೆ. ಕುಮಾರಸ್ವಾಮಿ ಅವರು ರಾಜೀನಾಮೆ ಕೊಡಲಿ. ನಂತರ ಯಾವುದೇ ರೀತಿಯ ತನಿಖೆ ಮಾಡಿಸಲಿ. ರಾಮಕೃಷ್ಣ ಹೆಗಡೆಯವರು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದರು. ಅದೇ ರೀತಿ ಇವರು ಕೂಡ ರಾಜೀನಾಮೆ ಕೊಟ್ಟು ತನಿಖೆ ನಡೆಸಲಿ. ಇಂದು ಕೂಡ ನಾವು ಹೋರಾಟ ಮಾಡುತ್ತೇವೆ. ಎಸ್‍ಐಟಿ ತನಿಖೆ ಬೇಡ. ಅದರ ಬದಲು ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಅವರು ಹೇಳಿದ್ರು.
Advertisement
ಎಸ್‍ಐಟಿ ಕೈ ಕೆಳಗೆ ತನಿಖೆ ನಡೆದರೆ ನ್ಯಾಯ ಸಿಗಲ್ಲ. ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹಾಗಾಗಿ ಸಿಎಂ ಸಿಡಿ ಬಾಂಬ್ ವಿಚಾರ ಎಸ್ ಐಟಿ ಮುಖಾಂತರ ಮಾಡಬಾರದು. ಎಚ್.ಡಿ.ಕುಮಾರಸ್ವಾಮಿ ಅಡಿಯಲ್ಲೇ ಎಸ್‍ಐಟಿ ಕೆಲಸ ಮಾಡುತ್ತದೆ. ಹಾಗಾಗಿ ಈ ಬಗ್ಗೆ ಬಿಜೆಪಿ ವಿರೋಧವಿದೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv